More

    ‘ಫ್ಲೈಯಿಂಗ್‌ ಸಿಖ್’ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್​ ಕರೊನಾಗೆ ಬಲಿ, ಅವರ ಕೊನೇ ಆಸೆ ಈಡೇರಲೇ ಇಲ್ಲ

    ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟ ಖ್ಯಾತ ಅಥ್ಲೀಟ್ ಮಿಲ್ಖಾ ಸಿಂಗ್‌ ; (91) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

    ‘ಫ್ಲೈಯಿಂಗ್‌ ಸಿಖ್’ ಎಂದೇ ಖ್ಯಾತಿ ಪಡೆದಿದ್ದ ಮಿಲ್ಖಾ ಸಿಂಗ್ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜೂನ್ 3ರಂದು ಚಂಡೀಗಢದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿ ಹಾಗೂ ಭಾರತದ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್(85) ಜೂ.13 ರಂದು ಕರೊನಾ ಸೋಂಕಿಗೆ ಬಲಿಯಾಗಿದ್ದರು. ಆ ವೇಳೆ ಕರೊನಾ ಸೋಂಕು, ನ್ಯುಮೇನಿಯಾದಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್​ ಪಿಜಿಐಎಂಆರ್ ಆಸ್ಪತ್ರೆಯ ಐಸಿಯುನಲ್ಲಿದ್ದರಿಂದ ಪತ್ನಿಯ ಅಂತ್ಯಕ್ರಿಯೆ ಕಾರ್ಯದಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಮಿಲ್ಖಾ ಸಿಂಗ್​ ಕೂಡ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ. ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

    'ಫ್ಲೈಯಿಂಗ್‌ ಸಿಖ್' ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್​ ಕರೊನಾಗೆ ಬಲಿ, ಅವರ ಕೊನೇ ಆಸೆ ಈಡೇರಲೇ ಇಲ್ಲ

    1960ರ ರೋಮ್​ ಒಲಿಂಪಿಕ್ಸ್​ನ 400 ಮೀಟರ್ಸ್​ ಓಟದಲ್ಲಿ ನಾಲ್ಕನೇ ಸ್ಥಾನ ಗಳಿದ್ದ ಮಿಲ್ಖಾಸಿಂಗ್​, 1956 ಮತ್ತು 1964ರ ಒಲಿಂಪಿಕ್ಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. 1958ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ 4 ಬಾರಿ ಸ್ವರ್ಣ ಪದಕ ಗೆದ್ದ ಹೆಗ್ಗಳಿಕೆ ಅವರದ್ದು.

    ಒಲಿಂಪಿಕ್ಸ್​ಗೆ ಅಥ್ಲೆಟಿಕ್ಸ್​ ಕಿರೀಟವಿದ್ದಂತೆ. ಎಲ್ಲ ದೇಶದ ಅಥ್ಲೀಟ್​ಗಳು ಸ್ಪರ್ಧಿಸುತ್ತಾರೆ. ಈ ವಿಭಾಗದಲ್ಲಿ ಭಾರತಕ್ಕೊಂದು ಪದಕ ಬರಲೇಬೇಕು ಎಂಬುದು ಮಿಲ್ಖಾ ಸಿಂಗ್​ರ ಕೊನೆಯ ಆಸೆ. ನಾನು ಸಾಯುವುದರೊಳಗೆ ಭಾರತದ ಅಥ್ಲೀಟ್​ ಒಲಿಂಪಿಕ್​ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಬೇಕು. ಇದೇ ನನ್ನ ಕೊನೆಯ ಆಸೆ ಎಂದು ಹಲವು ಸಂದರ್ಶನಗಳಲ್ಲಿ ಮಿಲ್ಖಾಸಿಂಗ್​ ಹೇಳಿದ್ದರು. 1960ರ ರೋಮ್​ ಒಲಿಂಪಿಕ್ಸ್​ನಲ್ಲಿ ಫೈನಲ್​ ತಲುಪಿದ್ದ ಮಿಲ್ಖಾಸಿಂಗ್​, ಕೊಂಚದರಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಆದರೆ ಮಿಲ್ಖಾಸಿಂಗ್​ರ ಕೊನೇ ಆಸೆ ಈಡೇರಲೇ ಇಲ್ಲ.

    ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

    ಜೂ.21ರಿಂದ ಬಿಎಂಟಿಸಿ ಬಸ್​ ಸಂಚಾರ! ಬಸ್ ಹತ್ತೋಕು ಮುನ್ನ ಈ ಷರತ್ತುಗಳ ಪಟ್ಟಿ ಓದಿ

    ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts