More

    ಜನಪದ ಕಲಾವಿದ, ಪರಿಸರ ಪ್ರೇಮಿ, ಹಕ್ಕಿಗಳ ಕೂಗು ಆಲಿಸಿ ಸಮಯ ಹೇಳುತ್ತಿದ್ದ ಮಹಾದೇವ ವೇಳಿಪ ಇನ್ನಿಲ್ಲ

    ಉತ್ತರ ಕನ್ನಡ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ ಅವರು ಇಂದು(ಗುರುವಾರ) ನಿಧನರಾದರು.

    ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮಗ ದೇವಿದಾಸ ಅವರ ಜತೆ ವೇಳಿಪ ವಾಸವಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಮೂಲತಃ ಕೃಷಿಕರಾದ ವೇಳಿಪ ಅವರು ಅಡಿಕೆ, ತೆಂಗು,. ಬಾಳೆ, ಕಾಳುಮೆಣಸು, ಔಷಧ ಸಸ್ಯಗಳ ಜತೆಗೆ ಗೆಡ್ಡೆಗೆಣಸನ್ನೂ ಬೆಳೆಯುತ್ತಿದ್ದರು. ಪರಿಸರ ಮತ್ತು ಕಾಲಮಾನಕ್ಕೆ ತಕ್ಕಂತೆ ಜನಪದ ಹಾಡುಗಳನ್ನು ಸುಮಾರು ಸಾವಿರ ಲೆಕ್ಕದಲ್ಲಿ ನಿರಂತರವಾಗಿ ಹಾಡುವ ಕಲೆ, ಕೈಗೆ ವಾಚ್​ ಕಟ್ಟದೆ ಪಕ್ಷಿಗಳ ಕೂಗನ್ನು ಆಲಿಸಿ ನಿಖರವಾಗಿ ಸಮಯ ಹೇಳುವುದು ಕಲೆ ಅವರಲ್ಲಿ ಕರಗತವಾಗಿತ್ತು. ಹಾಡಿನ ಮೂಲಕ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ವೇಳಿಪ ಅವರು ನಿರಂತರವಾಗಿ ತೊಡಗಿಕೊಂಡಿದ್ದರು. ಪರಿಸರ ಪ್ರೇಮಿಯಾಗಿದ್ದ ವೇಳಿಪ, ಅರಣ್ಯ ಸಂರಕ್ಷಣೆಗಾಗಿ ಶ್ರಮಿಸಿದ್ದರು.

    ಇವರ ಸೇವೆಯನ್ನ ಪರಿಗಣಿಸಿ ರಾಜ್ಯ ಸರ್ಕಾರ 2021ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೋಯಿಡಾ ತಾಲೂಕಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೊದಲಿಗ ಎಂಬ ಕೀರ್ತಿಯೂ ಮಹಾದೇವ ವೇಳಿಪ ಅವರದ್ದು.

    ಅಪ್ಪು ಆಗಮನಕ್ಕಾಗಿ ಕಾಯುತ್ತಿದೆ ಹಿರಿಯ ಜೀವ! ಪುನೀತ್​ ಅಗಲಿರುವ ವಿಷಯವೇ ಗೊತ್ತಿಲ್ಲ… ಮನಕಲಕುತ್ತೆ ಈ ಸ್ಟೋರಿ

    ಟಿಕ್‌ಟಾಕ್ ಸ್ಟಾರ್ ಕಮಲಜ್ಜಿ ನಿಧನ: ಇಳಿವಯಸ್ಸಲ್ಲೂ ಸಹಸ್ರಾರು ಜನರನ್ನು ನಗಿಸುತ್ತಿದ್ದ ಅಜ್ಜಿ

    ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts