More

    ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

    ಬೀಳಗಿ(ಬಾಗಲಕೋಟೆ): ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದ, ಟಿಕ್​ಟಾಕ್, ಹಾಸ್ಯ, ಸಂಗೀತದ ಮೂಲಕ ಅಪಾರ ಅಭಿಮಾನಿಗಳನ್ನ ಹೊಂದಿದ್ದ ಬೀಳಗಿ ಹೆಸ್ಕಾಂ ಲೈನ್​ಮನ್​ ತಿಮ್ಮಣ್ಣ ಭೀಮಪ್ಪ ಗುರಡ್ಡಿ(27) ದುರಂತ ಅಂತ್ಯ ಕಂಡಿದ್ದಾರೆ.

    ನಟ ರಮೇಶ್ ಅರವಿಂದ್​ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ತಿಮ್ಮಣ್ಣ 6.40 ಲಕ್ಷ ರೂ. ಗೆದ್ದಿದ್ದರು. ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಅಪಾರ ಜ್ಞಾನ ಇತ್ತು. ಟಿಕ್​ಟಾಕ್, ಹಾಸ್ಯ, ಸಂಗೀತದಲ್ಲೂ ನಿಪುಣರಾಗಿದ್ದ ತಿಮ್ಮಣ್ಣ, ಖೋ ಖೋ ಕ್ರೀಡಾಪಟು ಕೂಡ ಆಗಿದ್ದರು. ಗ್ರಾಮದ ಮಕ್ಕಳಿಗೆ ಖೋಖೋ ತರಬೇತಿಯನ್ನೂ ಕೊಡುತ್ತಿದ್ದರು. ಊರಲ್ಲಿ ನೂತನವಾಗಿ ಮನೆಯನ್ನು ನಿರ್ಮಿಸಿದ್ದರು. ಇನ್ನೊಂದು ತಿಂಗಳಲ್ಲಿ ಮದುವೆ ನಿಶ್ಚಯ ಆಗುವ ಸಾಧ್ಯತೆಯೂ ಇತ್ತು. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ವಾಸವಿದ್ದ ಪಾಲಕರು ಮತ್ತು ತಮ್ಮನ ಜತೆ ತಿಮ್ಮಣ್ಣ ವಾಸವಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು (5) ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಬೇಕಿತ್ತು. ಇದಕ್ಕೂ 2 ದಿನ ಮೊದಲೇ ತಿಮ್ಮಣ್ಣ ದುರಂತ ಅಂತ್ಯ ಕಂಡಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

    ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗೆ ಹಾಗೂ ಮನೆ ನಿರ್ಮಾಣಕ್ಕೆ ಮಾಡಿದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆಯಾದರೂ ಇದನ್ನು ತಿಮ್ಮಣರ ಸ್ನೇಹಿತರು ಅಲ್ಲಗೆಳೆದಿದ್ದಾರೆ. ‘ಗೃಹಪ್ರವೇಶಕ್ಕೆ ಮುನ್ನಾ ದಿನವೇ ನೀವೆಲ್ಲ ಬರಬೇಕು, ನೀವೆ ನಿಂತು ಉಸ್ತುವಾರಿ ವಹಿಸಿಕೊಂಡು ಮಾಡ್ರಪ್ಪ. ಪ್ರೋಗ್ರಾಂ ಚೆನ್ನಾಗಿ ಆಗ್ಬೇಕು ಅಂದ್ರೆ ನೀವೆಲ್ಲಾ ನನಗೆ ಬಲವಾಗಿ ನಿಲ್ಲಬೇಕು. ತಡ ಮಾಡ್ಬೇಡ್ರಪ್ಪಾ’ ಎಂದು ತಿಮ್ಮಣ್ಣ ಸಾವಿಗೂ ಮುನ್ನ ಆಹ್ವಾನಿಸಿದ್ದ ಎಂದು ಗೆಳೆಯರಾದ ಶಿವು ಕೋಲಕಾರ ಮತ್ತು ಉಮೇಶ್​ ಭಾವುಕರಾದರು.

    ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ...

    ನಾವು ಕಂಡಂತೆ ಆತನಿಗೆ ದುಡ್ಡಿನ ಸಮಸ್ಯೆ ಇರಲಿಲ್ಲ. ಒಳ್ಳೆ ಸ್ಯಾಲರಿ ಇತ್ತು. ಸ್ಯಾಲರಿ ಮೇಲೆ ಬ್ಯಾಂಕ್​ನಲ್ಲಿ ಸಾಲ ಪಡೆದು ಮನೆ ನಿರ್ಮಿಸಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್​ಗೆ ಹೋಗಿದ್ದ. ಮನೆ ಓಪನಿಂಗ್ ಬಗ್ಗೆ ಚರ್ಚಿಸಿದ್ದ. ಮಂಗಳವಾರ ಬೆಳಗ್ಗೆ 7 ಗಂಟೆಗೆ ಆತ್ಮಹತ್ಯೆ ಸುದ್ದಿ ಕೇಳಿ ಆಘಾತವಾಯ್ತು ಎಂದು ಶಿವು ಕೋಲಕಾರ ಕಣ್ಣೀರಿಟ್ಟರು.

    ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ...

    ಗೃಹಪ್ರವೇಶಕ್ಕೆ ಬಬಲಾದಿ ಕ್ಷೇತ್ರದ ಸ್ವಾಮೀಜಿ ಅವರನ್ನೂ ತಿಮ್ಮಣ್ಣ ಆಹ್ವಾನಿಸಿದ್ದರಂತೆ. ಊರು ತುಂಬೆಲ್ಲಾ ಲವವಿಕೆಯಿಂದ ಓಡಾಡಿಕೊಂಡಿದ್ದ ತಿಮ್ಮಣ್ಣನ ಸಾವಿಗೆ ಕಾರಣ ಏನು? ಆ ರಾತ್ರಿ ನಡೆದದ್ದೇನು? ಎಂಬುದಕ್ಕೆ ಖಚಿತ ಉತ್ತರ ಸಿಕ್ಕಿಲ್ಲ. ತಿಮ್ಮಣ್ಣ ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಕುಟುಂಬಸ್ಥರ ಆಕ್ರಂದ್ರನ ಮುಗಿಲು ಮುಟ್ಟಿದೆ. ಗ್ರಾಮಕ್ಕೆ ಗ್ರಾಮವೇ ದುಃಖಿಸಿದೆ.

    ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

    ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

    IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts