More

    ಮಳವಳ್ಳಿಯ ಕಾಲೇಜು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ: ಶರತ್​ ಉಳಿವಿಗಾಗಿ ಮುಂದುವರಿದ ಪ್ರಾರ್ಥನೆ

    ಮಳವಳ್ಳಿ(ಮಂಡ್ಯ): ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಕುಕ್ಕುಟ ಸಂವರ್ಧನಾ ಕೇಂದ್ರದ ಸಮೀಪ ಗುರುವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಗಳಾದ ಶರತ್​, ಶಶಾಂಕ್​, ಸುದರ್ಶನ್​ ಕಾಲೇಜು ಮುಗಿಸಿ ಮನೆಗೆ ತೆರಳಲೆಂದು ಬಸ್​ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಮೈಸೂರು ಕಡೆಯಿಂದ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಶರತ್​ ಎಂಬಾತನಿಗೆ ತೀವ್ರ ರಕ್ತ ಸ್ರಾವವಾಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಕೋಮಾದಲ್ಲಿದ್ದಾನೆ.

    ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಶರತ್​ನ  ಸುದ್ದಿ ಕೇಳಿದ ಪ್ರತಿಯೊಬ್ಬರೂ ವಿಧಿಗೆ ಹಿಡಿಶಾಪ ಹಾಕದೆ ಇರಲಾರರು. ರಾಗಿಬೊಮ್ಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಗೀತಾ ದಂಪತಿ ಪುತ್ರ ಶರತ್​, ಡಿ.23ರಂದು 19 ವರ್ಷ ತುಂಬಿ 20ನೇ ವಸಂತಕ್ಕೆ ಕಾಲಿಟ್ಟಿದ್ದ. ಕಾಲೇಜಿನಲ್ಲಿ ಸಹಪಾಠಿಗಳೆಲ್ಲರೂ ಶರತ್​ಗೆ ಶುಭ ಕೋರಿದ್ದರು. ತರಗತಿ ಮುಗಿದ ಬಳಿಕ ಖುಷಿಯಿಂದಲೇ ಸಹಪಾಠಿಗಳ ಜತೆ ಶರತ್​ ವಾಪಸ್​ ಮನೆಗೆ ಬರುತ್ತಿದ್ದ. ರಸ್ತೆಬದಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದು ಶರತ್​ನನ್ನು ಸಾವಿನ ದವಡೆಗೆ ನೂಕಿದೆ. ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಶರತ್​ ಚೇತರಿಕೆಗಾಗಿ ಹೆತ್ತರವು, ಸ್ನೇಹಿತರು, ಕಾಲೇಜು ಸಿಬ್ಬಂದಿ, ಗ್ರಾಮಸ್ಥರು, ಸಂಬಂಧಿಕರು ಪ್ರಾರ್ಥಿಸಿದ್ದಾರೆ. ಮಗನ ಉಳಿವಿಗಾಗಿ ಪಾಲಕರು ಕಣ್ಣೀರಿಡುತ್ತಾ, ದೇವರಿಗೂ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತೆ ಮಾಡಿದೆ. ಆದಷ್ಟು ಬೇಗ ಶರತ್​ ಗುಣಮುಖವಾಗಿ ಬರಲಿ.

    ಅಪಘಾತವೆಸಗಿದ ನಂತರ ಕಾರು ಚಾಲಕ ಪರಾರಿಯಾಗಿದ್ದು, ಈತ ಪೊಲೀಸ್​ ಇಲಾಖೆ ಸಿಬ್ಬಂದಿ ಎನ್ನಲಾಗಿದೆ. ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸರು ರಾತ್ರಿವರೆಗೂ ಯಾವುದೇ ಕ್ರಮ ವಹಿಸಲಿಲ್ಲವೆಂದು ಜಿಪಂ ಮಾಜಿ ಸದಸ್ಯ ಆರ್​.ಎನ್​.ವಿಶ್ವಾಸ್​ ಆರೋಪಿಸಿದ್ದಾರೆ. ಆರೋಪಿ ಇಲಾಖೆ ಸಿಬ್ಬಂದಿಯಾದ ಕಾರಣ ಪೊಲೀಸರು ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ.

    ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

    ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

    ನಂಜನಗೂಡಲ್ಲಿ ಅಪ್ರಾಪ್ತನ ಜತೆ 3 ಮಕ್ಕಳ ತಾಯಿ ಲವ್ವಿಡವ್ವಿ! ಇವಳ ಆಸೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts