More

    ಕರೊನಾ ಹಿನ್ನೆಲೆ ದೇವರ ಉತ್ಸವ ಮಾಡಲ್ಲ ಎಂದ ಅರ್ಚಕನ ಕುಟುಂಬದ ಮೇಲೆ ಹಲ್ಲೆ, ಕುಡಿವ ನೀರು ಬಂದ್​

    ಹಾಸನ: ಕರೊನಾ ಹಿನ್ನೆಲೆ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಭಕ್ತರ ಪ್ರವೇಶ, ವಿಶೇಷ ಪೂಜೆಗಳನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇವರ ಉತ್ಸವ ಮಾಡಲು ಹಿಂದೇಟು ಹಾಕಿದ ಅರ್ಚಕ ಮತ್ತು ಆತನ ಕುಟುಂಬದ ಮೇಲೆ ಗ್ರಾಮದ ಕೆಲವರು ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.

    ಹಾಸನ ಜಿಲ್ಲೆ ಕಬ್ಬತ್ತಿ ಗ್ರಾಮದ ಅರ್ಚಕ ಶ್ರೀಕಾಂತ್ ಮತ್ತು ಇವರ ತಾಯಿ ಶಾಂತಮ್ಮ ಹಲ್ಲೆಗೊಳಗಾದವರು. ಗ್ರಾಮದ ಕುಟುಂಬವೊಂದರ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ರಂಗನಾಥಸ್ವಾಮಿ ದೇವರ ಮೆರವಣಿಗೆ ಮಾಡುವಂತೆ ಅರ್ಚಕ ಶ್ರೀಕಾಂತ್​ ಅವರನ್ನು ಗ್ರಾಮದ ದೇವೇಗೌಡ, ಆನಂದ್, ನಾಗಣ್ಣ, ಶ್ರೀನಿವಾಸಚಾರ್ ಮತ್ತು ಮಹೀಂದ್ರ ಅವರು ಕೇಳಿಕೊಂಡಿದ್ದಾರೆ.

    ಜನತಾ ಕರ್ಫ್ಯೂ ಹಿನ್ನೆಲೆ ದೇವಸ್ಥಾನ ಬಂದ್ ಮಾಡಿದ್ದು, ಇಂತಹ ಸಮಯದಲ್ಲಿ ದೇವರ ಉತ್ಸವ ಮಾಡಲು ಆಗಲ್ಲ ಎಂದು ಶ್ರೀಕಾಂತ್​ ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ಮಾತಿನ ಚಕಮಕಿಯೂ ನಡೆದಿದೆ. ಆದರೂ ದೇವರ ಉತ್ಸವ ಮಾಡಲು ಶ್ರೀಕಾಂತ್ ನಿರಾಕರಿಸಿದ್ದು, ಗ್ರಾಮದ ಕೆಲವರ ಸಿಟ್ಟಿಗೆ ಕಾರಣವಾಗಿತ್ತು.

    ಕರೊನಾ ಹಿನ್ನೆಲೆ ದೇವರ ಉತ್ಸವ ಮಾಡಲ್ಲ ಎಂದ ಅರ್ಚಕನ ಕುಟುಂಬದ ಮೇಲೆ ಹಲ್ಲೆ, ಕುಡಿವ ನೀರು ಬಂದ್​ಬುಧವಾರ ಬೆಳಗ್ಗೆ ಎಂದಿನಂತೆ ಶ್ರೀಕಾಂತ್ ಕುಟುಂಬ ಡೇರಿಗೆ ಹಾಲು ಹಾಕಲು ಹೋದಾಗ ಗ್ರಾಮದ ದೇವೇಗೌಡ, ಆನಂದ್, ನಾಗಣ್ಣ, ಶ್ರೀನಿವಾಸಚಾರ್ ಮತ್ತು ಮಹೀಂದ್ರ ಎಂಬುವವರು ಗಲಾಟೆ ಮಾಡಿದ್ದಾರೆ. ಪೂಜೆ ಮಾಡಿ ಕೊಡದ ನಿಮ್ಮ ಮನೆಯ ಹಾಲನ್ನು ನಾವು ಪಡೆಯುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಈ ಗಲಾಟೆಯ ದೃಶ್ಯವನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಲು ಹೋದ ಶ್ರೀಕಾಂತ್​ರ ಮೊಬೈಲ್ ಅನ್ನು ಅಲ್ಲಿದ್ದ ಕೆಲವರು ಕಿತ್ತುಕೊಂಡು ಪುಡಿ ಮಾಡಿದ್ದಾರೆ. ಶ್ರೀಕಾಂತ್​ ಮತ್ತು ಇವರ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಗಾಯಗೊಂಡಿರುವ ತಾಯಿ-ಮಗ ಇಬ್ಬರೂ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಗ್ರಾಮದ ಯಾರೊಬ್ಬರೂ ಸಹಾಯ ಮಾಡದಂತೆ ಹಲ್ಲೆ ಮಾಡಿದ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಮ್ಮ ಮನೆಗೆ ಕುಡಿವ ನೀರು ಬರದಂತೆ ಬಂದ್​ ಮಾಡಿಸಿದ್ದಾರೆ ಎಂದು ಅರ್ಚಕನ ಕುಟುಂಬ ಆರೋಪಿಸಿದೆ. ಕೋವಿಡ್​ ನಿಯಮ ಪಾಲಿಸಿದ್ದೇ ನಮ್ಮ ತಪ್ಪಾ? ನಮ್ಮ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಅರ್ಚಕ ಕುಟುಂಬ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ.

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts