More

    ಹುಳಿಯಾರು ಠಾಣೆ ಮಹಿಳಾ ಪೇದೆ ಕೊಲೆ: ಸ್ನೇಹಿತನ ಜತೆ ಸೇರಿ ಗಂಡನನ್ನು ಕೊಂದಿದ್ದಳಾ ಅಕ್ಕ? ಡೆತ್​ನೋಟಲ್ಲಿದೆ ಆಘಾತಕಾರಿ ವಿಷ್ಯ…

    ತುಮಕೂರು: ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ ನಾಪತ್ತೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ತಮ್ಮನಿಂದಲೇ ಕೊಲೆಯಾಗಿದ್ದಾರೆ. ಅಕ್ಕನನ್ನು ಕೊಂದ ತಮ್ಮನೂ ಶಿವಮೊಗ್ಗದ ಲಾಡ್ಜ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮುನ್ನ ಆತ ಡೆತ್​ನೋಟ್​ನಲ್ಲಿ ಬರೆದಿರುವ ವಿಷಯ ತರೇಹವಾರಿ ಚರ್ಚೆಗೀಡು ಮಾಡಿದೆ.

    ‘ಸ್ನೇಹಿತನ ಜತೆ ಸೇರಿಕೊಂಡು ನನ್ನ ಅಕ್ಕ ಪತಿಯನ್ನೇ ಕೊಲೆ ಮಾಡಿದ್ದಳು. ಹಾಗಾಗಿ ಆಕೆಯನ್ನ ನಾನೇ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸುಧಾರ ಸಹೋದರ ಮಂಜುನಾಥ್​ ಡೆತ್​ನೋಟ್​ನಲ್ಲಿ ಬರೆದಿದ್ದಾನೆ.

    ಏನಿದು ಪ್ರಕರಣ?: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶಿವಮೊಗ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಪ್ರಕರಣ ಆತಂಕ ಹೆಚ್ಚಿಸಿದೆ. ಸೆ.13ರಂದು ಸುಧಾ ಮತ್ತು ನಾಪತ್ತೆಯಾಗಿದ್ದರು. ಈ ನಡುವೆ ಇವರ ಚಿಕ್ಕಪ್ಪನ ಮಗ, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶಿವಮೊಗ್ಗ ನಗರದ ಲಾಡ್ಜ್​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇದಕ್ಕೂ ಮುನ್ನ ಅಂದರೆ ಸೆ.13ರಂದು ಸುಧಾ ಮತ್ತು ಇವರ ಚಿಕ್ಕಮ್ಮನ ಮನಗ ಮಂಜುನಾಥ್​ ಇಬ್ಬರೂ ಚಿಕ್ಕನಾಯಕನಹಳ್ಳಿಯಲ್ಲಿ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಅಂದು ರಾತ್ರಿ 8.40ರಿಂದ ಇಬ್ಬರ ಫೋನ್ ಸಂಪರ್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

    ಶಿವಮೊಗ್ಗದ ಲಾಡ್ಜ್​​ಗೆ ಆಗಮಿಸಿದ್ದ ಮಂಜುನಾಥ್​, ರೂಮಿನಿಂದ ಹೊರಬಂದಿರಲಿಲ್ಲ. ಅನುಮಾನಗೊಂಡು ಸೆ.16ರ ಸಂಜೆ ಬಾಗಿಲು ತೆಗೆದಾಗ ಮಂಜುನಾಥ್​ ಶವ ಪತ್ತೆಯಾಗಿತ್ತು. ಅಲ್ಲಿ ಡೆತ್​ನೋಟ್​ ಕೂಡ ಸಿಕ್ಕಿತ್ತು. ‘ನನ್ನ ದೊಡ್ಡಮ್ಮನ ಮಗಳಾದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದೇನೆ’ ಎಂದು ಡೆತ್‌ನೋಟ್ ಬರೆದಿಟ್ಟಿದ್ದ. ಈ ಪ್ರಕರಣ ಸುಧಾ ಅವರ ಮನೆಯಲ್ಲಿ ಆತಂಕ ಸೃಷ್ಟಿಸಿತ್ತು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ಪೊಲೀಸರೂ ಸುಧಾಗಾಗಿ ಹುಡುಕಾಟ ಮುಂದುವರಿಸಿದ್ದರು.

    ಇಂದು(ಸೆ.17)ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಪೊದೆಯೊಂದರಲ್ಲಿ ಸುಧಾ ಶವ ಪತ್ತೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಧಾ ಅವರ ಪತಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಇದ್ದಾರೆ.

    ಆನ್​ಲೈನ್​ ಬೆಟ್ಟಿಂಗ್​ಗೆ ದಾಸನಾಗಿದ್ದ ಮಂಜುನಾಥ್​, ಹಣಕಾಸು ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ. ಸಹೋದರಿ ಸುಧಾ ಬಳಿ ಹಣ ಪಡೆದಿದ್ದ. ಇದನ್ನು ಕೇಳಿದ್ದಕ್ಕೆ ಕುಪಿತಗೊಂಡಿದ್ದ ಎನ್ನಲಾಗಿದೆ. ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ತೋರಿಸು ಎಂದು ಸುಧಾಗೆ ಒತ್ತಾಯಿಸಿದ್ದ ಮಂಜುನಾಥ್​ ಸೆ.13ರಂದು ಚಿಕ್ಕನಾಯಕನಹಳ್ಳಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಳ್ಳುವ ನೆಪದಲ್ಲಿ ಸುಧಾ ಜತೆ ಕಾರಿನಲ್ಲಿ ತೆರಳಿದ್ದ ಎನ್ನಲಾಗಿದೆ. ಮೇಲ್ನೊಟಕ್ಕೆ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆಯಾದರೂ, ಸಾವಿಗೂ ಮುನ್ನ ಆತ ಬರೆದಿಟ್ಟ ಡೆತ್​ನೋಟ್​ ಬೇರೆಯೇ ಕಥೆ ಹೇಳುತ್ತಿದ್ದೆ. ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.

    ಚಿಕ್ಕಬಳ್ಳಾಪುರದಲ್ಲಿ ಹೋಟೆಲ್​ನತ್ತ ನುಗ್ಗಿದ ಕ್ಯಾಂಟರ್​: ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರ ಸಾವು

    ಹಾವಿನ ಪಕ್ಕದಲ್ಲೇ ಮಲಗಿ ಸಾವು ಗೆದ್ದ ಕಂದ! ಪಾಳುಬಾವಿಗೆ ಹಸುಗೂಸನ್ನು ಎಸೆದಿದ್ದ ಹೆತ್ತಮ್ಮ… ಮಂಡ್ಯದಲ್ಲಿ ಮನಕಲಕುವ ಘಟನೆ

    ಚಿಕ್ಕಬಳ್ಳಾಪುರದಲ್ಲಿ ಹೋಟೆಲ್​ನತ್ತ ನುಗ್ಗಿದ ಕ್ಯಾಂಟರ್​: ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts