More

    ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಜಂಟಿ ಸಮೀಕ್ಷೆ

    ಕಡೂರು: ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಿಖರ ವರದಿಯನ್ನು ಸಭೆಗೆ ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
    ತಾಪಂ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಕುರಿತು ಟಾಸ್ಕ್‌ಪೋರ್ಸ್ ಸಮಿತಿ ಸಭೆ ಹಾಗೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಯಾವ ಗ್ರಾಮಗಳಲ್ಲಿ ಎಷ್ಟು ಜನರಿಗೆ ಇ-ಸ್ವತ್ತು ದೊರೆಯದಿರಲು ಕಾರಣ ಪತ್ತೆಹಚ್ಚಲು ಕ್ಷೇತ್ರದ 49 ಗ್ರಾಪಂಗಳ ಪಿಡಿಒ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
    ಜನರು ತಮಗೆ ಅನುಕೂಲವಾದ ಕಡೆ ಮನೆ ನಿರ್ಮಿಸಿಕೊಂಡಿರುತ್ತಾರೆ. ಆದರೆ ವಿವಿಧ ಕಾರಣಗಳಿಂದ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಗೆದ್ಲೇಹಳ್ಳಿಯಲ್ಲಿ ಜನರು ಪೊಲೀಸ್ ತರಬೇತಿ ಕೇಂದ್ರ ಮತ್ತು ಬಂಧಿಖಾನೆಗೆ ಜಾಗ ನೀಡಿ ಔದಾರ್ಯ ಮೆರೆದಿದ್ದಾರೆ. ಆದರೆ ಅವರು ಸ್ವಂತಕ್ಕೆ ನಿರ್ಮಿಸಿಕೊಂಡ ಮನೆಗಳಿಗೆ ಇ-ಸ್ವತ್ತು ನೀಡಲು ಸಾಧ್ಯವಾಗದಿದ್ದರೆ ಸರ್ಕಾರದ ಯೋಜನೆಗಳಿಗೆ ಜಾಗ ಕೊಟ್ಟವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇಂತಹ ಅನೇಕ ಪ್ರಕರಣಗಳು ತಾಲೂಕಿನಲ್ಲಿವೆ. ಕೂಡಲೇ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
    ಬಹುತೇಕ ಗ್ರಾಮಗಳಲ್ಲಿ ಖಾಸಗಿಯವರ ಹೆಸರಿನಲ್ಲಿ ಆರ್‌ಟಿಸಿ ಲಭ್ಯವಾಗುತ್ತಿದೆ. ಇನ್ನು ಕೆಲವು ಗ್ರಾಮಗಳು ಗ್ರಾಮ ಠಾಣಾದಿಂದ ಹೊರಗಿವೆ. ಇನ್ನು ಕೆಲವು ಗ್ರಾಮಗಳು ಅರಣ್ಯ ಇಲಾಖೆ ಆರ್‌ಟಿಸಿಯಲ್ಲಿವೆ. ಹಾಗೂ ಕೆಲವು ಗ್ರಾಮಗಳು ದೇವಾಲಯದ ಹೆಸರಿನಲ್ಲಿ ಆರ್‌ಟಿಸಿಗಳು ಬರುತ್ತಿವೆ. ಎಲ್ಲವನ್ನು ಕಂದಾಯ ಇಲಾಖೆಗೆ ತೆಗೆದುಕೊಂಡು ಹೊಸ ಕಂದಾಯ ಗ್ರಾಮಗಳನ್ನು ರಚನೆ ಮಾಡಿ ಇ-ಸ್ವತ್ತು ದೊರಕಿಸಲು ಪ್ರಯತ್ನ ನಡೆಸಲಾಗಿದೆ. ಕಂದಾಯ ಗ್ರಾಮ ವಿರುವ ಗ್ರಾಮಠಾಣಾ ಮುಂದುವರೆಸಿ ಅರಣ್ಯ ಇಲಾಖೆಯಿಂದ ಬಿಡುಗಡೆ ಮಾಡಲು ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆದು ಇ-ಸ್ವತ್ತು ದೊರಕಿಸಿಕೊಡಲು ಪ್ರಯತ್ನಿಸಲಾಗುತ್ತದೆ ಎಂದರು.
    ಕೃಷಿ ಜಂಟಿ ನಿರ್ದೇಶಕಿ ಹಾಗೂ ಟಾಸ್ಕ್ ಪೋರ್ಸ್ ನೋಡೆಲ್ ಅಧಿಕಾರಿ ಎಚ್.ಎಲ್.ಸುಜಾತ, ಭೂ ಮಾಪನ ಇಲಾಖೆಯ ಎಡಿಎಲ್‌ಆರ್ ಶ್ರೀನಿಧಿ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಪಿಡಿಒ ಮತ್ತು ಕಂದಾಯವಿಭಾಗದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts