More

    ಮೈಸೂರಲ್ಲಿ ‘ನಮೋ’ ಯೋಗ: ನಿರಾಸೆಯಲ್ಲಿದ್ದ ಕೆಲ ಯೋಗಪಟುಗಳ ಮೊಗದಲ್ಲಿ ಸಂತಸ ಮೂಡಿಸಿದ ಡಿಸಿಪಿ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಬೇಕು, ಅವರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಹಳ ಆಸೆಯಿಂದ ಬಂದ ಸಾವಿರಾರು ಜನರ ಪೈಕಿ 100ಕ್ಕೂ ಹೆಚ್ಚು ಮಂದಿಗೆ ಕಾಲ ನಿರಾಸೆಯಾಗಿತ್ತು. ಅವಕಾಶಕ್ಕಾಗಿ ಅರಮನೆ ದ್ವಾರದ ಆಚೆ ಕಾಯುತ್ತಾ ನಿಂತಿದ್ದ ಇವರಿಗೆ ಪೊಲೀಸರು ಒಳ ಪ್ರವೇಶಿಸಲು ಅನುವು ಮಾಡಿಕೊಟ್ಟು ಅವರ ಮೊಗದಲ್ಲಿ ಸಂತಸ ಮೂಡಿಸಿದರು.

    ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಮೊದಲೇ ಪಾಸ್ ನೀಡಲಾಗಿತ್ತು. ಅರಮನೆ ಆವರಣದ ದ್ವಾರದಲ್ಲೇ ಪಾಸ್​ ತಪಾಸಣೆ ಮಾಡಿ ಒಳಗೆ ಬಿಡಲಾಗಿದೆ. ವರಹಾ ಗೇಟ್​ನ ಬಳಿ ಕೆಲವರ ಪಾಸ್​ಗಳ ಕ್ಯೂ ಆರ್ ಕೋಡ್ ಸ್ಕ್ಯಾನ್ ಆಗಿಲ್ಲ. ಹಾಗಾಗಿ ಕೆಲ ಕಾಲ ಗೊಂದಲ ಉಂಟಾಯಿತು.

    ಪಾಸ್​​ ಸ್ಕ್ಯಾನ್​ ಆಗದ ಕಾರಣಕ್ಕೆ ಕೆಲವರನ್ನ ಭದ್ರತಾ ದೃಷ್ಟಿಯಿಂದ ವಾಪಸ್​ ಕಳುಹಿಸಲಾಯಿತು. ನಾವು 15 ದಿನ ಮುಂಚಿತವಾಗಿಯೇ ರಿಜಿಸ್ಟರ್ ಮಾಡಿಸಿದ್ವಿ. ಕೋಡ್ ಕೂಡ ಬಂದಿತ್ತು. ಇದೀಗ ಕೋಡ್ ಸ್ಕ್ಯಾನ್ ಆಗ್ತಿಲ್ಲ ಎಂದು ಯೋಗಪಟುಗಳು ಬೇಸರದಿಂದಲೇ ವರಹಾ ಗೇಟ್​ನ ಆಚೆ ಕಾಯುತ್ತಿದ್ದರು. ಹೊರಭಾಗದ ರಸ್ತೆಯಲ್ಲೇ ಯೋಗ ಮಾಡಲು ಅವಕಾಶವಾದರೂ ಕೊಡಿ ಎಂದು ಮನವಿ ಮಾಡುತ್ತಿದ್ದರು. ಡಿಸಿಪಿ ಪ್ರದೀಪ್ ಗುಂಟಿ ಅವರು ಟೀ ಶರ್ಟ್ ಧರಿಸಿದ್ದವರಿಗೆ ಅರಮನೆ ಆವರಣಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.

    ಸಾಂಸ್ಕೃತಿಕ ನಗರಿ ಮೈಸೂರಲ್ಲಿ ‘ನಮೋ’ ಯೋಗ: 45 ನಿಮಿಷದಲ್ಲಿ ಯಾವೆಲ್ಲ ಯೋಗಾಸನ ಮಾಡಿದ್ರು ಗೊತ್ತಾ?

    ಮೈಸೂರಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts