More

    ನಿರ್ಮಾಪಕರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ …

    ಬೆಂಗಳೂರು: ಒಂದು ಚಿತ್ರದ ಚಿತ್ರೀಕರಣ ಮಾಡುವುದಕ್ಕೆ ನೂರೆಂಟು ಅನುಮತಿಗಳು ಬೇಕು, ಹಲವು ಆಫೀಸುಗಳನ್ನು ಸುತ್ತಬೇಕು. ಇಂಥಾ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಅರ್ಗಸ್ ಎಂಟರ್‌ಟೈನ್‌ಮೆಂಟ್ ಎನ್ನುವ ಸಂಸ್ಥೆ ಹುಡುಕಿದೆ. ಸಿನಿಮಾ ಮಾಡಲು ಹೊರಡುವ ಯಾವುದೇ ನಿರ‍್ಮಾಪಕರು ಈ ಸಂಸ್ಥೆಯನ್ನು ಸಂಪರ್ಕಿಸಿದರೆ ಸಾಕು, ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ‌ಒದಗಿಸಿಕೊಡುತ್ತದೆ.

    ಇದನ್ನೂ ಓದಿ: ಜೀ5ನಲ್ಲಿ ರಶ್ಮಿ ರಾಕೆಟ್ … ಒಟಿಟಿಯಲ್ಲಿ ತಾಪ್ಸಿ ಹ್ಯಾಟ್ರಿಕ್

    ಆರ್ಗಸ್ ಎಂಟರ್ ಟೈನ್ಮೆಂಟ್ ಸಂಸ್ಥೆಯು ಜೈಪುರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು. ಇದರ ಬೆಂಗಳೂರು ವಿಭಾಗದ ಉದ್ಘಾಟನೆ ಇತ್ತೀಚೆಗೆ ನಡೆದಿದೆ. ಕರ್ನಾಟಕ‌ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕ ಕೆ. ಮಂಜು, ನಿರ್ದೇಶಕ ನಾಗಣ್ಣ ಸೇರಿದಂತೆ ಚಿತ್ರೋದ್ಯಮದ ಹಲವರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಸಂಸ್ಥೆ ಕನ್ನಡ ಚಿತ್ರೋದ್ಯಮಕ್ಕೆ ಯಾವ ರೀತಿ ಸಹಕಾರಿಯಾಗಿ ನಿಲ್ಲಬಲ್ಲದು ಎಂಬ ಬಗ್ಗೆ ಮಾತನಾಡಿದರು.

    ನಮ್ಮ ನಿರ‍್ಮಾಪಕರಿಗೆ ಅನುಕೂಲಕರವಾಗುವ ಹಾಗೆ ವ್ಯವಸ್ಥೆ ಮಾಡಿಕೊಡಿ ಎಂದು ಸಾ. ರಾ. ಗೋವಿಂದು, ‘ನಮ್ಮ ಚಿತ್ರರಂಗ ಈಗಾಗಲೇ ತುಂಬಾ ಕಷ್ಟದಲ್ಲಿದೆ. ವಿದೇಶದಲ್ಲಿ ಶೂಟ್ ಮಾಡುವಾಗ ಅವರು ಹೇಳಿದ್ದೇ ರೇಟ್ ಆಗಿರುತ್ತದೆ, ಈಗ ನೀವು ಇದೆಲ್ಲ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ ಎಂದು ಮುಂದೆ ಬಂದಿದ್ದೀರಿ. ಈ ಹಿಂದೆ ನಾವು‌‌‌‌‌‌‌ ಎಲ್ಲಾ ವ್ಯವಸ್ಥೆಗಳನ್ನೂ ಒಂದೇ ಸೂರಿನಡಿ ಆಗುವಂತೆ ಮಾಡಿಕೊಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. , ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ, ನಿಮ್ಮಿಂದ ಚಿತ್ರರಂಗಕ್ಕೆ ಉಪಯೋಗವಾಗಲಿ’ ಎಂದು ಹೇಳಿದರು.
    ಯಾವ್ಯಾವ ವ್ಯವಸ್ಥೆಗೆ ಏನೇನು ದರ ನಿಗದಿ ಮಾಡಿದ್ದೀರಿ ಅಂತ ಮೊದಲೇ ತಿಳಿಸಿ ಎಂದ ಮಂಡಳಿಯ ಅಧ್ಯಕ್ಷ ಜೈರಾಜ್, ‘ಈ ಸಂಬಂಧ ನಾವು ನಮ್ಮ ನಿರ್ಮಾಕರ ಜೊತೆ ಚರ್ಚೆ ಮಾಡಿ ನಿಮಗೆ ತಿಳಿಸುತ್ತೇವೆ’ ಎಂದರು.

    ಇದನ್ನೂ ಓದಿ: ಆರ್‌ಸಿಬಿಗೆ ವಸಿಷ್ಠ ಜೈ … ‘ಆರ್‌ಸಿ ಬ್ರದರ್ಸ್‌’ತಂಡದಿಂದ ಹಾಡಿನ ಗಿಫ್ಟ್​

    ಆರ್ಗಸ್​ ಸಂಸ್ಥೆಯ ಸಂಸ್ಥಾಪಕರಾದ ಸುದಿಪೋ ಚಟರ್ಜಿ, ಸಹ ಸ್ಥಾಪಕರಾದ ಜೈರಾಜ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕರಾದ ಖುಷಿರಾಜ ಸಿಂಗ್ ಶೇಖಾವತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂಸ್ಥೆಯ ಬಗ್ಗೆ ಮಾತನಾಡಿದರು.

    ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ನಟ ಅಜಯ್​ರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts