More

    ಜಾತಿಗೊಂದು ನಾಯಕರ ಜಯಂತಿ ಸರಿಯಲ್ಲ

    ರಾಯಚೂರು: ಇತ್ತೀಚಿನ ದಿನಗಳಲ್ಲಿ ಜಾತಿಗೊಂದು ನಾಯಕರ ಜಯಂತಿಗಳನ್ನು ಆಚರಿಸಲು ಸರ್ಕಾರವೇ ಪ್ರೇರಣೆ ನೀಡುತ್ತಿದೆ. ಯಾವ ಜಾತಿ ಜಯಂತಿಗಳನ್ನು ಸರ್ಕಾರದಿಂದ ಆಚರಿಸಬಾರದು ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.
    ಸ್ಥಳೀಯ ಕನ್ನಡ ಭವನದಲ್ಲಿ ನೆಹರು ಅಜಾದ್ ಸಾಮಾಜಿಕ ಸಬಲೀಕರಣ ಸಂಘ ಮತ್ತು ಟಿಪ್ಪು ಸುಲ್ಥಾನ್ ಅಭಿಮಾಇ ಸೇನೆಯಿಂದ ಭಾನುವಾರ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಟಿಪ್ಪು ಜಯಂತಿಯನ್ನು ಮುಸ್ಲಿಮರೇ ಆಚರಿಸಬೇಕು ಎನ್ನುವುದು ಸರಿಯಾದ ಮನೋಭಾವವಲ್ಲ ಎಂದರು.
    ಟಿಪ್ಪು ಸುಲ್ತಾನ್ ಜಾರಿಯಲ್ಲಿ ಮುಸ್ಲಿಮನಾಗಿದ್ದರೂ ಆತ ಮಾಡಿದ ಕಾರ್ಯವನ್ನು ನಾವೆಂದು ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಶೃಂಗೇರಿ ಶಾರದೆಯ ಮಠವನ್ನು ಧ್ವಂಸಗೊಳಿಸಿದಾಗ ಟಿಪ್ಪು ಸುಲ್ಥಾನ್ ಶೃಂಗೇರಿ ಮಠವನ್ನು ಪುನರ್ ಪ್ರತಿಷ್ಠಾಪಿಸಿದ್ದ. ಅದಕ್ಕಾಗಿ ಬ್ರಾಹ್ಮಣರು ಆತನನ್ನು ವಿಶೇಷವಾಗಿ ಗೌರವಿಸಿ ಜಯಂತಿಯನ್ನು ಆಚರಿಸಬೇಕು.
    ದೇಶದೊಳಗೆ ರೇಷ್ಮೆ ವ್ಯವಸಾಯ, ಉದ್ದಿಮೆಯನ್ನು ಪ್ರಾರಂಭಿಸಿ ರೈತರು ಮತ್ತು ರೇಷ್ಮೆ ಉದ್ಯಮಿಗಳಿಗೆ ದಾರಿ ತೋರಿಸಿದ ಮಹಾನ್ ವ್ಯಕ್ತಿ ಟಿಪ್ಪು ಸುಲ್ತಾನ್ ಆಗಿದ್ದು, ಕನ್ನಡದಲ್ಲಿ ಆಡಳಿತವನ್ನು ಜಾರಿಗೆ ತಂದಿದ್ದು ಟಿಪ್ಪು ಸುಲ್ತಾನ್ ಆಗಿದ್ದಾನೆ ಎಂದು ರಾಘವೇಂದ್ರ ಕುಷ್ಟಗಿ ಹೇಳಿದರು.
    ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಖಾಜಾವಳಿ ಈಚನಾಳ ಮಾತನಾಡಿ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಗತಿಯನ್ನು ಮುನ್ನಡೆಯಲು ಟಿಪ್ಪು ಸುಲ್ತಾನ್ ಪ್ರಯತ್ನಿಸಿದ್ದ. ಜನರಿಗೆ ಅನೇಕ ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ ಎಂದರು.
    ಸಾಹಿತಿ ಕೊರೇನಲ್ ಮಾತನಾಡಿ, ಕನ್ನಡಿಗರ ಶೌರ್ಯ, ಸಾಹಸವನ್ನು ವಿಶ್ವಕ್ಕೆ ಪರಿಚಿಸಿದ್ದು ಟಿಪ್ಪು ಸುಲ್ತಾನ್. ಎಲ್ಲ ಜನಾಂಗದವನ್ನು ಒಗ್ಗೂಡಿಸಿಕೊಂಡು ದೇಶವನ್ನು ಆಳಿದ ಟಿಪ್ಪು ಸುಲ್ತಾನ್, ದಲಿತರ ಹಾಗೂ ಬಡವರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಿದ್ದರು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಾಹಿತಿ ಆಂಜಿನೇಯ ಜಾಲಿಬೆಂಚಿ, ನೆಹರು ಅಜಾದ್ ಸಾಮಾಜಿಕ ಸಬಲೀಕರ ಸಂಘದ ಅಧ್ಯಕ್ಷ ರಸೂಲ್ ಅಹ್ಮದ್, ಕನ್ನಡ ಕ್ರಿಯಾ ಸಮಿತಿ ಮಾಜಿ ಅಧ್ಯಕ್ಷ ಬಷೀರ್ ಅಹ್ಮದ್ ಹೊಸಮನಿ, ಮುಖಂಡರಾದ ಭೀಮಣ್ಣ ಮಾಡಗಿರಿ, ಖಾದರ್‌ಸಾಬ್, ಇಮಾಮುದ್ದೀನ್ ಮಾಡಗಿರಿ, ಮಹ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts