More

    ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್​ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್​

    ಚಿಕ್ಕಮಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಧು-ವರರಿಗೆ ಉಡುಗೊರೆಯಾಗಿ ಏನೆಲ್ಲಾ ಕೊಡಬಹುದು? ಪೆಟ್ರೋಲ್​!ಆಶ್ಚರ್ಯ ಬೇಡ, ಇಂಧನ ಬೆಲೆ ಗಗನಕ್ಕೇರುತ್ತಿರುವ ಪರಿಣಾಮ ಇದು ಈಗಿನ ಟ್ರೆಂಟ್​ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

    ಇದಕ್ಕೆ ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್​ ಮರ್ಕಲ್​ ಮತ್ತು ವೈಷ್ಣವಿ ಅವರ ಮದುವೆಯೇ ಸಾಕ್ಷಿ. ಮುಹೂರ್ತ ಮುಗಿದ ಬಳಿಕ ರಿಸೆಪ್ಷನ್​ಗೆ ನಿಂತಿದ್ದ ನವದಂಪತಿಗೆ ಸಚಿನ್​ರ ಮೂವರು ಸ್ನೇಹಿತರು ತಲಾ ಒಂದು ಲೀಟರ್​ ಪೆಟ್ರೋಲ್​ ಇದ್ದ ಬಾಟಲಿಯನ್ನ ವಧು-ವರರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪೆಟ್ರೋಲ್ ಹಿಡಿದು ವೇದಿಕೆಗೆ ಬಂದ ಸ್ನೇಹಿತರನ್ನ ಕಂಡು ಅರೆಕ್ಷಣ ನವದಂಪತಿ ಹಾಗೂ ಅಲ್ಲಿ ನೆರೆದಿದ್ದ ಸಂಬಂಧಿಕರು ಶಾಕ್​ ಆಗಿದ್ದರು.

    ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್​ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್​

    ನಿಮ್ಮಿಬ್ಬರ ಮದುವೆಗೆ ನಮ್ಮ ಕಡೆಯಿಂದ ಈ ಗಿಫ್ಟ್​ ಎಂದು ಸ್ನೇಹಿತರು ಹೇಳುತ್ತಿದ್ದಂತೆ ನವದಂಪತಿ ನುಸುನಕ್ಕರು. ಪೆಟ್ರೋಲ್​ ರೇಟ್​ ದುಬಾರಿ ಆಗಿದೆ. ಅದಕ್ಕೆ ಇದನ್ನ ಕೊಡ್ತಿದ್ದಾರೆ. ಈರುಳ್ಳಿ ದರ ಹೆಚ್ಚಾದಗಲೂ ವಧು-ವರರಿಗೆ ಅದೆಲ್ಲೋ ಈರುಳ್ಳಿಯನ್ನ ಗಿಫ್ಟ್​ ಆಗಿ ಕೊಟ್ಟಿದ್ದರಂತೆ. ಅಡುಗೆ ಸಿಂಡರ್​ ಅನ್ನೂ ಉಡುಗೊರೆ ತರ ಕೊಟ್ಟು ಕೇಂದ್ರ ಸರ್ಕಾರವನ್ನ ಅಣಕಿಸುತ್ತಿದ್ದಾರೆ ಎಂದು ನೆರೆದಿದ್ದ ಜನ ಮಾತನಾಡಿಕೊಂಡರು. ಪೆಟ್ರೋಲ್​ ಅನ್ನು ಉಡುಗೊರೆಯಾಗಿ ಕೊಟ್ಟ ದೃಶ್ಯ ಸಖತ್​ ವೈರಲ್​ ಆಗಿದೆ.

    ಸರ್ವರೂ ಎಚ್ಚರದಿಂದ ಇರಬೇಕು… ಇಂದು ಬೆಳ್ಳಂಬೆಳಗ್ಗೆ ಕಾರ್ಣಿಕ ನುಡಿದ ಮೈಲಾರಸ್ವಾಮಿ

    ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts