More

    ಬೋನಿಗೆ ಬಿದ್ದ ಆತಂಕ ಹುಟ್ಟಿಸಿದ್ದ ಚಿರತೆ

    ಕುಮಟಾ: ತಾಲೂಕಿನ ಕಡ್ಲೆ, ಹೊಲನಗದ್ದೆ, ಚಿತ್ರಗಿ ಮುಂತಾದ ಕಡೆ ಕಾಣಿಸಿಕೊಂಡಿದ್ದ ಚಿರತೆಯನ್ನು ಶನಿವಾರ ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ. ಕಳೆದ ಕೆಲವು ದಿನಗಳಿಂದ ವಿವಿಧೆಡೆ ಕಾಣಿಸಿಕೊಂಡು ಜನರಲ್ಲಿ ಭಯ ಹಿಟ್ಟಿಸಿತ್ತು. ನಾಯಿಗಳನ್ನು ಹಿಡಿಯುತ್ತಿತ್ತು.

    ಹಲವೆಡೆ ಬೋನು ಇಟ್ಟರೂ ಚಿರತೆ ಹಿಡಿಯಲು ಆಗಿರಲಿಲ್ಲ. ಕೊನೆಗೆ ಚಿತ್ರಗಿ ಸರ್ಕಾರಿ ಮಾದರಿ ಶಾಲೆ ಎದುರಿನ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ಬೋನು ಇಟ್ಟು ಕಾಯಲಾಗುತ್ತಿತ್ತು. ಅಂತೂ ಚಿರತೆ ಬೋನಿಗೆ ಬಿದ್ದಿದ್ದು, ಸಾವಿರಾರು ಜನ ಆಗಮಿಸಿ ಚಿರತೆ ನೋಡಲು ಮುಗಿಬಿದ್ದರು.. ಚಿರತೆ ಯನ್ನು ಸುರಕ್ಷಿತ ಸ್ಥಳಾಂತರ ಮಾಡಲಾಗಿದೆ. ಸುಮಾರು ಮೂರು ವರ್ಷದ ಚಿರತೆ ಇದಾಗಿದ್ದು, ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಖಾನಾಪುರದ ಅಂಜಲಿಗೆ ಉತ್ತರ ಕನ್ನಡದ ಕಾಂಗ್ರೆಸ್ ಟಿಕೆಟ್ !!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts