More

    ಸಮಾನತೆಯ ಬೀಜ ಬಿತ್ತಿದ ಯುಗಪುರುಷ

    ಮದ್ದೂರು: ಸಾಮಾಜಿಕ ಮೌಢ್ಯಗಳನ್ನು ಧಿಕ್ಕರಿಸಿ, ಸಮಾನತೆಯ ಬೀಜ ಬಿತ್ತಿದ ಮಾನವತಾವಾದಿ ಬಸವೇಶ್ವರರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.

    ತಾಲೂಕಿನ ಕೊಪ್ಪ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    12ನೇ ಶತಮಾನದಲ್ಲಿ ಶಿಕ್ಷಣದ ಕೊರತೆ ಇದ್ದ ಕಾಲದಲ್ಲಿ ಸಾಮಾಜಿಕ, ಮಾನವೀಯ ಮೌಲ್ಯಗಳ ಪಾಠ ಮಾಡಿದ ಬಸವಣ್ಣ ವಚನಗಳ ಮೂಲಕ ಸರ್ವರನ್ನೂ ತಲುಪುವ ಪ್ರಯತ್ನ ಮಾಡಿದ್ದರು. ಅವರ ಹಿರಿಮೆಯನ್ನು ಇಂದಿನ ಜನಾಂಗ ಅರ್ಥ ಮಾಡಿಕೊಳ್ಳದೆ ಆರೋಗ್ಯಕರ, ಸಮಾನತೆಯ ಸಮಾಜಕ್ಕೆ ಮುಂದಾಗದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

    ನೀತಿಯ ಕಣಜಗಳಾಗಿರುವ ವಚನಗಳ ಮೂಲಕ ವಿಚಾರಧಾರೆಗಳನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಬಸವಣ್ಣ ನಿಜಕ್ಕೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ವೇದಿಯ ಸಂಚಾಲಕಿ ಡಾ.ಟಿ.ವಿ.ಭಾರತಿ, ಬಸವಣ್ಣ ವಿಚಾರಧಾರೆಗಳು ಸರ್ವ ಕಾಲಕ್ಕೂ, ಸರ್ವ ಜನಾಂಗಕ್ಕೂ ಪ್ರಸ್ತುತ. ವಿದ್ಯಾರ್ಥಿಗಳು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.

    ಪ್ರಾಧ್ಯಾಪಕರಾದ ಜಿ.ಯಶೋದಾ, ಡಾ.ಕೆ.ವಿ.ಲತಾ, ಉಪನ್ಯಾಸಕರಾದ ಮಹದೇವಯ್ಯ, ರಾಜ ನಾಯಕ್, ಸರ್ವಮಂಗಳಾ, ಸೌಮ್ಯಾ, ಸೌಜನ್ಯಾ, ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts