More

    ದೂರು ನೀಡಿದರೂ ಬಾರದ ಅಧಿಕಾರಿಗಳು, ಬೀದಿಯಲ್ಲೇ ಮದ್ಯ ಮಾರಾಟ ಮಾಡಿ ವ್ಯಕ್ತಿಯಿಂದ ವಿನೂತನ ಪ್ರತಿಭಟನೆ!

    ಹಾವೇರಿ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿಯೊಬ್ಬ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮದ ನಿವಾಸಿ ಮಂಜುನಾಥ್​, ಬೈಕ್ ಮೇಲೆ ಮದ್ಯವನ್ನಿಟ್ಟು ವಿನೂತನ ಪ್ರತಿಭಟನೆ ಕೈಗೊಂಡಿದ್ದು, ಈಗಲಾದರೂ ಅಧಿಕಾರಿಗಳು ಬರಬಹುದೇ ಎಂದು ಕಾದುಕುಳಿತಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಗ್ರಾಮದ ಕಡೆ ತಿರುಗಿಯೂ ನೋಡಿಲ್ಲ ಎಂದು ಮಂಜುನಾಥ್​ ಆರೋಪಿಸಿದ್ದಾರೆ.

    ಇಡೀ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರೂ, ಪ್ರಯೋಜನವಾಗಿಲ್ಲ ಇದು ಹೀಗೆ ಮುಂದುವರಿದರೆ ಇಡೀ ಊರೇ ಮದ್ಯದ ಮಳಿಗೆಯಾಗಲಿದೆ ಎಂದು ಮಂಜುನಾಥ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇನ್ನೆರಡು ದಿನದಲ್ಲಿ ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮತ್ತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts