More

    ಕಾರವಾರದ ಹಬ್ಬುವಾಡದಲ್ಲಿ ಆತಂಕ ತಂದ ಚಿರತೆ ಓಡಾಟ

    ಕಾರವಾರ: ನಗರದ ಹೃದಯ ಭಾಗ ಹಬ್ಬುವಾಡದಲ್ಲಿ ಚಿರತೆಯ ಆತಂಕ ಕಾಡಿದೆ. ಗುತ್ತಿಂಬೀರ ದೇವಸ್ಥಾನ ಹಾಗೂ ಅದರ ಕೆಳಗಿನ ಗುನಗಿವಾಡ ಭಾಗದಲ್ಲಿ ಚಿರತೆಯೊಂದು ಓಡಾಟ ನಡೆಸಿದೆ. ಸಾಕು ಪ್ರಾಣಿಗಳ ಮೇಲೆ ದಾಳಿ ಆರಂಭಿಸಿದೆ. ಇದು ಜನರಲ್ಲಿ ನಡುಕ ಹುಟ್ಟಿಸಿದೆ.
    ಈ ಪ್ರದೇಶದಲ್ಲಿ ವರ್ಷಗಳ ಹಿಂದಿನಿಂದಲೂ ಚಿರತೆಯ ಓಡಾಟವಿತ್ತು. ಕಲ್ಲೊಂದರ ಮೇಲೆ ಬಂದು ಕುಳಿತು ಚಿರತೆ ವಿಶ್ರಾಂತಿ ಪಡೆಯುತ್ತಿತ್ತು. ದೇವಸ್ಥಾನಕ್ಕೆ ಬಂದವರಿಗೂ ಕಾಣಿಸಿಕೊಂಡಿತ್ತು. ಕಳೆದ ಜೂನ್ ಮೊದಲ ವಾರದಲ್ಲಿ ಅದನ್ನು ಕಂಡು ಫೋಟೋ ಹೊಡೆದವರೂ ಇದ್ದಾರೆ. ಆದರೆ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ ಉದಾಹರಣೆಗಳಿಲ್ಲ. ಇದರಿಂದ ಸ್ಥಳೀಯರು ಚಿರತೆಯ ಇರುವಿನ ಬಗ್ಗೆ ಅಷ್ಟೊಂದು ಭಯಭೀತರಾಗಿರಲಿಲ್ಲ. ಶುಕ್ರವಾರ ಸಾಯಂಕಾಲದ ಹೊತ್ತಿಗೆ ಚಿರತೆ ಮನೆಯ ಅತೀ ಸಮೀಪ ಬಂದು ಬೆಕ್ಕೊಂದನ್ನು ಹೊತ್ತು ಒಯ್ದಿದೆ. ಅದನ್ನು ಕಣ್ಣಾರೆ ಕಂಡವರು ಕಂಗಾಲಾಗಿದ್ದಾರೆ. ರಾತ್ರಿ ಮತ್ತೆ ಮಂಗ, ನಾಯಿಗಳು ಆತಂಕದಿಂದ ಕೂಗುತ್ತ ಚಿರತೆಯ ಇರುವನ್ನು ಹೇಳುತ್ತಿದ್ದವು. ಇದರಿಂದ ಸ್ಥಳೀಯರು ಆತಂಕಗೊಂಡು ಸಂಜೆಯಾಗುತ್ತಿದ್ದಂತೆ ಪಟಾಕಿ ಹೊಡೆಯುತ್ತಿದ್ದಾರೆ. ಮನೆಯಿಂದ ಹೊರ ಬೀಳಲು ಅನುಮಾನಿಸುತ್ತಿದ್ದಾರೆ. ಒತ್ತಟ್ಟಿಗೆ ಮನೆಗಳಿದ್ದು, ಮಕ್ಕಳು ಓಡಾಟ ನಡೆಸುತ್ತಾರೆ. ನಾಯಿ, ಕೋಳಿ, ದನ ಸಾಕಿದವರಿದ್ದಾರೆ. ಇದರಿಂದ ಸೂಕ್ತ ಕ್ರಮ ವಹಿಸುವಂತೆ ಈ ಭಾಗದ ಜನ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts