More

    ಕೃಷಿ ವಿವಿ ಪ್ರಾಧ್ಯಾಪಕ ಸಾವು: ಮೃತದೇಹ ಸಿಕ್ಕ 10 ಕಿ.ಮೀ ದೂರದಲ್ಲಿ ಕಾರು ಪತ್ತೆ! ಸಾವಿನ ಸುತ್ತ ಅನುಮಾನದ ಹುತ್ತ

    ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಪ್ರಾಧ್ಯಾಪಕ ಡಾ.ಎಸ್. ಗಂಗಾಪ್ರಸಾದ್ ಅವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಸಿಕ್ಕ 10 ಕಿ.ಮೀ. ದೂರದಲ್ಲಿ ಅವರ ಕಾರು ಪತ್ತೆಯಾಗಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ದೊಡ್ಡನಾಳು ಗ್ರಾಮದ ಡಾ.ಎಸ್.ಗಂಗಾಪ್ರಸಾದ್ 20 ವರ್ಷಗಳಿಂದ ಶಿವಮೊಗ್ಗದ ಕೃಷಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು.ಸಸ್ಯ ತಳಿ ಹಾಗೂ ಅನುವಂಶೀಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಿವಮೊಗ್ಗದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದ ಅವರು ಸೋಮವಾರ ಮನೆಯಿಂದ ತೆರಳಿದ್ದು, ವಿಶ್ವವಿದ್ಯಾಲಯಕ್ಕೆ ಹೋಗಿರಲಿಲ್ಲ. ಸಂಜೆ ಮನೆಗೂ ಬಂದಿರಲಿಲ್ಲ. ಹೊನ್ನಾಳಿ ತಾಲೂಕು ಚಿಕ್ಕಬಾಸೂರು ತಾಂಡಾ (ವಿಜಯಪುರ)ದ ಕೆರೆಯಲ್ಲಿ ಮಂಗಳವಾರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಗಂಗಪ್ರಸಾದ್ ಅವರ ವಿದ್ಯಾರ್ಥಿಯೊಬ್ಬರು ಪ್ರಾಧ್ಯಪಕರ ಶವವನ್ನು ಗುರುತಿಸಿದ್ದಾರೆ. ಕೆರೆಯಲ್ಲಿ ಶವ ಪತ್ತೆಯಾದ ನಂತರ ಶೋಧ ಮಾಡಿದಾಗ ಅವರು ಕಾರು ಸಾಸ್ವೆಹಳ್ಳಿಯ ಎಡಿವಿಎಸ್ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾದ ಸ್ಥಳದಿಂದ ಸುಮಾರು 10 ಕಿಮೀ ದೂರದಲ್ಲಿ ಕಾರು ಸಿಕ್ಕಿದೆ.

    ಗಂಗಾಪ್ರಸಾದ್​ ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಕೊಲೆ ಮಾಡಿ ಕೆರೆಗೆ ಶವ ಹಾಕಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಆತ್ಮಹತ್ಯೆ ಮಾಡಿಕೊಳ್ಳಲು ಶಿವಮೊಗ್ಗದಿಂದ ಅಲ್ಲಿಗೆ ಹೋಗುವ ಅಗತ್ಯವಿರಲಿಲ್ಲ. ಕಾರನ್ನು ಕೆರೆಯಿಂದ 10 ಕಿಮೀ ದೂರ ನಿಲ್ಲಿಸಿ ನಡೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಸಹಜ. ಹೀಗಾಗಿ ಕೊಲೆ ಮಾಡಿ ಕೆರೆಗೆ ಎಸೆದಿರá-ವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಶಂಕಿಸಲಾಗಿದೆ.

    ಹೊನ್ನಾಳಿ ತಾಲೂಕು ಚಿಕ್ಕಬಾಸೂರು ತಾಂಡಾಗೂ ಅವರಿಗೂ ಸಂಬಂಧವೇ ಇಲ್ಲ. ಅಲ್ಲಿ ಅವರಿಗೆ ಯಾರೂ ಬಂಧುಗಳಿಲ್ಲ. ಹೀಗಾಗಿ ಅಲ್ಲಿಗೆ ಯಾವ ಕಾರಣಕ್ಕೆ ಹೋದರು. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತೇ? ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತಿವೆ.

    ಸ್ಥಳಕ್ಕೆ ಹೊನ್ನಾಳಿ ಪೊಲೀಸ್ ಠಾಣೆ ಪಿಎಸ್​ಐ ಬಸವನಗೌಡ ಬಿರಾದರ್ ಭೇಟಿ ನೀಡಿ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು.

    ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

    ಡೇಟಿಂಗ್​ಗಾಗಿ ಹಾತೊರೆದು ಆತನ ಗೆಳೆತನ ಬೆಳೆಸಿದ ಬೆನ್ನಲ್ಲೇ ಮಹಿಳಾ ಉದ್ಯೋಗಿಗೆ ಕಾದಿತ್ತು ಆಘಾತ!

    ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?

    ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts