ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

Wife
ಅಪಘಾತ ಸಂಭವಿಸಿದ ಜಾಗದಲ್ಲಿ ಜಮಾಯಿಸಿದ ಜನರು.
Published on

ಹಾವೇರಿ: ಆತನಿಗಿನ್ನೂ ಬರೀ ಇಪ್ಪತ್ತೈದು ವರ್ಷ. ವಿವಾಹಿತನಾಗಿದ್ದ ಆತನಿಗೆ ಹೆಂಡತಿಯ ಊರಿನಲ್ಲೇ ಜೀವ ಕಳೆದುಕೊಳ್ಳುವಂತಾಗಿದೆ. ಇನ್ನೇನು ತನ್ನೂರಿಗೆ ಹೋಗಬೇಕೆಂದು ಹೊರಟಿರುವಾಗಲೇ ಯಮರಾಯ ಎದುರಾಗಿ, ತನ್ನೊಂದಿಗೆ ಕರೆದೊಯ್ದಿದ್ದಾನೆ.

ಹೀಗೆ ಹೆಂಡತಿಯ ಊರಿನಲ್ಲಿ ಜೀವ ಕಳೆದುಕೊಂಡ ಯುವಕನ ಹೆಸರು ಯಲ್ಲಪ್ಪ ಲಮಾಣಿ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿಯವನಾದ ಈತ ಇದೇ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿರುವ ಹೆಂಡತಿಯ ಊರಿಗೆ ಬಂದಿದ್ದಾಗ ಮೃತಪಟ್ಟಿದ್ದಾನೆ.

ಹೆಂಡತಿಯ ಮನೆಯಿಂದ ವಾಪಸ್ ತನ್ನೂರಿಗೆ ಹೊರಟ ಯಲ್ಲಪ್ಪ, ಬ್ಯಾಡಗಿಯ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ವಾಹನಕ್ಕೆ ಕಾಯುತ್ತಿದ್ದ ಸಂದರ್ಭದಲ್ಲಿ ಸಾವು ಎದುರಾಗಿದೆ. ಅಂದರೆ ಆಗ ಎದುರಿನಿಂದ ಬಂದ ಕಾರೊಂದು ಯಲ್ಲಪ್ಪಗೆ ಜೋರಾಗಿ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net