More

    ಇದು ಶಿವಮೊಗ್ಗ ಕೌತುಕ! ಅತಿ ಹೆಚ್ಚು ಸಿಎಂ ಕೊಟ್ರೂ ಎಲ್ಲರ ಅಧಿಕಾರವೂ ಅರ್ಧಚಂದ್ರ, ಇದೆಂಥ ಕಂಟಕ?

    ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿಗಳಾಗಿ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರಭಾವಿ ನಾಯಕರು ಆಯ್ಕೆಯಾದರೂ ಯಾರೊಬ್ಬರಿಗೂ ಇದುವರೆಗೂ ಪೂರ್ಣಾವಧಿ ಅಧಿಕಾರ ನಡೆಸುವ ಯೋಗ ಸಿಕ್ಕಿಲ್ಲ.

    ರಾಜ್ಯಕ್ಕೆ ಅತಿ ಹೆಚ್ಚು ಸಿಎಂಗಳನ್ನು ನೀಡಿದ ಕೀರ್ತಿ ಶಿವಮೊಗ್ಗಕ್ಕೆ ಸಲ್ಲುತ್ತೆ. ಕಡಿದಾಳು ಮಂಜಪ್ಪ, ಸಾರೆಕೊಪ್ಪ ಬಂಗಾರಪ್ಪ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೇರಿದರೂ ಪೂರ್ಣಾವಧಿ ಅಧಿಕಾರ‌ ನಡೆಸಿಲ್ಲ‌.
    ಕಡಿದಾಳು ಮಂಜಪ್ಪ– 1956ರ ಆಗಸ್ಟ್ 19ರಿಂದ 1956ರ ಅಕ್ಟೋಬರ್ 31ರವರೆಗೆ ಅಂದರೆ 75 ದಿನಗಳು ಮಾತ್ರ ಸಿಎಂ ಆಗಿದ್ದರು. 
    ಸಾರೆಕೊಪ್ಪ ಬಂಗಾರಪ್ಪ– 1990ರ ಅಕ್ಟೋಬರ್ 17ರಿಂದ 1992ರ ನವೆಂಬರ್ 19ರವರೆಗೆ ಅಂದರೆ ಎರಡು ವರ್ಷ ಸಿಎಂ ಆಗಿದ್ದರು‌.
    ಜೆ.ಎಚ್.ಪಟೇಲ್– 1996 ಮೇ 13ರಿಂದ 1999 ಅಕ್ಟೋಬರ್ 7ರವರೆಗೆ ಅಂದರೆ ಮೂರೂವರೆ ವರ್ಷ ಸಿಎಂ ಆಗಿದ್ದರು. ಇವರು ದಾವಣಗೆರೆ ಮೂಲದವರಾದರೂ ಶಿವಮೊಗ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಜಿಲ್ಲೆಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಪಟೇಲ್​, ಬಳಿಕ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಪಟ್ಟಕ್ಕೇರಿದರು.  
    ಬಿ.ಎಸ್.ಯಡಿಯೂರಪ್ಪ– ನಾಲ್ಕು ಬಾರಿ ಸಿಎಂ ಆದರೂ ಒಂದು ಬಾರಿಯೂ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.
    ಬಿಎಸ್​ವೈ ಸಿಎಂ ಗದ್ದುಗೆಗೆ ಏರಿದ್ದು ಯಾವಾಗ?
    ಮೊದಲ ಅವಧಿ: 2007ರ ನವೆಂಬರ್ 7ರಿಂದ 2007ರ ನವೆಂಬರ್ 19
    ಎರಡನೇ ಅವಧಿ: 2008ರ ಮೇ 30ರಿಂದ 2011ರ ಜುಲೈ 31
    ಮೂರನೇ ಅವಧಿ: 2018ರ ಮೇ 17ರಿಂದ 2018ರ ಮೇ 19
    ನಾಲ್ಕನೇ ಅವಧಿ: 2019ರ ಜುಲೈ 26ರಿಂದ 2012ರ ಜುಲೈ 26

    ಶಿವಮೊಗ್ಗ ಜಿಲ್ಲೆಯಿಂದ ನಾಲ್ವರು ನಾಯಕರು ಕರ್ನಾಟಕದ ಸಿಎಂ ಆಗಿದ್ದಾರೆ. ಆದರೆ ಯಾರೊಬ್ಬರೂ ಒಂದಿಲ್ಲೊಂದು ಕಾರಣಕ್ಕೆ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಅವರ ಪರಿಸ್ಥಿತಿಯೂ ಇದೇ. ಏಕೆ ಈ ಜಿಲ್ಲೆಯವರಿಗೆ ಪೂರ್ಣಾವಧಿ ಅಧಿಕಾರ ಮಾಡುವ ಯೋಗ ಸಿಗುತ್ತಿಲ್ಲ, ಏನಾದರೂ ಕಂಟಕ ಇದೆಯಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

    2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ… ಎನ್ನುತ್ತಲೇ ನೂತನ ಸಿಎಂ ಬಗ್ಗೆ ಬಿಎಸ್​ವೈ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ

    ದುಂಡಗೆ, ದಪ್ಪಗಿದ್ದ ಕಮಲಾಗೆ ಸಹಪಾಠಿಗಳು ಕೊಟ್ಟ ಕೀಟಲೆ ಅಷ್ಟಿಷ್ಟಲ್ಲ! ಅದೇ ಬಾಲೆ ಜಯಂತಿ ಆದ ಇಂಟ್ರೆಸ್ಟಿಂಗ್​ ಸ್ಟೋರಿ ಇದು

    VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮನ್​!

    ಇಲ್ಲಿವೆ ‘ಅಭಿನಯ ಶಾರದೆ’ಯ ಅಪರೂಪದ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts