ಕೊಡಗು: ಮಧ್ಯಪ್ರದೇಶದಲ್ಲಿ ಕೊಡಗು ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ತನ್ನ ಮನದಾಳದ ನೋವನ್ನ ಅಕ್ಷರಕ್ಕಿಳಿಸಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡೆತ್ನೋಟ್ ಪತ್ರ ಬರೆದಿದ್ದಾನೆ.
ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದ ದರ್ಶನ್(28) ಆತ್ಮಹತ್ಯೆ ಮಾಡಿಕೊಂಡವ. ಈತ ಮಧ್ಯಪ್ರದೇಶದ ಸಿಂಗ್ರೌಳಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇ ಡೆತ್ನೋಟ್ ಬರೆದಿಟ್ಟು ಸಾವಿನ ಮನೆಯ ಕದ ತಟ್ಟಿದ್ದಾನೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಅಷ್ಟಕ್ಕೂ ದರ್ಶನ್ ಸಾವಿಗೆ ಕಾರಣ ಏನು ಗೊತ್ತಾ? ಸ್ವಗ್ರಾಮದ ಯುವತಿ ಜತೆಗಿನ 8 ವರ್ಷದ ಪ್ರೀತಿ…
ಸ್ವಗ್ರಾಮದ ಯುವತಿ ಮತ್ತು ದರ್ಶನ್ ಇಬ್ಬರೂ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇವರಿಬ್ಬರ ಮದುವೆಗೂ ಮನೆಯಲ್ಲಿ ಒಪ್ಪಿಗೆ ಸಿಕ್ಕಿತ್ತಂತೆ. ಯುವತಿಯೂ ಮದುವೆಗೆ ಓಕೆ ಅಂದಿದ್ದಳಂತೆ. 4 ತಿಂಗಳ ಹಿಂದೆ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಮೇಲೆ ಯುವತಿಗೆ ಪ್ರೀತಿಯಾಗಿದ್ದು, ಆತನನ್ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಇದೇ ಕಾರಣಕ್ಕೆ ಯುವತಿ ದರ್ಶನ್ ಜತೆ ವಿವಾಹ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ದರ್ಶನ್, ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಪ್ರೇಯಸಿ ಶಿಲ್ಪಾ ಮತ್ತು ಆಕೆಯ ಮನೆಯವರು ಕಾರಣ ಎಂದು ಉಲ್ಲೇಖಿಸಿದ್ದಾನೆ.
ಸಖತ್ ವೈರಲ್ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!
ಲವ್-ಸೆಕ್ಸ್ ದೋಖಾ: ಎಎಸ್ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್ನೋಟ್
ಡೇಟಿಂಗ್ಗಾಗಿ ಹಾತೊರೆದು ಆತನ ಗೆಳೆತನ ಬೆಳೆಸಿದ ಬೆನ್ನಲ್ಲೇ ಮಹಿಳಾ ಉದ್ಯೋಗಿಗೆ ಕಾದಿತ್ತು ಆಘಾತ!