More

    ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್​ ಕಂಡಕ್ಟರ್​ ಹೆಸ್ರಲ್ಲೂ ಲೋನ್​ ಪಡೆದು ವಂಚನೆ

    ಬೆಂಗಳೂರು: ಸೈಬರ್​ ಕಳ್ಳರಿಗೆ ವಂಚನೆ ಮಾಡಲು ಇದೀಗ ನಿಮ್ಮ ಬ್ಯಾಂಕ್​ನಲ್ಲಿ ಹಣ ಇರಬೇಕಿಲ್ಲ. ಬದಲಿಗೆ ಆಧಾರ್​, ಪಾನ್​ ನಕಲು ಮತ್ತು ಮೊಬೈಲ್​ಗೆ ಬರುವ ಒಟಿಪಿ ಕೊಟ್ಟರೇ ಸಾಕು ನಿಮಗೇ ಗೊತ್ತಿಲ್ಲದೆ ನಿಮ್ಮ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡು ತಮ್ಮ ಖಾತೆಗೆ ಜಮೆ ಮಾಡಿಕೊಂಡು ಕ್ಷಣಾರ್ಧದಲ್ಲಿ ವಂಚನೆ ಮಾಡಲಿದ್ದಾರೆ. ಆಧಾರ್​, ಒಟಿಪಿ ಮತ್ತು ಬೆರಳಚ್ಚು ಕೊಡುವ ಮುನ್ನ ಎಚ್ಚರ!

    ಮೊಬೈಲ್​ಗೆ ಕರೆ ಮಾಡಿ ಆ್ಯಪ್​ ಡೌನ್​ಲೋಡ್​ ಮಾಡಿಸಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುವ ಗ್ಯಾಂಗ್​ ಒಂದು ಕಡೆಯಾದರೆ. ಮತ್ತೊಂದೆಡೆ ಆತ್ಮೀಯವಾಗಿ ವರ್ತಿಸಿ ಮೋಸ ಮಾಡುವ ಸೈಬರ್​ ಕಳ್ಳರು ಸುತ್ತಮುತ್ತಲೇ ಇದ್ದಾರೆ. ಇಂತಹದೊಂದು ಕಳ್ಳಾಟಕ್ಕೆ ಬಿಎಂಟಿಸಿ ನಿರ್ವಾಹಕ ಒಳಗಾಗಿದ್ದಾರೆ. 1 ಲಕ್ಷ ರೂಪಾಯಿ ಸಾಲಗಾರನಾಗಿ ಕೊನೆಗೆ ದಿಕ್ಕು ತೋಚದೆ ಪಶ್ಚಿಮ ವಿಭಾಗ ಸಿಇಎನ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಆರೋಪಿ ಪುಟ್ಟರಾಜು ಎಂಬಾತನ ವಿರುದ್ಧ ಎ್ಫ್​ಐಆರ್​ ದಾಖಲಿಸಿಕೊಂಡು ಸೈಬರ್​ ಪೊಲೀಸರು ವಂಚಕನ ಬಂಧನಕ್ಕೆ ಬಲೆಬೀಸಿದ್ದಾರೆ.

    ಕನಕನಗರದ ಬಿಎಂಟಿಸಿ ಬಸ್​ ನಿರ್ವಾಹಕ, ಕರ್ತವ್ಯ ನಿರ್ವಹಿಸಬೇಕಾದರೆ ಪ್ರಯಾಣಿಕನ ಸೋಗಿನಲ್ಲಿ ಬಂದ ಪುಟ್ಟರಾಜು ಕಂಡಕ್ಟರ್​ ಅನ್ನು ಪರಿಚಯ ಮಾಡಿಕೊಂಡಿದ್ದಾನೆ. ಪ್ರತಿದಿನ ಬಸ್​ಗೆ ಬರುತ್ತಿದ್ದ ಕಾರಣ ನಿರ್ವಾಹಕ ಸಹ ಪುಟ್ಟರಾಜು ಬಳಿ ಆತ್ಮೀಯತೆ ಬೆಳೆಸಿದ್ದರು.

    ನಿರ್ವಾಹಕನ ಆರ್ಥಿಕ ಸಂಕಷ್ಟ ತಿಳಿದ ಪುಟ್ಟರಾಜು ಸುಲಭವಾಗಿ 1 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿದ್ದಾನೆ. ಅದಕ್ಕೆ ಒಪ್ಪಿದಾಗ ನಿರ್ವಾಹಕನ ಮೊಬೈಲ್​ ಪಡೆದು ಅದರಲ್ಲಿದ್ದ ಆಧಾರ್​, ಪಾನ್​ ಕಾರ್ಡ್​, ಬ್ಯಾಂಕ್​ ಪಾಸ್​ ಬುಕ್ ಫೋಟೋಗಳನ್ನು ತನ್ನ ಮೊಬೈಲ್​ಗೆ ಕಳುಹಿಸಿಕೊಂಡಿದ್ದಾನೆ. ಆನಂತರ ನಿರ್ವಾಹಕನ ಮೊಬೈಲ್​ಗೆ ಬಂದ ಒಟಿಪಿ ಸಹ ಪಡೆದುಕೊಂಡಿದ್ದಾನೆ.

    ಸ್ವಲ್ಪ ಸಮಯದ ಬಳಿಕ ನಿಮ್ಮ ಮೊಬೈಲ್​ನಲ್ಲಿ ಇಂಟರ್​ನೆಟ್​ ಸರಿಯಾಗಿ ಕನೆಕ್ಟ್​ ಆಗುತ್ತಿಲ್ಲ. ನಾಳೆ ಬಂದು ಸಾಲ ಕೊಡಿಸುತ್ತೇನೆ ಎಂದು ಹೇಳಿ ಅಲ್ಲಿಂದ ಪುಟ್ಟರಾಜು ಹೋಗಿದ್ದಾನೆ. ಮರು ದಿನ ಪುಟ್ಟರಾಜು ಬಸ್​ಗೆ ಬಂದಿಲ್ಲ. ಇದಾದ ಮೇಲೆ ಮೊಬೈಲ್​ಗೆ ಬಂದಿರುವ ಸಂದೇಶಗಳನ್ನು ಪರಿಶೀಲನೆ ನಡೆಸಿದಾಗ ನಿರ್ವಾಹಕನ ಹೆಸರಿನಲ್ಲಿ 1 ಲಕ್ಷ ರೂ. ಸಾಲ ಮಂಜೂರಾಗಿ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್​ಗೆ ಕರೆ ಮಾಡಿದಾಗ ಸ್ವಿಚ್​ ಆಫ್​ ಆಗಿರುವುದು ತಿಳಿದು ಕೊನೆಗೆ ನಿರ್ವಾಹಕ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts