More

    ಪಂಚಭೂತಗಳಲ್ಲಿ ಲೀನವಾದ ‘ಮಂಡ್ಯ ಗಾಂಧಿ’ ಕೆ.ಆರ್.ಪೇಟೆ ಕೃಷ್ಣ

    ಮಂಡ್ಯ: ಹಿರಿಯ ರಾಜಕಾರಣಿ, ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ(80) ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಹುಟ್ಟೂರಾದ ಕೊತ್ತಮಾರನಹಳ್ಳಿಯಲ್ಲಿ ನೆರವೇರಿಸಲಾಯಿತು.

    ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕೆ.ಆರ್.ಪೇಟೆ ಕೃಷ್ಣ ನಿನ್ನೆ(ಶುಕ್ರವಾರ) ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.ಇಂದು ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಕೆ.ಆರ್‍.ಪೇಟೆ ಮಾರ್ಗವಾಗಿ ಕೊತ್ತಮಾರನಹಳ್ಳಿಗೆ ತರಲಾಯಿತು. ಕೆ.ಆರ್‍.ಪೇಟೆ ರಸ್ತೆ ಬದಿಯಲ್ಲಿ ನಿಂತು ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸರಳ ಸಜ್ಜನತೆಗೆ ಹೆಸರಾಗಿದ್ದ ಕೃಷ್ಣ ‘ಮಂಡ್ಯದ ಗಾಂಧಿ’ ಎಂದೇ ಪ್ರಸಿದ್ಧಿ ಪಡೆದಿದ್ದರು.

    ಪಂಚಭೂತಗಳಲ್ಲಿ ಲೀನವಾದ 'ಮಂಡ್ಯ ಗಾಂಧಿ' ಕೆ.ಆರ್.ಪೇಟೆ ಕೃಷ್ಣ

    ಕೆ.ಆರ್‌.ಪೇಟೆ ಕ್ಷೇತ್ರದಿಂದ ಮೂರು ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣ ಅವರು ಒಮ್ಮೆ ಸಚಿವರಾಗಿ, ಒಮ್ಮೆ ಸ್ಪೀಕರ್ ಆಗಿ ಕೆಲಸ ನಿರ್ವಹಿಸಿದ್ದರು. 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜನತಾಪಕ್ಷದ ಎಸ್‌.ಆರ್‌.ಬೊಮ್ಮಾಯಿ ಸರ್ಕಾರದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾಗಿದ್ದ ಕೃಷ್ಣ, 2004ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭೆ ಸ್ಪೀಕರ್‌ ಆಗಿದ್ದರು. 2006ರ ಜೆಡಿಎಸ್‌-ಬಿಜೆಪಿ ಸರ್ಕಾರದಲ್ಲೂ ಸ್ಪೀಕರ್‌ ಆಗಿ ಮುಂದುವರಿದಿದ್ದರು. 2008 ಹಾಗೂ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡರು. 2018ರಲ್ಲಿ ಅನಾರೋಗ್ಯ ಕಾರಣಕ್ಕೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು.

    ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ

    ಬೇಡ ಅಂದ್ರೂ ಸೆಕ್ಸ್​ ಮಾಡಿದ, ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನೂ ಕೊಂದ… ಕೊನೆಗೆ ಯುವತಿ ಕೊಟ್ಲು ಬಿಗ್​ ಶಾಕ್​!

    ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

    ಪೊಲೀಸ್​ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕರೊನಾ, ಪತ್ನಿ ಆಸ್ಪತ್ರೆಗೆ ಸೇರುತ್ತಿದ್ದಂತೆ ಪತಿಗೆ ಹೃದಯಾಘಾತ! ಮುಂದೆ ಆಗಿದ್ದೆಲ್ಲವೂ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts