More

    ಐಎಂಎ ವಂಚನೆ ಪ್ರಕರಣ: ರೋಷನ್​ ಬೇಗ್​ಗೆ ಸೇರಿದ 4 ಕಾರು ಜಪ್ತಿ

    ಬೆಂಗಳೂರು: ಮಾಜಿ ಸಚಿವ ಆರ್​. ರೋಷನ್​ ಬೇಗ್​ ಅವರಿಗೆ ಸೇರಿದ ನಾಲ್ಕು ಕಾರುಗಳನ್ನು ಜಪ್ತಿ ಮಾಡಲಾಗಿದೆ.

    ದುಪ್ಪಟ್ಟು ಲಾಭಾಂಶ ಕೊಡುವುದಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ವಂಚನೆ ಮಾಡಿರುವ ಐಎಂಎ ಕಂಪನಿ ಪರವಾಗಿ ರೋಷನ್​ ಬೇಗ್​ ಪ್ರಚಾರ ಮಾಡಿರುವುದು ತನಿಖೆಯಲ್ಲಿ ದೃಢವಾಗಿದೆ.

    ಐಎಂಎ ಕಂಪನಿ ಪರವಾಗಿ ಪ್ರಚಾರ ಮಾಡಿ ಹೆಚ್ಚು ಹಣ ಹೂಡಿಕೆ ಮಾಡುವಂತೆ ಜನರಿಗೆ ದಾರಿ ತಪ್ಪಿಸಿದ್ದಾರೆ. ಕಂಪನಿಯಿಂದ ಪ್ರತಿಫಲವಾಗಿ ಕೋಟ್ಯಂತರ ರೂ. ಪಡೆದಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೋಷನ್​ ಬೇಗ್​ಗೆ ಸೇರಿದ ಚರಾಸ್ತಿ ಜಪ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಮಾಜಿ ಸಚಿವರಿಗೆ ಸೇರಿದ 4 ಕಾರುಗಳನ್ನು ಜಪ್ತಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಗಳು ರೋಷನ್​ ಬೇಗ್​ ಅವರಿಗೆ ಸೇರಿದ ನಾಲ್ಕು ಕಾರುಗಳನ್ನು ಜಪ್ತಿ ಮಾಡಿದ್ದಾರೆ.

    ಬೇರೊಬ್ಬನಿಂದ ಪರೀಕ್ಷೆ ಬರೆಸಿ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ಗಿಟ್ಟಿಸಿಕೊಂಡ ಯುವಕ! ಪೇದೆ ವಿರುದ್ಧ ತನಿಖೆ

    ನಿಮ್ ಬಗ್ಗೆ ಚೆನ್ನಾಗಿ ಗೊತ್ತು… ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ವಾರ್ನಿಂಗ್​ ಕೊಟ್ಟ ರಾಹುಲ್ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts