More

    ‘ಧಾರವಾಡಿ ಎಮ್ಮೆ’ ತಳಿಗೆ ರಾಷ್ಟ್ರಮಟ್ಟದ ಮಾನ್ಯತೆ: ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ

    ಧಾರವಾಡ: ಉತ್ತರ ಕರ್ನಾಟಕದ ‘ಧಾರವಾಡಿ ಎಮ್ಮೆ’ ತಳಿಗೆ ರಾಷ್ಟ್ರಮಟ್ಟದ ಮಾನ್ಯತೆ ಸಿಕ್ಕಿದ್ದು, ದೇಶದ 18ನೇ ತಳಿಯಾಗಿ ಧಾರವಾಡಿ ಎಮ್ಮೆಯನ್ನು ಘೋಷಣೆ ಮಾಡಲಾಗಿದೆ. ದೇಶಿ ತಳಿ ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಮೊದಲ ಎಮ್ಮೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

    ಧಾರವಾಡಿ ಎಮ್ಮೆಯು ತನ್ನ ಜೀವಿತಾವಧಿಯಲ್ಲಿ 5 ಬಾರಿ ಕರು ಹಾಕಲಿದೆ, ಒಮ್ಮೆ ಕರು ಹಾಕಿದಾಗ 335ದಿನ ನಿರಂತರವಾಗಿ ಹಾಲು ಕೊಡುತ್ತದೆ. ಈ ಹಾಲಿನಲ್ಲಿ ಶೇ.7 ಕೊಬ್ಬಿನಾಂಶ ಇದ್ದು, ಧಾರವಾಡ ಪೇಢಾ, ಬೆಳಗಾವಿ ಕುಂದಾ, ಗೋಕಾಕ-ಅಮೀನಗಡ ಕರದಂಟು, ಐನಾಪುರ ಪೇಢಾ, ಜಮಖಂಡಿ ಕಲ್ಲಿಪೇಢಾ ತಯಾರಿಸಲು ಹಾಲನ್ನು ಬಳಸಲಾಗುತ್ತದೆ.

    ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷವಾಗಿದೆ. ಈ ನಂತರವೂ ಶುದ್ಧತೆ ಕಾಯ್ದುಕೊಂಡಿರುವ ಧಾರವಾಡಿ ಎಮ್ಮೆ ತಳಿ ಕುರಿತು ಧಾರವಾಡದ ಕೃವಿವಿ ಸಂಶೋಧಕರು 2014 ರಿಂದ 2017ರ ವರೆಗೆ ಸಂಶೋಧನೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಇದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಭಾರತೀಯ ಕೃಷಿ ಅನುಸಂಧಾನ ಪರಿಷತ್​ನಿಂದ ರಾಷ್ಟ್ರಮಟ್ಟದ ಮಾನ್ಯತೆ ಲಭಿಸಿದೆ. ಹರಿಯಾಣದ ಪಶು ಅನುವಂಶಿಕ ಸಂಶೋಧನಾ ಬ್ಯೂರೋದಿಂದ INDIA_BUFFALO_0800_DHARWADI_01018 ಎಂದು ನೋಂದಣಿ ಸಂಖ್ಯೆ ನೀಡಲಾಗಿದೆ. ಈ ನೋಂದಣಿ ಸಂಖ್ಯೆಯಿಂದ ವಿಶ್ವಮಟ್ಟದಲ್ಲಿ ಎಮ್ಮೆ ಗುರುತಿಸಿಕೊಂಡಿದೆ.

    ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

    ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ… ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್​

    ಒಂದೇ ಸೀರೆಯಲ್ಲಿ ಸಾವಿನ ಮನೆಯ ಕದ ತಟ್ಟಿದ ತಾಯಿ-ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts