More

  ಹೊಸ ವರ್ಷಾಚರಣೆ ವೇಳೆ ಮನೆ ಮುಂದೆ ನಡೆಯಿತು ಘೋರ ದುರಂತ: ಸಂಭ್ರಮದ ಮನೆಯಲ್ಲೀಗ ಸೂತಕ ಛಾಯೆ

  ಕಲಬುರಗಿ: ಹೊಸ ವರ್ಷಾಚರಣೆ ವೇಳೆ ಸೌಂಡ್ ಬಾಕ್ಸ್ ಬಳಕೆ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೊಬ್ಬನ ಸಾವಲ್ಲಿ ಅಂತ್ಯ ಕಂಡಿದೆ.

  ಕಲಬುರಗಿಯ ಭವಾನಿ ನಗರದ ಮಲ್ಲಿಕಾರ್ಜುನ್ (25) ಮೃತ ದುರ್ದೈವಿ. ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ್​ ತನ್ನ ಮನೆ ಮುಂದೆ ಕುಟುಂಬಸ್ಥರೊಂದಿಗೆ ಕೇಕ್​ ಕತ್ತರಿಸಿ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಆ ವೇಳೆ ಮಲ್ಲಿಕಾರ್ಜುನ್ ಸೌಂಡ್​ ಬಾಕ್ಸ್​ ಆನ್​ ಮಾಡಿದ್ದ. ಸೌಂಡ್​ ಆಫ್​ ಮಾಡುವಂತೆ ಗ್ರಾಮದ ಕೆಲ ಯುವಕರು ಹೇಳಿದ್ದಾರೆ. 10 ಗಂಟೆ ನಂತರ ಸೌಂಡ್​ ಬರುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.

  ಇದೇ ವಿಚಾರಕ್ಕೆ ಮಲ್ಲಿಕಾರ್ಜುನ್​ ಮತ್ತು ಗ್ರಾಮದ ಕೆಲ ಯುವಕರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಮಲ್ಲಿಕಾರ್ಜುನ್​ ಚಾಕು ಇರಿತಕ್ಕೊಳಗಾಗಿದ್ದ. ಕೂಡಲೇ ಈತನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಲ್ಲಿಕಾರ್ಜುನ್​ ಚಿಕಿತ್ಸೆ ಫಲಿಸದೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

  ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts