More

    ಅಗಸದಲ್ಲಿ ಸಂಭವಿಸಿದೆ ವಿಸ್ಮಯ- ದೈತ್ಯ ನಕ್ಷತ್ರದ ಹಿಂದೆ ವಿಜ್ಞಾನಿಗಳ ದಂಡು!

    ನವದೆಹಲಿ: ದಿನನಿತ್ಯವೂ ನಮ್ಮ ಪರಿಸರದಲ್ಲಿ ಅದೆಷ್ಟೋ ಚಿತ್ರ-ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅಂತೆಯೇ ಆಗಸದಲ್ಲಿಯೂ ಜನಸಾಮಾನ್ಯರ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ನಡೆಯುತ್ತಲೇ ಇವೆ. ಆದರೆ ಆಯಾ ಕ್ಷೇತ್ರದಲ್ಲಿ ಇರುವವರಿಗೆ ಮಾತ್ರ ಆ ವಿಷಯದ ಅರಿವು ಇರುತ್ತದೆ.

    ಇದೀಗ ಅಂಥದ್ದೇ ಒಂದು ವಿಚಿತ್ರ ಘಟನೆ ಆಕಾಶದಲ್ಲಿ ಸಂಭವಿಸಿದ್ದು, ಇದರ ರಹಸ್ಯ ಭೇದಿಸಲು ಖಗೋಳಶಾಸ್ತ್ರಜ್ಞರು ಆಗಸದತ್ತ ಮುಖಮಾಡಿದ್ದಾರೆ.

    ಅಷ್ಟಕ್ಕೂ ಆಗಿರುವುದು ಏನೆಂದರೆ, ದೇಶ-ವಿದೇಶಗಳ ಖಗೋಳಶಾಸ್ತ್ರಜ್ಞರು ಬಹಳ ವರ್ಷಗಳಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ದೈತ್ಯಾಕಾರದ ನಕ್ಷತ್ರವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಸೂರ್ಯನಿಗಿಂತಲೂ ಈ ನಕ್ಷತ್ರ ಸುಮಾಋಉ 25 ಲಕ್ಷ ಪಟ್ಟು ಹೆಚ್ಚು ಪ್ರಕಾಶಮಾನವಾಗಿತ್ತು ಎಂದಿದ್ದಾರೆ ಅವರು. ಈಗ ಇದು ಏಕಾಏಕಿಯಾಗಿ ಕಣ್ಮರೆಯಾಗಿದೆ. ಯಾವುದೇ ಸುಳಿವು ನೀಡದೆ ಮತ್ತು ಯಾವುದೇ ರೀತಿಯ ಗುರುತನ್ನು ಬಿಡದ ಕಾರಣ, ಇದು ಬಹಳ ರಸಹ್ಯವಾಗಿಯೇ ಉಳಿದಿದೆ ಎಂದಿದ್ದಾರೆ ಅವರು.

    ರಾಯಲ್ ಅಸ್ಟ್ರೋನೋಮಿಕಲ್ ಸೊಸೈಟಿಯ ಜರ್ನನ್‌ನಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದ್ದು, ಖಗೋಳಶಾಸ್ತ್ರಜ್ಞರ ಒಂದು ತಂಡ ಈ ನಕ್ಷತ್ರ ಕಣ್ಮರೆಯಾಗಿರುವುದರ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕರೊನಾದಿಂದಾಗಿ ತಬ್ಬಿಕೊಳ್ಳಲು ಆಗುತ್ತಿಲ್ಲವೆ? ಇಲ್ಲಿದೆ ನೋಡಿ ಉಪಾಯ…

    ಈ ಕುರಿತು ಹೇಳಿಕೆ ನೀಡಿರುವ ಟ್ರಿನಿಟಿ ಕಾಲೇಜ್ ಆಫ್ ಡಬಲೀನ್‌ನ ಖಗೋಳ ಶಾಸ್ತ್ರಜ್ಞ ಹಾಗೂ ನ್ಯೂ ಪೇಪರ್ ಆನ್ ದಿ ಸ್ಟಾರ್‌ನ ಸಹ ಲೇಖಕರಾಗಿರುವ ಜಾಸ್ ಗ್ರೆಹ್ ಒಂದು ವೇಳೆ ಈ ದೈತ್ಯ ನಕ್ಷತ್ರಕ್ಕೆ ಅಂತಿಮ ಕಾಲ ಸಮೀಪಿಸಿ ಅದು ಕಾಣೆಯಾಗಿರುವುದೇ ಹೌದಾದರೆ, ಎಲ್ಲಾ ನಕ್ಷತ್ರಗಳಿಗೂ ಇಂಥದ್ದೊಂದು ಅಂತಿಮ ಘಟ್ಟ ಇರುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕಾಗುತ್ತದೆ. ಆದ್ದರಿಂದ ಈ ದೈತ್ಯ ನಕ್ಷತ್ರದ ಕುರಿತು ಇನ್ನಷ್ಟು ಕುತೂಹಲ ಹೆಚ್ಚಿದೆ ಎಂದಿದ್ದಾರೆ.

    ಈ ನಕ್ಷತ್ರವು ಭೂಮಿಯಿಂದ 7.5 ಪ್ರಕಾಶವರ್ಷಗಳಷ್ಟು ದೂರದಲ್ಲಿತ್ತು. ಖಗೋಳಶಾಸ್ತ್ರಜ್ಞರ ಅನೇಕ ತಂಡಗಳು ಈ ದೈತ್ಯ ನಕ್ಷತ್ರವನ್ನು 2001 ರಿಂದ 2011 ರವರೆಗೆ ಅಧ್ಯಯನ ಮಾಡಿವೆ. ಆದರೆ 2019ರಲ್ಲಿ, ಇದನ್ನು ಬೃಹತ್‌ ದೂರದರ್ಶಕದ ಮೂಲಕ ಅಧ್ಯಯನ ಮಾಡಲು ತೊಡಗಿದ್ದರು. ಆದರೆ, ಈ ನಕ್ಷತ್ರ ಕಣ್ಮರೆಯಾಗಿದ್ದನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

    ಅಮರನಾಥಯಾತ್ರೆ ರದ್ದು ಮಾಡಲು ಮನವಿ: ಸುಪ್ರೀಂಕೋರ್ಟ್‌ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts