More

    ಹಿಜಾಬ್​ ವಿವಾದ: ಸ್ಫೋಟಕ ರಹಸ್ಯ ಬಯಲು, ಎರಡು ತಿಂಗಳ ಹಿಂದೆಯೇ ನಡೆದಿತ್ತು ಮಾಸ್ಟರ್​ ಪ್ಲ್ಯಾನ್…

    ಉಡುಪಿ: ರಾಜ್ಯದಲ್ಲಿ ಹಿಜಾಬ್​ ವಿವಾದ ​ಸೃಷ್ಟಿಸಲು ಎರಡು ತಿಂಗಳ ಹಿಂದೆಯೇ ಮಾಸ್ಟರ್​ ಪ್ಲ್ಯಾನ್​ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದ ನಾಲ್ವರು ಯುವತಿಯರು ಹಿಜಾಬ್​ ಕುರಿತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡತೊಡಗಿದ್ದರು. ಆ ನಾಲ್ವರು ಯುವತಿಯರೇ 2021ರ ಡಿಸೆಂಬರ್ 24ರ ಬಳಿಕ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದರು ಎಂಬ ಆಘಾತಕಾರಿ ಅಂಶ ಪ್ರಾಥಮಿಕ ಹಂತದಲ್ಲಿ ಬಯಲಾಗಿದೆ.

    2021ರ ನವೆಂಬರ್​ನಲ್ಲಿ ಬಾಬ್ರಿ ಮಸೀದಿ ಕುರಿತ ತೀರ್ಪಿನ ವಿರುದ್ಧ ಈ ನಾಲ್ವರು ಯುವತಿಯರು ಟ್ವೀಟ್ ಮಾಡಿದ್ದರು. ಯುವತಿಯರ ಪ್ರತಿ ಟ್ವೀಟ್​ಗೆ ಸಿಎಫ್​ಐ ರಾಷ್ಟ್ರಾಧ್ಯಕ್ಷ ರಿಟ್ವೀಟ್ ಮಾಡುತ್ತಿದ್ದರು. ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಯುವತಿಯರು ಸಿಎಎಫ್​ಐನ ಸಕ್ರಿಯ ಕಾರ್ಯಕರ್ತೆಯರಾಗಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ವಿರೋಧಿಸಿ ಟ್ವೀಟ್ ಮಾಡಿದ್ದರು. ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ ಮೊದಲಾದವರ ಟ್ವಿಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದೆ. ಇವರು ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿದ್ದಾರೆ ಎಂಬುದು ಮತ್ತಷ್ಟು ಆಘಾತ ತರಿಸಿದೆ.

    ನವೆಂಬರ್ 21ರಂದು ಮಸೀದಿಯಲ್ಲಿ ಮೈಕ್​ಗಳ ಬಳಕೆ ಕುರಿತು ಸಮರ್ಥಿಸಿ ಈ ಯುವತಿಯರು ಟ್ವೀಟ್ ಮಾಡಿದ್ದರು. ಡಿಸೆಂಬರ್ 12ರಂದು ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಟ್ವೀಟ್ ಮಾಡಿದ್ದರು. ಡಿಸೆಂಬರ್ 24ರ ಬಳಿಕ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದರು. ಯುವತಿಯರ ಟ್ವಿಟರ್ ಟ್ರಾಕ್ ರೆಕಾರ್ಡಿನಲ್ಲಿ ಈ ಎಲ್ಲವೂ ಇದೆ.

    ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)ಸಂಘಟನೆಯ ಬೆಂಬಲಿಗರು ಎಂಬುದನ್ನು ಸಾಮಾಜಿಕ ಜಾಲತಾಣ ಮೂಲಕ ಸಾಮಾಜಿಕ ಕಾರ್ಯಕರ್ತ ವಿಜಯ ಪಾಟೀಲ ಬೆಳಕಿಗೆ ತಂದಿದ್ದಾರೆ.

    ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

    ತನ್ನ ಮಗ ಜನರಲ್​ ಮ್ಯಾನೇಜರ್​ ಆಗಬೇಕೆಂದು ಆಸೆಪಟ್ಟ ತಂದೆಗೆ ಮಹಾಮೋಸ! 70 ಲಕ್ಷ ರೂ. ಕಳಕೊಂಡು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts