More

    ಮೈಸೂರು ವಿವಿ ಪರೀಕ್ಷೆ ಉತ್ತರ ಪತ್ರಿಕೆ ಲಾಡ್ಜ್​ನಲ್ಲಿ ಅದಲು-ಬದಲು! ಇನ್​ಸ್ಪೆಕ್ಟರ್​​ ಸೇರಿ ಐವರ ಅಮಾನತು

    ಮೈಸೂರು: ಮೈಸೂರು ವಿವಿ ಉತ್ತರ ಪತ್ರಿಕೆ ಅದಲು-ಬದಲು ಹಗರಣಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಮಂಡಿ ಪೊಲೀಸ್​ ಠಾಣೆ ಇನ್​ಸ್ಪೆ​ಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಐವರನ್ನು ಪೊಲೀಸರನ್ನು ಅಮಾನತು ಮಾಡಲಾಗಿದೆ.

    ಏ. 15 ಮತ್ತು 17 ರಂದು ಬಿಎ​ಸ್ಸಿ ಕೆಮಿಸ್ಟ್ರಿ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆಗಳನ್ನು ವಿವಿ ಹಂಗಾಮಿ ನೌಕರರು ಹಾಗೂ ಒಬ್ಬ ಗುಮಾಸ್ತ ಕಳ್ಳತನ ಮಾಡಿ ಏ.21 ರಂದು ಮಂಡಿ ಮೊಹಲ್ಲಾ ವ್ಯಾಪ್ತಿಯ ಲಾಡ್ಜ್​ನಲ್ಲಿ ಕೆಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನ ಬದಲು ಮಾಡುತ್ತಿದ್ದರು. ಈ ವೇಳೆ ಮಂಡಿ ಇನ್​ಸ್ಪೆಕ್ಟರ್​ ನಾರಾಯಣಸ್ವಾಮಿ ನೇತೃತ್ವದ ತಂಡ ದಾಳಿ ಮಾಡಿತ್ತಾದರೂ ಅಕ್ರಮ ತಡೆಯುವ ಬದಲು ಹಣ ಪಡೆದು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಹಾರಾಣಿ ಕಾಲೇಜಿನ ಅಟೆಂಡರ್‌ ಮಹಮ್ಮದ್ ನಿಸಾರ್, ವಿವಿ ಬಂಡಲ್ ಸಾಗಿಸುವ ಗುತ್ತಿಗೆ ನೌಕರ ರಾಕೇಶ್, ವಿದ್ಯಾರ್ಥಿಗಳಾದ ಚಂದನ್​, ಚೇತನ್​, ಬ್ಲೂ ಡೈಮಂಡ್​ ಲಾಡ್ಜ್​ ಮಾಲೀಕ, ಇನ್​ಸ್ಪೆಕ್ಟರ್​ ನಾರಾಯಣಸ್ವಾಮಿ ಮತ್ತು ಇವರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್​​ಗೆ ಸೋಮಸುಂದರಂ ಎಂಬುವವರು ದೂರು ನೀಡಿದ್ದರು. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಲು ಇನ್​ಸ್ಪೆ​ಕ್ಟರ್ ನಾರಾಯಣಸ್ವಾಮಿ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ನಾರಾಯಣಸ್ವಾಮಿ ಸೇರಿ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

    ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ… ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

    ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

    ಸಿನಿಮಾದಲ್ಲಿ ಆ 37 ಮೆಸೇಜ್ ತೋರಿಸ್ತೀರಾ? ಡಿ.ಕೆ.ರವಿ ಪಾತ್ರ ಮಾಡ್ತೀರಾ ಎಂದು ಆಫರ್​ ಕೊಟ್ಟವರಿಗೆ ಚಕ್ರವರ್ತಿ ಪ್ರಶ್ನೆ

    ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts