More

    ಸರ್ಕಾರ ಬಿದ್ದರೂ ಚಿಂತೆಯಿಲ್ಲ, ಅಕ್ರಮದ ಮೂಲ ಕಿಂಗ್​ಪಿನ್​ನ ಹೆಸರೇಳಿ: ಎಚ್​ಡಿಕೆಗೆ ಗೃಹ ಸಚಿವ ಮನವಿ

    ಕಲಬುರಗಿ: ಸರ್ಕಾರ ಬಿದ್ದರೂ ಚಿಂತೆಯಿಲ್ಲ ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮದ ಮೂಲ ಕಿಂಗ್​ಪಿನ್​ನ​ ಹೆಸರೇಳಿ. ಅವರನ್ನು ಬಂಧಿಸ್ತೀವಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮದ ಮೂಲ ಕಿಂಗ್​ಪಿನ್ ಬೇರೆ ಇದ್ದಾರೆ. ಅವರ ಹೆಸರೇಳಲು ಸರ್ಕಾರಕ್ಕೆ ಸಾಧ್ಯವೇ? ಆ ಮೂಲ ಕಿಂಗ್​ಪಿನ್​ನ ಟಚ್​ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ ಎಂದು ಶುಕ್ರವಾರ ಹಾಸನದಲ್ಲಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಬರೀ ಹಿಟ್​ ಆ್ಯಂಡ್​ ರನ್​ ಮಾಡುತ್ತಾರೆ. ಯಾವುದೇ ಆರೋಪ ಮಾಡಲು ಅವರಿಗೆ ಹಕ್ಕಿದೆ. ಆದರೆ ಸೂಕ್ತ ದಾಖಲೆ ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅವರು ಹೇಳಿದಂತೆ ಸರ್ಕಾರ ಬಿದ್ದರೂ ಚಿಂತೆಯಿಲ್ಲ, ಮೊದಲು ಕಿಂಗ್​ಪಿನ್​ನ ಹೆಸರನ್ನು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಕಾಂಗ್ರೆಸ್​ ಮತ್ತು ಜೆಡಿಎಸ್​ನವರು ಇಲ್ಲದ ಹೇಳಿಕೆ ನೀಡುವ ಮೂಲಕ ತನಿಖೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    545 ಸಿವಿಲ್​ ಪಿಎಸ್​ಐ ನೇಮಕ ಹಗರಣದಲ್ಲಿ ಶಾಮೀಲಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸಮರ್ಥ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವುದಾಗಿ ಗೃಹ ಸಚಿವರು ಪ್ರಕಟಿಸಿದರು. ಅಗತ್ಯಬಿದ್ದರೆ ವಿಶೇಷ ನ್ಯಾಯಾಲಯ ಸಹ ಸ್ಥಾಪಿಸಲಾಗುವುದು. ಆದರೆ ಈಗ ವೇಗ ಪದ್ಧತಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮಾಡುವಂತೆ ಕೋರಲಾಗಿದ್ದು, ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಅದಕ್ಕೆ ಪೂರಕವಾಗಿರುವ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗುವುದು. ಇದುವರೆಗೆ 48 ಆರೋಪಿಗಳನ್ನು ಬಂಧಿಸಲಾಗಿದ್ದು, ತಪ್ಪೆಸಗಿದವರಿಗೆ ಶಿಕ್ಷೆ ಖಚಿತ ಎಂದು ಗುಡುಗಿದರು.

    ‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್​ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’

    PSI ಹುದ್ದೆ ಹಗರಣದ ಮೂಲ ಕಿಂಗ್​ಪಿನ್​ನ ಟಚ್ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ: ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts