More

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ನವದೆಹಲಿ: ಭಟಿಂಡಾ ಏರ್​ಪೋರ್ಟ್​ಗೆ ನಾನು ಜೀವಂತವಾಗಿ ಬದುಕಿ ಬಂದೆ. ನಾನು ಬದುಕಿ ಬರಲು ಸಹಕರಿಸಿದ ಪಂಜಾಬ್​ ಸಿಎಂಗೆ ನನ್ನ ಧನ್ಯವಾದ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಚನ್ನಿಗೆ ಟಾಂಗ್​ ಕೊಟ್ಟಿದ್ದಾರೆ.

    ಪಂಜಾಬ್​ಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಪರಿಣಾಮ ಫಿರೋಜ್​ಪುರ ಫ್ಲೈಓವರ್​ನಲ್ಲಿ 20 ನಿಮಿಷ ಟ್ರಾಫಿಕ್​ನಲ್ಲಿ ಸಿಲುಕಿದ್ದ ಪ್ರಧಾನಿ, ಅಲ್ಲಿಂದ ವಾಪಸ್​ ಆಗಿದ್ದು, ಫಿರೋಜ್​ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ರದ್ದಾಗಿದೆ. ಈ ಭದ್ರತಾ ವೈಫಲ್ಯ ಕುರಿತು ಭಟಿಂಡಾ ಏರ್​ಪೋರ್ಟ್​ನ ಅಧಿಕಾರಿಗಳಿಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ, ನನ್ನನ್ನು ಜೀವಂತವಾಗಿ ಕಳಿಸಿದ್ದಕ್ಕೆ ಪಂಜಾಬ್​ ಸಿಎಂಗೆ ಧನ್ಯವಾದ ತಿಳಿಸಿ ಎಂದಿದ್ದಾರೆ.

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    42,750 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ಪಂಜಾಬ್‌ಗೆ ಆಗಮಿಸಿದ್ದರು. ಫಿರೋಜ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಮಾರ್ಗದಲ್ಲೇ ಟ್ರಾಫಿಕ್​ ಉಂಟಾಗಿತ್ತು. ಅಷ್ಟೇ ಅಲ್ಲ ಪೊಲೀಸ್​ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ರ‍್ಯಾಲಿ ತಡೆಯಲು ಉದ್ದೇಶಪೂರ್ವಕವಾಗಿಯೇ ಪಂಜಾಬ್​ ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಪಂಜಾಬ್ ಸಿಎಂ ಚರಣ್​​ಜಿತ್ ಚನ್ನಿ, ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನ ಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಆದರೆ, ಅವರು ರಸ್ತೆಯಲ್ಲಿ ಸಂಚರಿಸುವ ಯೋಜನೆ ಕೊನೇ ಕ್ಷಣದಲ್ಲಿ ಆಗಿತ್ತು. ಅವರ ರ‍್ಯಾಲಿಗಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಲು ನಿನ್ನೆ ತಡರಾತ್ರಿವರೆಗೂ ನಾನು ಅಲ್ಲೇ ಇದ್ದೆ. ವೇದಿಕೆ ಕಾರ್ಯಕ್ರಮದಲ್ಲಿ 70,000 ಕುರ್ಚಿ ಹಾಕಲಾಗಿತ್ತು. ಆದರೆ, ಅಲ್ಲಿ ಜನ ಬಂದದ್ದು ಮಾತ್ರ 700. ಖಾಲಿ ಕುರ್ಚಿಗಳನ್ನು ನೋಡಿ ಪ್ರಧಾನಿ ಅವರು ವಾಪಸ್​ ಹೋಗಿದ್ದಾರೆ ಅಷ್ಟೆ’ ಎಂದು ಟೀಕಿಸಿದ್ದಾರೆ.

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಬಿಜೆಪಿ ರ‍್ಯಾಲಿಗೆ ಜನರು ಬರುವುದನ್ನು ತಡೆಯುವಂತೆ ಪಂಜಾಬ್​ ಸರ್ಕಾರ, ರಾಜ್ಯ ಪೊಲೀಸರಿಗೆ ಸೂಚನೆ ನೀಡಿತ್ತು. ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಮಾರ್ಗದಲ್ಲಿ ಟ್ರಾಫಿಕ್​ಜಾಮ್​ ಉಂಟಾಗಿತ್ತು. ಇದೆಲ್ಲವೂ ಪೂರ್ವ ನಿಯೋಜಿತ. ಸಮಸ್ಯೆ ಬಗೆಹರಿಸುವಂತೆ ಕರೆ ಮಾಡಿದರೂ ಸಿಎಂ ಚನ್ನಿ ಕರೆ ಸ್ವೀಕರಿಸದೆ ನಿರಾಕರಿಸಿದರು ಜೆ.ಪಿ.ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ. ಅತ್ತ ಪಂಜಾಬ್​ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿಯೂ ಆಕ್ರೋಶ ಹೊರಹಾಕಿದೆ.

    ಪ್ರಧಾನಿಗೆ ಭದ್ರತೆ ಕಲ್ಪಿಸುವಲ್ಲಿ ಪಂಜಾಬ್​ ಸರ್ಕಾರ ವಿಫಲ: ಬಿಜೆಪಿ ರ‍್ಯಾಲಿ ರದ್ದು, ದೆಹಲಿಗೆ ವಾಪಸ್​ ತೆರಳಿದ ಮೋದಿ

    ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts