More

    ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಮಂಡ್ಯ ಜೆಡಿಎಸ್​ ಶಾಸಕರ ವಿರುದ್ಧ ಸಿಡಿದೆದ್ದ ಸುಮಲತಾ

    ಮಂಡ್ಯ: ಕೋವಿಡ್ -19 ಸಮಯದಲ್ಲಿ ಪ್ರತಿಯೊಂದಕ್ಕೂ ರಾಜಕಾರಣ ಮಾಡಿದರೆ ನನ್ನ ರಕ್ತ ಕುದಿಯುತ್ತದೆ ಎಂದ ಸಂಸದೆ ಸುಮಲತಾ ಅಂಬರೀಷ್​ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಸುಮಲತಾ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಸಭೆಯ ಅರ್ಧದಲ್ಲೇ ಎದ್ದು ಹೊರನಡೆದರು. ಅಲ್ಲದೆ ಜಾ.ದಳ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
    ಎಷ್ಟೋ ಚುನಾವಣೆಗಳನ್ನು ಗೆದ್ದು ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸಲಹೆ ಕೊಡುವುದನ್ನು ಬಿಟ್ಟು ಕಿರುಚಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇಲ್ಲೇನು ಡ್ರಾಮ ನಡೆಯುತ್ತಿದೆಯೇ?ಎಂದು ಸುಮಲತಾ ಪ್ರಶ್ನಿಸಿದರು. ಇದನ್ನೂ ಓದಿರಿ ಸಂಸದೆ ಸುಮಲತಾ ಸ್ವಂತ ಹಣದಲ್ಲಿ ಆಕ್ಸಿಜನ್​ ತಂದಿಲ್ಲ, ಸರ್ಕಾರ ಕೊಟ್ಟದ್ದು: ಪ್ರಚಾರಕ್ಕಾಗಿ ಸುಳ್ಳು ಹೇಳಿದ್ದಾರೆ…

    ರಾಜಕಾರಣ ಇಷ್ಟವಿಲ್ಲ, ಇಂತಹ ರಾಜಕಾರಣ ಬೇಕಿಲ್ಲ. ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ನನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಿದ್ದೇನೆ. ಬೇರೆಯವರ ರೀತ ಸಭೆ, ಸಮಾರಂಭಗಳಿಗೆ ಹೋಗಿ ಫೋಟೋಗೆ ಫೋಸ್ ಕೊಡಲ್ಲ, ಕೆಲಸ ಮಾಡುತ್ತೇನೆ, ಕೆಲಸ ಮಾಡಲು ಮಾನವೀಯತೆ ಬೇಕು ಎಂದರು.

    ನಾನು ಒಬ್ಬ ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ತಂದಿದ್ದೇನೆ. ಈ ಬಗ್ಗೆ ಅವರ ಕ್ಷೇತ್ರದ ಜನತೆ ಕೇಳಿರಬೇಕು. ಅದಕ್ಕಾಗಿ ಒಬ್ಬೊಬ್ಬರೂ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಮಾಡಿಕೊಳ್ಳಲಿ, ಮುಂದೆಯೂ ಮಾಡಲಿ. ನನಗೇನು ಬೇಜಾರಿಲ್ಲ. ಕೋವಿಡ್ ಸಮಯದಲ್ಲಿ ಮಾನವೀಯತೆ ತೋರುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

    ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನನಗೆ ಜನತೆ ಆಶೀರ್ವಾದ ಮಾಡಿರುವುದರಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ಕೇವಲ ಅವರ ನಾಯಕರ, ಪಕ್ಷದ ಬಗ್ಗೆ ಮಾತನಾಡುತ್ತಾರೆ. ಮಾತನಾಡೋರೆ ಬೇರೆ, ಕೆಲಸ ಮಾಡೋರೆ ಬೇರೆ. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾತನಾಡಲು ಬಿಡುತ್ತಿಲ್ಲ ಎಂದು ಟೀಕಿಸಿದರು.

    ನಾನು ಬೆಂಗಳೂರಿನಲ್ಲೇ ಕುಳಿತು ಫೋನ್ ಮೂಲಕ ಆಕ್ಸಿಜನ್ ಸಿಲಿಂಡರ್ ಕೊಡಿಸಿದ್ದೇನೆ. ರಾಜಕಾರಣ ಬಿಟ್ಟು ಏನಾದರೂ ಮಾಡಿದರೆ ಎಲ್ಲವೂ ಆಗುತ್ತದೆ. ಅವರ ನಾಯಕರು ಮಾಜಿ ಪ್ರಧಾನಿಗಳಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಗೆ ಹತ್ತಿರವಿದ್ದಾರೆ. ಅವರು ಫೋನ್ ಮೂಲಕ ಮೋದಿ ಜತೆ ಮಾತನಾಡಿ ತರಿಸಬಹುದು ಅವರನ್ನು ಪ್ರಶ್ನಿಸಲಿ. ಅದು ಬಿಟ್ಟು ಕೇವಲ ಜನತೆಯ ಮುಂದೆ ಫೋಸ್ ಕೊಡುತ್ತಿದ್ದಾರೆ ಎಂದು ಛೇಡಿಸಿದರು.

    ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ತಜ್ಞರಿದ್ದಾರೆ. ಕೋವಿಡ್ ಸಂಬಂಧವಾಗಿ ವಾರದಲ್ಲಿ ಎರಡು ಬಾರಿ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತಿದ್ದೇನೆ. ಆಕ್ಸಿಜನ್ ಘಟಕ ಸ್ಥಾಪಿಸುವ ಸಂಬಂಧ ಉದ್ಯಮಿಗಳ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಮಾತನಾಡದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಲಾಕ್‍ಡೌನ್ ಅಗತ್ಯ: ಲಾಕ್‍ಡೌನ್ ಅವಶ್ಯಕತೆ ಇದೆ. ಜನತಾ ಕಫ್ರ್ಯೂವನ್ನು ಜನತೆ ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಲಾಕ್‍ಡೌನ್ ಆಗದಿದ್ದರೆ ಜೀವ ಉಳಿಸಿಕೊಳ್ಳಲು ಆಗಲ್ಲ, ಲಾಕ್‍ಡೌನ್‍ನಿಂದ ಪ್ರಕರಣಗಳು ಕಡಿಮೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ಮಂಡ್ಯ ಜಿಲ್ಲಾಧಿಕಾರಿಗೆ ಕರೊನಾ ಪಾಸಿಟಿವ್​

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

    ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

    ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts