More

    ರೈತ ಶೇಖಪ್ಪನ ವಿಶಿಷ್ಟ ಸಾಹಸ

    ರೋಣ: 350 ಕಿಲೋ ಭಾರದ ಚಕ್ಕಡಿಯ ನೊಗಕ್ಕೆ ಹೆಗಲುಕೊಟ್ಟ ಯುವಕನೊಬ್ಬ 13 ಗಂಟೆಯಲ್ಲಿ ಬರೋಬ್ಬರಿ 80 ಕಿಲೋ ಮೀಟರ್ ದೂರ ಕ್ರಮಿಸಿ ತನ್ನ ಶಕ್ತಿ ಪ್ರದರ್ಶಿಸಿದ್ದಾನೆ.

    ಪಟ್ಟಣದ ನಿವಾಸಿ ಶೇಖಪ್ಪ ನವಲಗುಂದ ವಿಶಿಷ್ಟ ಸಾಹಸ ಮಾಡಿ ಗ್ರಾಮಸ್ಥರಿಂದ ಭೇಷ್ ಎನಿಸಿಕೊಂಡಿದ್ದಾರೆ. ರೋಣ ಪಟ್ಟಣದಿಂದ ಶ್ರೀಕ್ಷೇತ್ರ ಸವದತ್ತಿಯ ಯಲ್ಲಮ್ಮನ ಗುಡ್ಡದವರೆಗೆ ಬರಿಗಾಲಿನಲ್ಲಿ ಸಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬುಧವಾರ ಬೆಳಗಿನ ಜಾವ 1 ಗಂಟೆಗೆ ರೋಣ ಪಟ್ಟಣದಿಂದ ಮಲ್ಲಾಪೂರ, ಬೆಳವಣಿಕಿ, ಯಾವಗಲ್, ನರಗುಂದ, ಉಗರಗೋಳ ಮಾರ್ಗವಾಗಿ ಸಾಗಿ ಮಧ್ಯಾಹ್ನ 2 ಗಂಟೆಗೆ ಸವದತ್ತಿ ಯಲ್ಲಮ್ಮನ ಗುಡ್ಡ ತಲುಪಿದ್ದಾರೆ. ದಾರಿಯುದ್ದಕ್ಕೂ ರೈತರು ಶೇಖಪ್ಪನ ಸಾಹಸ ಕಂಡು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಮರಳಿ ಪಟ್ಟಣಕ್ಕೆ ಬಂದ ಶೇಖಪ್ಪನಿಗೆ ಗ್ರಾಮಸ್ಥರು ಹೂವಿನ ಹಾರ ಹಾಕಿ ಬೃಹತ್ ಮೆರವಣಿಗೆ ಮಾಡಿ ಮನೆಗೆ ತಲುಪಿಸಿದರು.

    ಪಟ್ಟಣದ ಯುವಕರ ಸಾಹಸ

    ಯುವಕರು ವಿಶಿಷ್ಟ ಸಾಹಸಮಯ ಕಾರ್ಯಗಳ ಮೂಲಕ ತಮ್ಮ ತಾಕತ್ತು ಪ್ರದರ್ಶನ ಮಾಡುತ್ತಿದ್ದಾರೆ. ಈ ಹಿಂದೆ ಪಟ್ಟಣದ ಯುವಕ ಮಹಾಂತೇಶ ಆರ್ಯರ ಎಂಬುವವರು ಯಾರ ಸಹಾಯವಿಲ್ಲದೇ 151 ಜೋಳದ ಚೀಲಗಳನ್ನು ನಿಟ್ಟು ಹಚ್ಚಿದ್ದರು. ಮಹೇಶ ಕಳಸಣ್ಣವರ ಎನ್ನುವ ಯುವಕ ಇಪ್ಪತ್ತು ಮರಳು ಚೀಲವನ್ನು ಎತ್ತಿನ ಚಕ್ಕಡಿಯಲ್ಲಿ ಹೇರಿಕೊಂಡು 2 ಕಿ.ಮೀ ಸಾಗಿದ್ದನು.

    ಏನಾದರೊಂದು ವಿಶೇಷ ಸಾಹಸಮಯ ಕೆಲಸ ಮಾಡಬೇಕು ಎನ್ನುವ ಯುವಕರ ಗುಂಪು ರೋಣ ಪಟ್ಟಣದಲ್ಲಿದೆ. ಇಂಥವರೇ ನನಗೆ ಸ್ಪೂರ್ತಿಯಾಗಿದ್ದಾರೆ. ನಮ್ಮ ಕುಟುಂಬದವರೆಲ್ಲರೂ ಚಕ್ಕಡಿಯಲ್ಲಿ ಪ್ರತಿವರ್ಷ ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತೇವೆ. ಮಹಿಳೆಯರು ಗಾಡಿಯಲ್ಲಿ ಕುಳಿತರೆ ನಾವು ಚಕ್ಕಡಿ ಜತೆಗೆ ನಡೆದುಕೊಂಡು ಹೋಗುತ್ತೇವೆ. ಆಗ ಚಕ್ಕಡಿಯನ್ನು ನಾನೇ ಗುಡ್ಡದವರೆಗೆ ಎಳೆದುಕೊಂಡು ಹೋಗಬೇಕು ಎನ್ನುವ ಛಲ ನನ್ನಲ್ಲಿ ಮೂಡಿತ್ತು. ಹೀಗಾಗಿ ಅದಕ್ಕೆ ಅಗತ್ಯ ತಯಾರಿ ಮಾಡಿಕೊಂಡು 13 ತಾಸಿನೊಳಗೆ ರೋಣದಿಂದ ಯಲ್ಲಮ್ಮನ ಗುಡ್ಡದವರೆಗೆ ಚಕ್ಕಡಿ ಎಳೆದುಕೊಂಡು ಹೋಗಿದ್ದೇನೆ.

    | ಶೇಖಪ್ಪ ನವಲಗುಂದ, ಚಕ್ಕಡಿ ಎಳೆದವರು

    ಇಂದಿಗೂ ರೋಣ ಪಟ್ಟಣದಲ್ಲಿ ಸಾಕಷ್ಟು ಯುವಕರು ಕಲ್ಲುಗಳನ್ನು ಎತ್ತುವುದು ಸೇರಿದಂತೆ ಕಡಿಮೆ ಅವಧಿಯಲ್ಲಿ ನೇಗಿಲ, ಗಳೆ ಹೊಡೆಯುವುದು, ಬಿತ್ತುವುದು ಇತ್ಯಾದಿ ಕಾರ್ಯಗಳನ್ನು ಕೈಗೊಂಡು ಸೈ ಎನಿಸಿಕೊಂಡಿದ್ದಾರೆ. ಇಂತಹ ಪ್ರತಿಭೆಗಳು ಪಟ್ಟಣಕ್ಕೆ ಸೀಮಿತಗೊಳ್ಳದೇ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚುವಂತಾಗಬೇಕು.

    | ಮಲ್ಲಯ್ಯ ಮಹಾಪುರುಷಮಠ, ರೋಣ ಪುರಸಭೆ ಸದಸ್ಯ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts