More

    ಅಮರನಾಥಯಾತ್ರೆ ರದ್ದು ಮಾಡಲು ಮನವಿ: ಸುಪ್ರೀಂಕೋರ್ಟ್‌ ಹೇಳಿದ್ದೇನು?

    ನವದೆಹಲಿ: ಇದೇ ತಿಂಗಳಾಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಪ್ರಸಿದ್ಧ ಅಮರನಾಥ ಯಾತ್ರೆಯ ರದ್ದತಿಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇಂದು ವಜಾಗೊಳಿಡಿದೆ.

    ಕರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ, ಈ ಯಾತ್ರೆಗೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ ಇದನ್ನು ಮಾನ್ಯ ಮಾಡಲು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ನಿರಾಕರಿಸಿದೆ.

    ಯಾತ್ರೆ ವಿಚಾರದಲ್ಲಿ ಅಮರನಾಥ ದೇಗುಲ ಮಂಡಳಿ ತೆಗೆದುಕೊಂಡ ನಿರ್ಧಾರವೇ ಅಂತಿಮ. ನಾವು ಈ ವಿಚಾರಕ್ಕೆ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಈ ಬಗ್ಗೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಯಾತ್ರೆಯ ವಿಷಯ ಅದಕ್ಕೆ ಬಿಟ್ಟಿರುವುದು. ನಾನು ಇದರ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

    ಇದನ್ನೂ ಓದಿ: ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಷಪ್‌ ಜಾಮೀನು ರದ್ದು- ವಾರೆಂಟ್‌ ಜಾರಿ

    ಕರೊನಾ ವೈರಸ್‌ ಕ್ಷಣಕ್ಷಣಕ್ಕೂ ಏರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅಮರನಾಥ ಯಾತ್ರೆಗೆ ಮಾತ್ರ ಕೇಂದ್ರ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಅಮರನಾಥ ದೇಗುಲ ಮಂಡಳಿ ಎಲ್ಲ ಸಿದ್ದತೆ ನಡೆಸಿಕೊಳ್ಳುತ್ತಿದೆ. ಇದನ್ನು ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

    ಅಮರನಾಥ ಯಾತ್ರೆ ಪ್ರಯಾಣದ ಅಂತಿಮ ದಿನಾಂಕದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಈ ಯಾತ್ರೆಯಲ್ಲಿ ಒಂದು ದಿನಕ್ಕೆ 500ಕ್ಕಿಂತ ಹೆಚ್ಚು ಭಕ್ತರು ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ನಡೆದಿದೆ.

    ಜುಲೈ 31ರವರೆಗೆ ಅಮರನಾಥ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಅವಕಾಶ ಇಲ್ಲ. ಆದರೀಗ ವೈಷ್ಣೋದೇವಿ ದೇವಸ್ಥಾನವನ್ನು ಮೊದಲು ಸ್ಥಳೀಯ ಜನರಿಗೆ ತೆರೆಯಲಾಗುವುದು. ನಂತರ ಪರಿಸ್ಥಿತಿ ನೋಡಿಕೊಂಡು ಇತರ ರಾಜ್ಯಗಳ ಜನರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.

    ಆತ್ಮಹತ್ಯೆಗೆ ಕಾರಣರಾದವರ ಹೆಸರು ಬರೆದಿಟ್ಟ ಬಿಜೆಪಿ ಶಾಸಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts