More

    ಅತ್ಯಧಿಕ ಹರಡುವ ಸಾಮರ್ಥ್ಯದ ಮತ್ತೊಂದು ರೂಪಾಂತರಿ ಕರೊನಾ ವೈರಸ್ ಪತ್ತೆ!

    ನವದೆಹಲಿ: ದೇಶದ ಜನತೆ ಕೋವಿಡ್​-19 ಸೋಂಕಿನಿಂದ ನಿರಾಳಗೊಂಡು ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರಳುತ್ತಿರುವ ನಡುವೆಯೇ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ.

    ಅದೇನೆಂದರೆ ಯುಕೆನಲ್ಲಿ ಇದೀಗ ಕೋವಿಡ್​ನ ಮತ್ತೊಂದು ರೂಪಾಂತರಿ ವೈರಸ್ ಎಕ್​ಇ ಪತ್ತೆಯಾಗಿದ್ದು, ಇದು ಈ ಹಿಂದಿನ ಎಲ್ಲ ರೂಪಾಂತರಿಗಳಿಗಿಂತಲೂ ಹೆಚ್ಚಿನ ಹರಡುವಿಕೆ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಇದುವರೆಗೆ ಒಮಿಕ್ರಾನ್​ನ ಸಬ್​ ವೇರಿಯಂಟ್ ಬಿಎ.2 ವೈರಸ್ ಅತ್ಯಧಿಕ ಹರಡುವ ಸಾಮರ್ಥ್ಯದ್ದು ಎನ್ನಲಾಗಿತ್ತು. ಇದು ಈಗಾಗಲೇ ಜಗತ್ತಿನ ವಿವಿಧ ಭಾಗವನ್ನು ಆವರಿಸಿಕೊಳ್ಳುತ್ತಿದ್ದು, ಯುಎಸ್​​ನಲ್ಲಿನ ಬಹುತೇಕ ಪ್ರಕರಣಗಳಲ್ಲಿ ಇದು ಪತ್ತೆಯಾಗಿದೆ. ಆದರೆ ಇದೀಗ ಪತ್ತೆಯಾಗಿರುವ ಎಕ್ಸ್​ಇ ಅದಕ್ಕಿಂತಲೂ ಶೇ.10 ಅಧಿಕ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಅದು ಹೇಳಿದೆ.

    ಏನಿದು ಎಕ್ಸ್​ಇ?: ಕೋವಿಡ್ ವೈರಸ್​ನ ಈ ಹೊಸ ರೂಪಾಂತರಿ ಎಕ್ಸ್ಇ, ಒಮಿಕ್ರಾನ್ ಬಿಎ.1 ಮತ್ತು ಬಿಎ.2ನ ಸಂಯುಕ್ತ ರೂಪಾಂತರಿಯಾಗಿದೆ. ಸದ್ಯಕ್ಕೆ ಇದು ಜಗತ್ತಿನ ಕೆಲವೇ ಕೆಲವು ಕಡೆಯಷ್ಟೇ ಪತ್ತೆಯಾಗಿದೆ.

    ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಗೌತಮ್ ಈಗ ಏಷ್ಯಾದ ಅತಿ ಶ್ರೀಮಂತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts