More

    ಅಂಕೋಲಾ ಪಟ್ಟಣಕ್ಕೆ ನುಗ್ಗಿದ ಬೃಹತ್‌ ಬಾವಲಿ !!

    ಅಂಕೋಲಾ : ತಾಲೂಕಿನಲ್ಲಿ ಪ್ರತಿ ವರ್ಷ ಸುಗ್ಗಿ ಹಬ್ಬವು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲಿಯೂ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ನಿಮಿತ್ತ ನಡೆಯುವ ವಿವಿಧ ಹಗಣಗಳ ಪ್ರದರ್ಶನ ಪ್ರೇಕ್ಷರನ್ನು ನಿಬ್ಬೆರಗಾ ಗುವಂತೆ ಮಾಡುತ್ತಾರೆ. ಹೋಳಿಯ ಮುನ್ನದಿನ ಪಟ್ಟಣದಲ್ಲಿ ಹಲವು ರೂಪಕಗಳು ಸಾಗಿ ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಸಂಪನ್ನಗೊಳ್ಳುತ್ತದೆ.
    ಸ್ವರ್ಣವಲ್ಲಿ ಶ್ರೀಗಳ ಶಿಷ್ಯ ಸ್ವೀಕಾರದ ರೂಪಕವು ಮನಸೆಳೆದವು. ಹಾಗೇ ನಾಗಸಾಧು, ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿಯರ ಬರ್ಜರಿ ಪಾರ್ಟಿ, ಬೃಹತ್ ಬಾವುಲಿ, ಡೆಡ್ಲಿ ಗೋಬಿ, ಬೃಹ್ಮ,ವಿಷ್ಣು, ಮಹೇಶ್ವರ ರೂಪಕಗಳು ಜನಮನಗೊಂಡವು.
    ಈ ಹಗಣಗಳನ್ನು ವಿಕ್ಷಿಸಲು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದರು. ರಸ್ತೆಯುದ್ದಕ್ಕೂ ಸಾವಿರಾರು ಜನರು ನೆರದಿದ್ದರು. ಪ್ರತಿವರ್ಷ ನಡೆಯುವ ಈ ಮೆರವಣಿಗಾಗಿ ಪೊಲೀಸ್ ತುಕಡಿಯೇ ಬಂದು ನಿಲ್ಲುತ್ತದೆ. ವರ್ಷದಲ್ಲಿ ನಡೆದ ಘಟನಾವಳಿಗಳನ್ನು ವಿಡಂಬನೆ ಮಾಡಿ ಹಗಣದ ರೂಪದಲ್ಲಿ ಪ್ರದರ್ಶನ ಮಾಡುತ್ತಾರೆ.
    ಆದರೆ ಈ ಬಾರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿಡಂಬನೆ ಮಾಡುವ ಸಾಹಸ ಮಾಡಿಲ್ಲಾ. ಇದು ಬೆಳಂಬಾರದ ಹಾಲಕ್ಕಿ ಸಮುದಾಯದವರಿಗೆ ಮಾತ್ರ ಮೀಸಲಾಗಿದೆ. ಏಕೆಂದರೆ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಬೆಳಂಬಾರದ ಸುಗ್ಗಿ ತಂಡವು ಉತ್ತಮವಾಗಿ ಪ್ರದರ್ಶನ ನೀಡಿದ್ದ ರಿಂದಾಗಿ ಅಂದಿನ ಬ್ರಿಟಿಷ್ ಅಧಿಕಾರಿಗಳು ಪ್ರತಿವರ್ಷ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಮಗಿಸಿ ಸುಗ್ಗಿ ಕುಣಿಯಬೇಕು ಎಂದು ವಿನಂತಿಸಿ ಕೊಳ್ಳುವುದರ ಜತೆಗೆ ಅಧಿಕೃತ ಆಹ್ವಾನವಾಗಿ ತಾಮ್ರ ಫಲಕವನ್ನು ಸಹ ನೀಡಲಾಗಿದೆ.
    ಊರ ಗೌಡರಾದ ಷಣ್ಮುಖ ಗೌಡ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಪ್ರಮುಖರಾದ ಮಾದೇವ ಬಿ.ಗೌಡ, ಚಾರದತ್ತಾ ಗೌಡ, ಬುದ್ದ ಹನುಮಾ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಇದನ್ನೂ ಓದಿ: ಬೋನಿಗೆ ಬಿದ್ದ ಆತಂಕ ಹುಟ್ಟಿಸಿದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts