More

    ಕೋವಿಡ್ ನಿಯಮ ವಿರೋಧಿಸಿ ಟ್ರಕ್​ ಚಾಲಕರ ಉಗ್ರ ಹೋರಾಟ: ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಒಟ್ಟಾವ: ಕೆನಡಾದಲ್ಲಿ ಸೋಮವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಜಾರಿಯಾಗಿರುವ ಕಟ್ಟುನಿಟ್ಟಿನ ನಿಯಮಗಳನ್ನು ವಿರೋಧಿಸಿ ಟ್ರಕ್​ ಚಾಲಕರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆ ಶಮನಗೊಳಿಸಲು ಪ್ರಧಾನಿ ಜಸ್ಟಿನ್​ ಟ್ರುಡೊ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ಕೋವಿಡ್​ ನಿರ್ಬಂಧಗಳನ್ನ ತೆಗೆಯುವಂತೆ ಆಗ್ರಹಿಸಿ ಕೆನಾಡಲ್ಲಿ ಟ್ರಕ್ಕರ್​ಗಳ ನೇತೃತ್ವದಲ್ಲಿ 2 ವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಇಡೀ ರಾಷ್ಟ್ರಾದ್ಯಂತ ಹಬ್ಬಿದ್ದು, ಕೆನಡಾ ರಾಜಧಾನಿ ಒಟ್ಟಾವ ಸ್ತಬ್ಭಗೊಂಡಿತ್ತು. ಒಟ್ಟಾವದಲ್ಲಿ ಟ್ರಕ್​ಗಳ ದಿಗ್ಭಂಧನ, ಪ್ರತಿಭಟನೆಯಿಂದಾಗಿ ಗಡಿ ಭಾಗವೂ ಸ್ತಬ್ಧಗೊಂಡಿದೆ. ಕೆನಡಾ-ಅಮೆರಿಕ ಗಡಿಗೆ ದಿಗ್ಭಂಧನ ಬಿದ್ದಿದೆ. ವಹಿವಾಟು ನಡೆಯದೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕೆನಡಾ ಮತ್ತು ಯುನೈಟೆಟ್​ ಸ್ಟೇಟ್ಸ್ ನಡುವಿನ ಗಡಿ ದಾಟಲು ಕರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಕೆನಡಾ ಸರ್ಕಾರ ಆದೇಶಿದೆ. ಈ ನಿಯಮ ವಿರೋಧಿಸಿ ಕೆನಡಾದಲ್ಲಿ ಟ್ರಕ್ಕರ್​ಗಳು ಪ್ರತಿಭಟನೆ ನಡೆಸುತ್ತಿದ್ದರು. ನಿಯಮ ಉಲ್ಲಂಘಿಸಿ ಬಂದೂಕುದಾರಿಗಳಾಗಿ 11 ಪ್ರತಿಭಟನಾಕಾರರು ಗಡಿ ದಾಟಲು ಯತ್ನಿಸಿದ್ದರು. ಅಪಾಯದ ಮಟ್ಟಕ್ಕೆ ತಲುಪಿದ ಪ್ರತಿಭಟನೆಯನ್ನ ತತಡೆಯಲು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

    1970ರ ಅಕ್ಟೋಬರ್​ನಲ್ಲಿ ಭಯೋತ್ಪಾದನಾ ಬಿಕ್ಕಟ್ಟನ್ನು ತಡೆಯಲು ಜಸ್ಟಿನ್​ ಟ್ರುಡೊ ಅವರ ತಂದೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರು ಕೆನಡಾದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೊಷಿಸಿದ್ದರು. 2ನೇ ಬಾರಿಗೆ ಅಂದರೆ 50 ವರ್ಷದ ಬಳಿಕ ಇದೀಗ ಇವರ ಪುತ್ರ ಜಸ್ಟಿನ್​ ಟ್ರುಡೊ ತುರ್ತು ಪರಿಸ್ಥಿತಿ ಅಸ್ತ್ರ ಬಳಿಸಿದ್ದಾರೆ.

    ಭೂಗತ ಪಾತಕಿ ದಾವೂದ್​ನ​ ಸಹೋದರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ED ದಾಳಿ

    ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ

    ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್​ ಕಂಡಕ್ಟರ್​ ಹೆಸ್ರಲ್ಲೂ ಲೋನ್​ ಪಡೆದು ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts