More

    ಔಷಧಿ ವ್ಯಾಪಾರಿಗಳು- ವಿತರಕರನ್ನ ಕರೊನಾ ವಾರಿಯರ್ಸ್​ ಎಂದು ಘೋಷಿಸಿ, ಇಲ್ಲವಾದಲ್ಲಿ ಎಲ್ಲ ಮೆಡಿಕಲ್​ ಶಾಪ್ಸ್​​ ಬಂದ್​!

    ಮಂಡ್ಯ: ಕರೊನಾ ವ್ಯಾಕ್ಸಿನ್​ ಅನ್ನು ಔಷಧಿ ವ್ಯಾಪಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೂ ಕೊಡಬೇಕು ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ ಅಧ್ಯಕ್ಷ ಬಿ.ಲೋಕೇಶ್ ಆಗ್ರಹಿಸಿದ್ದಾರೆ. ಒಂದು ವೇಳೆ ಈ ಮನವಿಯನ್ನ ಪರಿಗಣಿಸದಿದ್ದಲ್ಲಿ ಜಿಲ್ಲಾದ್ಯಂತ ಎಲ್ಲ ಮೆಡಿಕಲ್ ಶಾಪ್​ಗಳನ್ನು ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್​, ಕರೊನಾ ಮಹಾಮಾರಿ ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿದೆ. ಎಲ್ಲ ವಯೋಮಾನದವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತಿದೆ. ಇಂತಹ ಸಂಕಷ್ಟ ಕಾಲದಲ್ಲಿಯೂ ಔಷಧಿ ವ್ಯಾಪಾರಿಗಳು ಹಾಗೂ ವಿತರಕರು ಹಗಲು-ರಾತ್ರಿ ಎನ್ನದೆ ಪ್ರಾಣವನ್ನೇ ಪಣಕ್ಕಿಟ್ಟು ಜನರಿಗೆ ಜೀವ ರಕ್ಷಕ ಔಷಧ ಒದಗಿಸುತ್ತಿದ್ದಾರೆ. ಔಷಧ ಅಂಗಡಿಗಳಿಗೆ ಬರುವವರು ಬಹುತೇಕ ರೋಗಿಗಳೇ. ಆದರೂ ಅವರಿಗೆ ಯಾವುದೇ ಅಂಜಿಕೆ ಇಲ್ಲದೆ ಔಷಧಿ ನೀಡುತ್ತಿದ್ದಾರೆ. ಹಾಗಾಗಿ ಔಷಧಿ ವ್ಯಾಪಾರಿಗಳು ಹಾಗೂ ವಿತರಕರಿಗೂ ಕರೊನಾ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ದೇಶದಲ್ಲಿ ಈಗಾಗಲೇ ನೂರಾರು ಔಷಧ ವ್ಯಾಪಾರಿಗಳು ಕರೊನಾಗೆ ಬಲಿಯಾಗಿದ್ದಾರೆ. ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೂ ಉಳಿದ ಔಷಧ ವ್ಯಾಪಾರಿಗಳು ಮತ್ತು ಸಿಬ್ಬಂದಿ ಧೃತಿಗೆಡದೆ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ಕೊಡಬೇಕು. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮಂಡ್ಯ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಬಿ.ಶೈಲಜಾ ಅವರಿಗೆ ಮನವಿ ಬಿ.ಲೋಕೇಶ್ ಮಾಡಿದ್ದಾರೆ.

    ಇದಕ್ಕೆ ಸ್ಪಂದಿಸಿರುವ ಎಡಿಸಿ, ಸಂಬಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಎಲ್ಲ ಔಷಧಿ ವ್ಯಾಪಾರಿಗಳು ಹಾಗೂ ಸಿಬ್ಬಂದಿಗೆ ವ್ಯಾಕ್ಸಿನೇಷನ್ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡಲಾಗುವುದು. ಈ ಬಗ್ಗೆ ಆರ್​ಸಿಎಚ್​ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

    ಮಗನೇ ನಂಗೇನೂ ಆಗಿಲ್ಲ, ಮನೆಗೆ ಕರೆದುಕೊಂಡು ಹೋಗಪ್ಪಾ… ಕರೊನಾ ಗೆದ್ದ 105 ವರ್ಷದ ಅಜ್ಜಿ

    ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ…

    ರಾಜ್ಯದ ಈ ಐದು ಜಿಲ್ಲೆಯಲ್ಲಿ 54 ವಕೀಲರು ಕರೊನಾಗೆ ಬಲಿ! ಕುಟುಂಬದ 50 ಸದಸ್ಯರೂ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts