More

    ಸಂಸದೆ ಸುಮಲತಾ ಸ್ವಂತ ಹಣದಲ್ಲಿ ಆಕ್ಸಿಜನ್​ ತಂದಿಲ್ಲ, ಸರ್ಕಾರ ಕೊಟ್ಟದ್ದು: ಪ್ರಚಾರಕ್ಕಾಗಿ ಸುಳ್ಳು ಹೇಳಿದ್ದಾರೆ…

    ಮಂಡ್ಯ: ಸರ್ಕಾರ ನೀಡಿರೊ ಸಿಲಿಂಡರ್ ತಂದು ತಾನೇ ಕೊಟ್ಟಿದ್ದು ಎಂದು ಮಂಡ್ಯ ಸಂಸದೆ ಪ್ರಚಾರ ಪಡೆಯುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ನಂಬಿಸುವ ಅಗತ್ಯ ಏನಿದೆ? ಮಂಡ್ಯ ಜನರಿಗೆ ಸಂಸದೆ ನಂಬಿಕೆ ದ್ರೋಹ ಮಾಡ್ತಿದ್ದಾರೆ. ಪ್ರಚಾರದ ಗಿಮ್ಮಿಕ್​ಗಾಗಿ ಈ ರೀತಿ ಸುಳ್ಳು ಹೇಳುತಿದ್ದಾರೆ ಎಂದು ಜೆಡಿಎಸ್ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಮತ್ತು ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

    ಅಂಬರೀಷ್ ಕುಟುಂಬದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದೇವೆ. ಆದರೆ ಸುಮಲತಾ ಅವರು ಸರ್ಕಾರ ನೀಡಿರೊ ಸಿಲಿಂಡರ್ ನೀಡಿ ತಾವೇ ತಂದಿದ್ದಾಗಿ ಪ್ರಚಾರ ಮಾಡಿಕೊಳ್ಳೋದು ಎಷ್ಟು ಸರಿ? ಇಂತಹ ಚೀಪ್ ಪಾಪ್ಯುಲಾರಿಟಿಗೆ ನೀವು ಹೋಗಬೇಡಿ. ಇದರಿಂದ ಅಂಬರೀಷ್​ರ ಗೌರವಕ್ಕೆ ಧಕ್ಕೆ ಬರುತ್ತೆ ಎಂದು ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿರಿ ಜೆಡಿಎಸ್​ನ ಹಿರಿಯ ಮುಖಂಡ ರತನ್ ಸಿಂಗ್ ನಿಧನ

    ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಸುಮಲತಾ ಅವರು ನಾನು ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇನೆ. ಬೇರೆಯವರು ಆ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು. ಆದರೆ ಈ ಬಗ್ಗೆ ನನಗೆ ಸ್ಪಷ್ಟತೆ ಬೇಕಿತ್ತು. ನಾವು ಕೂಡ ಆಕ್ಸಿಜನ್‍ಗೆ ಕಾರ್ಖಾನೆಗಳೊಂದಿಗೆ ಜಗಳ ಮಾಡಿದ್ದೇವೆ. ಆದರೂ ಸಿಗಲಿಲ್ಲ. ಹೀಗಿರುವಾಗ ಸಂಸದೆ ಅವರು ಕೊಟ್ಟಿದ್ದಾರೆಂದು ಹೇಳಿದ ಆಕ್ಸಿಜನ್ ಬಗ್ಗೆ ಮಾಹಿತಿ ಕೇಳಿದಾಗ, ಅದು ಸರ್ಕಾರಿ ಕೋಟಾದಲ್ಲಿ ಬಂದಿರುವ ಸಿಲಿಂಡರ್​ಗಳೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಪಾಂಡವಪುರ ಎಸಿ ಶಿವಾನಂದಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಸಂಸದರೇ, ಸರ್ಕಾರಿ ಕೋಟಾವನ್ನು ತಮ್ಮದೆಂದು ಏಕೆ ಹೇಳಿಕೊಂಡಿದ್ದೀರಿ? ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದ್ದಾರೆ. ಇದನ್ನೂ ಓದಿರಿನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಮಂಡ್ಯ ಜೆಡಿಎಸ್​ ಶಾಸಕರ ವಿರುದ್ಧ ಸಿಡಿದೆದ್ದ ಸುಮಲತಾ

    ಸರ್ಕಾರದ ಕೋಟಾದಲ್ಲಿ ಬಂದ ಸಿಲಿಂಡರ್​ಗಳನ್ನು ತರಿಸಿಕೊಳ್ಳಲು ಸಚಿವರು ಹಾಗೂ ಡಿಸಿ ಇದ್ದಾರೆ. ಆಗಿದ್ದಾಗ ನಿಮ್ಮ ಪಾತ್ರವೇನು? ನಾನು ಸೇರಿದಂತೆ ಜಿಲ್ಲೆಯ ಜನರು ನಿಮ್ಮ ಮೇಲೆ ಅಪಾರ ನಂಬಿಕೆ ಜತೆಗೆ ಭರವಸೆ ಇಟ್ಟಿದ್ದೇವೆ. ಹೀಗಿರುವಾಗ ನೀವು ಮಾಡಿದ್ದಾದರೂ ಏನು? ಆಕ್ಸಿಜನ್ ಕೊಡಿಸಿದ್ದೇವೆಂದು ನಂಬಿಕೆಗೆ ಮೋಸ ಮಾಡಿದ್ದೀರಿ. ಇನ್ನು ಸಭೆಯಿಂದ ಅರ್ಧಕ್ಕೆ ಎದ್ದು ಹೋಗುವುದಲ್ಲದೆ, ಮಾಧ್ಯಮದವರೊಂದಿಗೆ ನನ್ನ ರಕ್ತ ಕುದಿಯುತ್ತಿದೆ ಎಂದು ಹೇಳಿಕೆ ನೀಡಿದ್ದೀರಿ. ನೀವು ಕೊಟ್ಟ ತಪ್ಪು ಮಾಹಿತಿಯಿಂದ ನಮಗೂ ರಕ್ತ ಕುದಿಯುತ್ತಿದೆ. ಇದು ರಾಜಕಾರಣ ಮಾಡುವ ಸಮಯವಲ್ಲ. ಜನರಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಸರ್ಕಾರದಿಂದ ಸೌಲಭ್ಯ ತರಿಸಿಕೊಳ್ಳಲು ಕಾರ್ಯಪ್ರೌವೃತ್ತರಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ. 

    ಇನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ನೀವು ಮಾತನಾಡಿದ್ದೀರಿ. ಜನರು ನಿಮ್ಮನ್ನು ಬೇರೆ ಕಾರಣಕ್ಕೆ ಆಯ್ಕೆ ಮಾಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ದೇವೇಗವಡರು ಧರಣಿ ಕುಳಿತಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದು ಮಾತನಾಡಿದ್ದರು. ಆದ್ದರಿಂದ ಎಚ್.ಡಿ.ದೇವೇಗೌಡ ಅವರ ಬಗ್ಗೆ ನೀವು ಮಾತನಾಡುವ ಅವಶ್ಯಕತೆ ಇಲ್ಲ. ರಾಜ್ಯದ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿ ಎಂದರೆ, ಪತ್ರ ಬರೆದಿರುವುದಾಗಿ ಹೇಳುತ್ತೀರಿ. ಇದು ಪತ್ರ ಬರೆಯುವ ಸಮಯವಲ್ಲ. ಜನರಿಗೆ ಸೌಲಭ್ಯ ಒದಗಿಸಬೇಕು ಎಂದು ತಿರುಗೇಟು ನೀಡಿದರು.

    ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

    ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

    ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಮಂಡ್ಯ ಜೆಡಿಎಸ್​ ಶಾಸಕರ ವಿರುದ್ಧ ಸಿಡಿದೆದ್ದ ಸುಮಲತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts