More

    ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ಸಾವಿರಾರು ಮನೆ ಜಲಾವೃತ, ಹಾವು-ಚೇಳು ಕಾಟಕ್ಕೆ ಜನ ಹೈರಾಣ

    ಬೆಂಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯರಾಜಧಾನಿ ಅಕ್ಷರಶಃ ನಲುಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ನಗರದಲ್ಲಿ 59ಕ್ಕೂ ಹೆಚ್ಚು ಕಡೆ ಸೃಷ್ಟಿಯಾದ ಅವಾಂತರ ಅಷ್ಟಿಷ್ಟಲ್ಲ. ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಡೀ ಏರಿಯಾವೇ ಕೆರೆಯಂತಾಗಿದ್ದು, ಊಟ-ಕುಡಿವ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ದಿನಬಳಕೆ ವಸ್ತುಗಳು, ದಿನಸಿ ಪದಾರ್ಥಗಳು ಜಲಸಮಾಧಿಯಾಗಿವೆ.

    ಯಲಹಂಕದ ಅಮಾನಿ ಕೆರೆ ಕೋಡಿ ಬಿಟ್ಟು ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ನುಗ್ಗಿದೆ. 3 ದಿನದ ಹಿಂದೆಯೂ ಇದೇ ಅಪಾರ್ಟ್​ಮೆಂಟ್​ಗೆ ಮಳೆ ನೀರು ನುಗ್ಗಿತ್ತು. ಸದಯ ಅಪಾರ್ಟ್​ಮೆಂಟ್​ಗೆ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡಿದೆ. ಮಳೆ ನೀರಿನ ಜತೆಗೆ ಹಾವು-ಚೇಳುಗಳೂ ಬರುತ್ತಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿದೆ.

    ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ಸಾವಿರಾರು ಮನೆ ಜಲಾವೃತ, ಹಾವು-ಚೇಳು ಕಾಟಕ್ಕೆ ಜನ ಹೈರಾಣ

    ಇನ್ನು ಅಲ್ಲಾಳಸಂದ್ರದ ಕೆಲ ಪ್ರದೇಶಗಳಲ್ಲೂ ಮಳೆನೀರು ನೆರೆ ಆತಂಕ ಸೃಷ್ಟಿಸಿದ್ದು, ನೂರಾರು ಮನೆಗೆಳಿಗೆ ನೀರು ನುಗ್ಗಿದೆ. ನಿವಾಸಿಗಳು ರಾತ್ರಿಯಿಡೀ ಮನೆಯ ಹೊರಗೇ ಕಾಲ ಕಳೆದಿದ್ದಾರೆ.

    ವಿದ್ಯಾರಣ್ಯಪುರದ ಅಪಾರ್ಟ್​ಮೆಂಟ್​ನ ನೆಲಮಹಡಿಯೂ ಜಲಾವೃತಗೊಂಡಿದ್ದು, ಹೊರ ಬರಲು ಹೃದ್ರೋಗಿಯೊಬ್ಬರು ಪರದಾಡಿದ ಘಟನೆ ಸಂಭವಿಸಿದೆ. ಸಿಂಗಾಪುರ ಲೇಔಟ್​ನಲ್ಲಿ ಕೆರೆ ಕೋಡಿ ಹೊಡೆದಿದ್ದು, ಬಡಾವಣೆಗೆ ನೀರು ನುಗ್ಗಿದೆ. ರಸ್ತೆ ತುಂಬೆಲ್ಲಾ ನೀರು ಉಕ್ಕಿ ಹರಿಯುತ್ತಿದ್ದು, ಇಡೀ ಪ್ರದೇಶ ಜಲಾವೃತಗೊಂಡಿದೆ. ನೀರಿನ ಜತೆಗೆ ಹಾವು-ಮೀನುಗಳೂ ಬರುತ್ತಿವೆ.

    https://www.vijayavani.net/a-kodimath-shree-about-rain/

    ಮಿದುಳು ಜ್ವರಕ್ಕೆ 10 ವರ್ಷದ ಬಾಲಕ ಬಲಿ! ಮಗನ ಅಗಲಿಕೆ ನೋವು ಸಹಿಸಲಾಗದೆ ದುರಂತ ಅಂತ್ಯಕಂಡ ದಂಪತಿ

    ಎಲ್ಲ ಗುಟ್ಟಾಗಿಟ್ಟು ಬಾರದ ಲೋಕಕ್ಕೆ ಹೋಗಿಬಿಟ್ಟ! ಹೆತ್ತವರು, ಕುಂದಾಪುರ ಯುವತಿ, ವಿಟ್ಲ ಹುಡ್ಗಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts