More

    ಸಂತೋಷ್​ ಆತ್ಮಹತ್ಯೆಗೂ ನನ್ಗೂ ಯಾವ್ದೇ ಸಂಬಂಧವಿಲ್ಲ… ರಾಜೀನಾಮೆ ನೀಡೋ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

    ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್​ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್​ನೋಟ್​ ಬರೆದಿಟ್ಟು ಉಡುಪಿಯ ಲಾಡ್ಜ್​ವೊಂದರಲ್ಲಿ ಆತ್ಮಹತ್ಮೆಗೆ ಶರಣಾಗಿದ್ದು, ರಾಜಕೀಯ ತಿರುವು ಪಡೆಯುತ್ತಿದೆ. ವಿಪಕ್ಷ ನಾಯಕರು ಈಶ್ವರಪ್ಪ ವಿರುದ್ಧ ಕೊಲೆ ಕೇಸ್​ ಹಾಕಬೇಕು, ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಸಂತೋಷ್​ ಸಾವಿನ ಬಳಿಕ ಸುದ್ದಿಗಾರರಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ‘ಸಂತೋಷ್​ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ… ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಆತನ ಮೇಲೆ ಮಾನನಷ್ಟ ಕೇಸ್​ ಹಾಕಿದ್ದೆ. ಅದಕ್ಕೆ ಕೋರ್ಟ್​ ನೋಟಿಸ್​ ಕೊಟ್ಟಿದ್ದು, ಅದಕ್ಕೆ ಅವರು ಉತ್ತರಿಸಬೇಕಿತ್ತು. ಅದನ್ನು ಬಿಟ್ಟು ಸತ್ತರೆ ನಾನೇನು ಮಾಡಲಿ?’ ಎಂದಿದ್ದಾರೆ.

    ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ‘ನನ್ನ ವಿರುದ್ಧ ಆಪಾದನೆ ಮಾಡಿದವರು ಕೋರ್ಟ್​ನಲ್ಲಿ ಹೋರಾಡಬೇಕಿತ್ತು. 40% ಕಮಿಷನ್​ ಪಡೆದಿದ್ದಾರೆ ಎಂದು ನನ್ನ ವಿರುದ್ಧ ಆರೋಪಿಸಿ ಮಾನಹಾನಿ ಮಾಡಿದರು ಎಂದು ನಾನು ಕೋರ್ಟ್​ಗೆ ಹೋದೆ. ಕೋರ್ಟ್​ ನೋಟಿಸ್​ ಕೊಟ್ಟ ನಂತರ ನನ್ನ ವಿರುದ್ಧದ ಆರೋಪವನ್ನು ಸಾಬೀತು ಮಾಡಬೇಕಿತ್ತು. ನೋಟಿಸ್​ ಅನ್ನು ಅವರು ಎದುರಿಸಬೇಕಿತ್ತು. ಅದನ್ನ ಬಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ನಾನೇಗೆ ಹೊಣೆಯಾಗ್ತೀನಿ? ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಸ್ಪಷ್ಟನೆ ಪಡಿಸಿದರು.

    ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ! ಸಾವಿಗೂ ಮುನ್ನ ಡೆತ್​ನೋಟ್​ ರವಾನೆ

    ತಿಂಗಳ ಹಿಂದಷ್ಟೇ ಜನಿಸಿದ್ದ ಮುದ್ದು ಮಗುವಿಗೆ ತಂದೆಯಾಗಿದ್ದ ಪೊಲೀಸ್​ ಪೇದೆ ಬಾಳಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts