More

    ಮೈಸೂರು ಅರಮನೆಯಲ್ಲಿ ಮರಿಗೆ ಜನ್ಮ ನೀಡಿದ ಲಕ್ಷ್ಮೀ ಆನೆ! ಆನೆ ಗರ್ಭಿಣಿ ಎಂಬುದು ನಮ್ಗೆ ಗೊತ್ತೇ ಇರಲಿಲ್ಲ… ಎಂದ ಅಧಿಕಾರಿಗಳು

    ಮೈಸೂರು: ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಲಕ್ಷ್ಮೀ ಆನೆ ಮೈಸೂರು ಅರಮನೆ ಆವರಣದಲ್ಲೇ ಗಂಡು ಮರಿಗೆ ಜನ್ಮ ನೀಡಿದೆ. ತಾಯಿ ಆನೆ ಮತ್ತು ಮರಿ ಎರಡೂ ಆರೋಗ್ಯವಾಗಿದ್ದು, ಖುಷಿಯ ವಿಚಾರವೇ ಆದರೂ ಅನಗತ್ಯವಾಗಿ ಗರ್ಭಿಣಿ ಆನೆಯನ್ನು ಕರೆತಂದು ಹಿಂಸಿಸಿದ್ರಾ? ಎಂಬ ಪ್ರಶ್ನೆ ಎದ್ದಿದೆ.

    ಆನೆಗಳ ಸಾಗಣೆ ಮಾರ್ಗಸೂಚಿ ಅನ್ವಯ ಗರ್ಭಿಣಿ ಆನೆಗಳನ್ನು ಸ್ಥಳಾಂತರಿಸಲು ಅವಕಾಶವಿಲ್ಲ. ಆನೆಗಳ ಗರ್ಭಾವಸ್ಥೆಯ ಅವಧಿ ಕನಿಷ್ಠ 18 ತಿಂಗಳು. ಕಳೆದ ದಸರಾ ಅವಧಿಯಲ್ಲೇ ಲಕ್ಷ್ಮೀ ಆನೆ ಗರ್ಭಿಣಿ ಆಗಿದ್ದರೂ ಅರಣ್ಯ ಅಧಿಕಾರಿಗಳಿಗೆ ಗೊತ್ತಾಗಿಲ್ಲ. ಈ ಬಾರಿ ತುಂಬು ಗರ್ಭಿಣಿ ಆನೆಯನ್ನು ಕಳೆದ ತಿಂಗಳೇ ಅರಮನೆ ಆವರಣಕ್ಕೆ ಕರೆತಂದು ದಸರಾ ಹಿನ್ನೆಲೆ ತಾಲೀಮು ನಡೆಸಲಾಗಿದೆ. ಲಕ್ಷ್ಮೀ ಆನೆ ಮರಿಗೆ ಜನ್ಮ ನೀಡುವವರೆಗೂ ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಅರಿವಿಗೇ ಬಂದಿಲ್ಲ ಏಕೆ ಎಂಬ ಪ್ರಶ್ನೆ ಎದ್ದಿದೆ. ಮೊನ್ನೆ ಕೂಡ ಕುಶಾಲತೋಪು ತಾಲೀಮಿನಲ್ಲೂ ಲಕ್ಷ್ಮೀ ಆನೆ ಪಾಲ್ಗೊಂಡಿತ್ತು.

    ಮೈಸೂರು ಅರಮನೆಯಲ್ಲಿ ಮರಿಗೆ ಜನ್ಮ ನೀಡಿದ ಲಕ್ಷ್ಮೀ ಆನೆ! ಆನೆ ಗರ್ಭಿಣಿ ಎಂಬುದು ನಮ್ಗೆ ಗೊತ್ತೇ ಇರಲಿಲ್ಲ... ಎಂದ ಅಧಿಕಾರಿಗಳು

    ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಡಿಸಿಎಫ್ ಕರಿಕಾಳನ್, ಲಕ್ಷ್ಮೀ ಆನೆ ಗರ್ಭಿಣಿ ಎಂದು ನಮಗೆ ಗೊತ್ತಿರಲಿಲ್ಲ. ಕ್ಯಾಂಪ್​ನಲ್ಲಿ ಇದ್ದಾಗಲೂ ಲಕ್ಷ್ಮೀ ಗರ್ಭಿಣಿ ಎಂಬುದು ತಿಳಿದಿರಲಿಲ್ಲ. ದಸರಾಗೂ ಮುನ್ನ ಆನೆಗಳನ್ನ ತಪಾಸಣೆ ಮಾಡಲಾಗಿದೆ. ಆ ವೇಳೆಯೂ ಲಕ್ಷ್ಮೀ ಆನೆ ಗರ್ಭಿಣಿ ಎಂದು ಗೊತ್ತಗಿಲ್ಲ. ನಿನ್ನೆ(ಮಂಗಳವಾರ) ರಾತ್ರಿ ಆನೆಯ ಚಲನವಲನ ಬದಲಾದ ಕಾರಣ ಆನೆಯ ಮೂತ್ರ ಮತ್ತು ರಕ್ತವನ್ನ ಪರೀಕ್ಷೆಗೆ ಕಳುಹಿಸಿದೆವು. ವರದಿ ಬರುವ ಮುನ್ನವೇ ಲಕ್ಷ್ಮೀ, ಅಂದರೆ ಮಂಗಳವಾರ ರಾತ್ರಿ 8.15ಕ್ಕೆ ಗಂಡು ಮರಿಗೆ ಜನ್ಮ ನೀಡಿದೆ. ಇಬ್ಬರು ವೈದ್ಯರು ಲಕ್ಷ್ಮೀ ಆನೆಯನ್ನ ನೋಡಿಕೊಳ್ಳುತ್ತಿದ್ದಾರೆ. ಅರಮನೆಗೆ ಬಂದ ಮೇಲೆ ಆನೆಗೆ ಒಳ್ಳೆಯ ಆಹಾರ ನೀಡಿದ್ದೇವೆ. ಪ್ರತಿನಿತ್ಯ ವಾಕಿಂಗ್ ಮಾಡಿರುವುದು ಆನೆಗೆ ಸಹಾಯವಾಗಿದೆ. ಕೇವಲ 10 ನಿಮಿಷದಲ್ಲಿ ಲಕ್ಷ್ಮೀ, ಮರಿ ಆನೆಗೆ ಜನ್ಮ ನೀಡಿದೆ ಎಂದು ವಿವರಿಸಿದರು.

    ಗರ್ಭಿಣಿ ಎಂದು ಗೊತ್ತಿದ್ದರೆ ಲಕ್ಷ್ಮೀ ಆನೆಯನ್ನು ಖಂಡಿತವಾಗಿಯೂ ಇಲ್ಲಿಗೆ ಕರೆತರುತ್ತಿರಲಿಲ್ಲಾ. ಕಾಡಿಗೆ ಹೋದಾಗ ಆನೆಗೆ ಕ್ರಾಸ್ ಆಗಿರಬಹುದು. ಎಲ್ಲ ಆನೆಗಳ ರಿಪೋರ್ಟ್ ಪಡೆದ ನಂತರ ದಸರಾಗೆ ಕರೆತರಲಾಗಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಈಗಾಗಲೇ ಆನೆಯ ಆರೋಗ್ಯ ವಿಚಾರಿಸಿದ್ದಾರೆ. ಆನೆಗೆ ಉತ್ತಮ ಹೆಸರು ಸೂಚಿಸುವಂತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಮನವಿ ಮಾಡಿದ್ದೇವೆ. ತಾಯಿ ಮತ್ತು ಮರಿ ಎರಡೂ ಆರೋಗ್ಯವಾಗಿವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರಮನೆಯಲ್ಲಿ ಆನೆಯೊಂದು ಜನಿಸಿದೆ ಎಂದು ಡಿಸಿಎಫ್ ಕರಿಕಾಳನ್ ಸಂತಸ ವ್ಯಕ್ತಪಡಿಸಿದರು.

    ತಮ್ಮನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿನ ದಾರಿ ಹಿಡಿದ ತಾಯಿ-ಮಗ! ಸಾವಿಗೂ ಮುನ್ನ ಮನದ ನೋವನ್ನು ಬಿಚ್ಚಿಟ್ಟ ಮಹಿಳೆ

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

    ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts