More

    ಮೂತ್ರಪಿಂಡ ದಾನಿಗಳನ್ನು ಒದಗಿಸುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದವ ಏನಾದ?

    ಹೈದರಾಬಾದ್: ಮೂತ್ರಪಿಂಡ ದಾನಿಗಳನ್ನು ಒದಗಿಸಿಕೊಡುವುದಾಗಿ ಹೇಳಿ, ರೋಗಿಗಳಿಂದ ಹಣ ಪಡೆದು ಕ್ಯಾಸಿನೊದಲ್ಲಿ ವ್ಯಯಿಸಿದ ಆರೋಪಿದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
    25 ವರ್ಷದ ಎಂಬಿಎ ಪದವೀಧರನೇ ಈ ಅಕ್ರಮ ದಂಧೆಯ ಆರೋಪಿ. ಮೂತ್ರಪಿಂಡ ದಾನಿಗಳ ಅಗತ್ಯವಿರುವವರೊಂದಿಗೆ ಸಂಪರ್ಕ ಸಾಧಿಸಲು ತನ್ನ ವೈಯಕ್ತಿಕ ಸಂಪರ್ಕ ವ್ಯಕ್ತಿಗಳನ್ನು ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದಾನೆ.
    ಈ ವ್ಯಕ್ತಿ ಅಕ್ರಮ ದಂಧೆ ನಡೆಸಿ ಕೋಟ್ಯಂತರ ರೂ.ಗಳಿಸಿ ಶ್ರೀಲಂಕಾದ ಕ್ಯಾಸಿನೊದಲ್ಲಿ ವ್ಯಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ:  ಯುಪಿಎಸ್​​ಸಿ: ಇಂಜಿನಿಯಯರಿಂಗ್ ಸೇವೆ ಹಾಗೂ ಜಿಯೋ ಸೈಂಟಿಸ್ಟ್ ಪರೀಕ್ಷಾ ದಿನಾಂಕ ಪ್ರಕಟ

    ಆರೋಪಿಯನ್ನು ಡಿ ಷಣ್ಮುಖ ಪವನ್ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ತನ್ನ ಹಣಕಾಸಿನ ಸಮಸ್ಯೆಗಳನ್ನು ಕೊನೆಗೊಳಿಸಲು ಸ್ವತಃ ಮೂತ್ರಪಿಂಡವನ್ನು ಮಾರಿದ ನಂತರ ಈತ ಈ ದಂಧೆಯನ್ನು ಪ್ರಾರಂಭಿಸಿದ್ದಾನೆ.
    ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ನಷ್ಟ ಕಂಡ ನಂತರ ಪವನ್ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಲು ಮುಂದಾಗಿದ್ದ.
    ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಿದ ನಂತರ, ಪವನ್ ಶ್ರೀಲಂಕಾಕ್ಕೆ ಹೋಗಿ ಹಲವಾರು ವೈದ್ಯರು ಮತ್ತು ಏಜೆಂಟರನ್ನು ಸಂಪರ್ಕಿಸಿದ. ಮೂತ್ರಪಿಂಡದ ರೋಗಿಗಳಿಗೆ ದಾನಿಗಳನ್ನು ವ್ಯವಸ್ಥೆ ಮಾಡುವ ಏಜೆಂಟನಾಗಬೇಕೆಂದು ನಿರ್ಧರಿಸಿದ. ಆರೋಪಿ ತನ್ನ ಗ್ರಾಹಕರಿಂದ ಕಿಡ್ನಿಗೆ ಅಂದಾಜು 30 -50 ಲಕ್ಷ ರೂ.ವಸೂಲಿ ಮಾಡುತ್ತಿದ್ದ.

    ಇದನ್ನು ಓದಿ: ಸಾಲ ಭಾದೆ ತಾಳದೆ ತಂದೆ ಅಪ್ರಾಪ್ತೆಯರ ಮದುವೆ ಮಾಡಲು ಮುಂದಾಗಿದ್ದ : ಮದ್ವೆ ನಡೀತಾ?

    ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬಳು ಪೊಲೀಸರನ್ನು ಸಂಪರ್ಕಿಸಿ ಈ ಕುರಿತು ತಿಳಿಸಿದ್ದಾಳೆ. ಡಯಾಲಿಸಿಸ್‌ನಲ್ಲಿದ್ದ ತನ್ನ ಪತಿ ಇನ್ನೊಬ್ಬ ರೋಗಿಯಿಂದ ಪವನ್ ಬಗ್ಗೆ ತಿಳಿದುಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ. ಟರ್ಕಿ ಮತ್ತು ಶ್ರೀಲಂಕಾದಲ್ಲಿ ತನ್ನ ಪರಿಚಯಸ್ಥರ ಮೂಲಕ ಮೂತ್ರಪಿಂಡ ದಾನಿಗಾಗಿ ವ್ಯವಸ್ಥೆ ಮಾಡುವುದಾಗಿ ಏಜೆಂಟ್ ಭರವಸೆ ನೀಡಿದ್ದಾನೆ ಎಂದು ಆಕೆ ಹೇಳಿದ್ದಾಳೆ.
    ರೋಗಿಯ ಪಾಸ್‌ಪೋರ್ಟ್‌ನ ಛಾಯಾಪ್ರತಿಗಳೊಂದಿಗೆ ಪವನ್ 34 ಲಕ್ಷ ರೂ.ತೆಗೆದುಕೊಂಡರೂ ದಾನಿ ವ್ಯವಸ್ಥೆ ಮಾಡಲಿಲ್ಲ.”ತನಿಖೆಯ ವೇಳೆ, ಆತ ಈವರೆಗೆ ಕನಿಷ್ಠ 30 ರೋಗಿಗಳನ್ನು ಸಂಪರ್ಕಿಸಿದ್ದು ತಿಳಿದುಬಂದಿದೆ. ಆತ 7 ರೋಗಿಗಳಿಗೆ ಮಾತ್ರ ಮೂತ್ರಪಿಂಡ ದಾನಿಗಳನ್ನು ವ್ಯವಸ್ಥೆ ಮಾಡಿದ್ದು, ಉಳಿದವರಿಗೆ ಮೋಸ ಮಾಡಿದ್ದಾನೆ” ಎಂದು ಆರೋಪಿಸಲಾಗಿದ್ದು, ಶುಕ್ರವಾರ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ರೆಮ್ಡೆಸಿವಿರ್: ಕಾಳದಂಧೆಯಲ್ಲಿದ್ದವರು ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts