More

    ಪಾವಗಡ ವ್ಯಾಪ್ತಿ ಎಲ್ಲ ಖಾಸಗಿ ಬಸ್‌ಗಳ ಪರವಾನಗಿ ರದ್ದು: 5 ಮಂದಿ ಸಾವಿನ ಬಳಿಕ ಎಚ್ಚೆತ್ತ ಸಾರಿಗೆ ಸಚಿವ

    ಬಳ್ಳಾರಿ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಸಂಭವಿಸಿದ ಅಪಘಾತ ದುರದೃಷ್ಟಕರ ಘಟನೆಯಾಗಿದೆ. 5 ಜನರ ಸಾವಾಗಿ, 25 ಜನರಿಗೆ ಗಾಯವಾಗಿದೆ. ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

    ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಗ್ಗೆ ಖಾಸಗಿ ಬಸ್​ ಪಲ್ಪಿಯಾಗಿ 5 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಬಸ್​ಗಳಿಗೆ ಪರ್ಮಿಟ್ ಹಾಗೂ ಫಿಟ್ನೆಸ್ ಇದೆಯೇ ಅನ್ನೋ ಬಗ್ಗೆ ಪರಿಶೀಲಿಸಲಾಗ್ತಿದೆ. ಓವರ್ ಲೊಡ್ ಮತ್ತು ಅತಿವೇಗ, ಹಾಗೂ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಬಂದದ್ದು ಘಟನೆಗೆ ಕಾರಣ ಎನ್ನಲಾಗಿದೆ. ಈ ಭಾಗದಲ್ಲಿ ಖಾಸಗಿ ಬಸ್​ಗಳಿಗೆ ಕಡಿವಾಣ ಹಾಕಿ ಸರ್ಕಾರಿ ಬಸ್ ಬಿಡೋ ಕೆಲಸ ಮಾಡ್ತೇವೆ. ಎಲ್ಲ ಖಾಸಗಿ ಬಸ್‌( ಪಾವಗಡ ವ್ಯಾಪ್ತಿ) ಪರವಾನಗಿ ರದ್ದು ಮಾಡ್ತೇವೆ. ಮುಖ್ಯಮಂತ್ರಿಗಳಿಗೆ ಘಟನೆ ಬಗ್ಗೆ ವಿವರಣೆ ನೀಡಿದ್ದೇನೆ. ತಿರುವಿನಲ್ಲಿ ಓವರ್ ಸ್ಪೀಡ್ ಆಗಿ ಹೊಗಿರೋದು ಅಪಘಾತ ಕಾರಣ ಎಂದರು.

    ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ಕೊಡುವ ಬಗ್ಗೆ ಸಿಎಂ ಜತೆ ಮಾತನಾಡುವೆ. ಸರ್ಕಾರಿ ಬಸ್ ಬಿಡುವಂತೆ ಆ ಭಾಗದ ಜನರು ಮನವಿ ಮಾಡಿದ್ದರು. ಆದರೆ ಬಸ್​ ಬಿಡದ ಕಾರಣ ಹೀಗಾಗಿದೆ ಎಂದು ಸಾರಿಗೆ ಸಚಿವರು ಪ್ರತಿಕ್ರಿಯಿಸಿದರು.

    ಪಾವಗಡದಲ್ಲಿ ಭೀಕರ ಅಪಘಾತ: 5ಕ್ಕೇರಿದ ಸಾವಿನ ಸಂಖ್ಯೆ, ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು

    ಸೀಬೆಕಾಯಿ ತಿನ್ನುವ ಆಸೆಯಿಂದ ಮರ ಹತ್ತಿ ದುರಂತ ಅಂತ್ಯಕಂಡ 8 ವರ್ಷದ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts