More

    PSI ಹುದ್ದೆ ಹಗರಣದ ಮೂಲ ಕಿಂಗ್​ಪಿನ್​ನ ಟಚ್ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ: ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ

    ಹಾಸನ: ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮದ ಮೂಲ ಕಿಂಗ್​ಪಿನ್ ಬೇರೆ ಇದ್ದಾರೆ. ಅವರ ಹೆಸರೇಳಲು ಸರ್ಕಾರಕ್ಕೆ ಸಾಧ್ಯವೇ? ಆ ಮೂಲ ಕಿಂಗ್​ಪಿನ್​ನ ಟಚ್​ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.

    ರಾಜ್ಯದಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿರುವ ಈ ಪ್ರಕರಣ ಬಗೆದಷ್ಟು ಆಳ ಎಂಬಂತಿದೆ. ಸಚಿವ ಅಶ್ವಥ್ ನಾರಾಯಣ್​ ವಿರುದ್ಧ ಕಾಂಗ್ರೆಸ್​ ಗಂಭೀರ ಆರೋಪ ಮಾಡಿದ್ದು, ರಾಜೀನಾಮೆಗೆ ಆಗ್ರಹಿಸುತ್ತಿದೆ. ಅತ್ತ ಪಿಎಸ್​ಐ ಪರೀಕ್ಷಾ ಅಕ್ರಮ ಪ್ರಕರಣ ಹಲವರನ್ನು ಬಂಧಿಸಿರುವ ಸಿಐಡಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಾ, ಅಕ್ರಮದ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಶುಕ್ರವಾರ ಹಾಸನದ ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್​ಡಿಕೆ, ಪಿಎಸ್​ಐ ಪರೀಕ್ಷೆಯ ಅಕ್ರಮದ ಮೂಲ ಕಿಂಗ್​ಪಿನ್​ನ ಟಚ್​ ಮಾಡೋಕೆ ಹೋದ್ರೆ ಸರ್ಕಾರವೇ ಬೀಳುತ್ತೆ. ಪಿಎಸ್​ಐ ಕಿಂಗ್​ಪಿನ್ ನಮ್ಮ ರಾಜ್ಯದ ಭವಿಷ್ಯ ನಾಯಕರೇ ಆಗಿದ್ದಾರೆ ಎನ್ನುವ ಮೂಲಕ ಘಟಾನುಘಟಿ ನಾಯಕರ ಕುಟುಂಬದತ್ತ ಪರೋಕ್ಷವಾಗಿ ಕೈ ತೋರಿದ್ದಾರೆ.

    ಮಾಗಡಿಯಲ್ಲಿ ಮೂವರು ಪಿಎಸ್​ಐಗೆ ಸೆಲೆಕ್ಟ್ ಆದ್ಮೇಲೆ ಕಾಂಗ್ರೆಸ್​ನವರು ಏನೋ ಮಂತ್ರಿಗಳು ಮಾಡಿದ್ದಾರೆ ಅಂತ ಆರೋಪ ಮಾಡಿದ್ದೀರಿ. ಆದ್ರೆ ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೌಮ್ಯ ವಿಚಾರ ಏನಾಗಿದೆ? ಇದರಲ್ಲೂ 80 ಲಕ್ಷ ರೂ. ಅಕ್ರಮ ನಡೆದಿದೆ. ಇದು ಪಿಎಸ್​ಐ ಎಕ್ಸಾಂನಲ್ಲಿಯ ಅಕ್ರಮಕ್ಕಿಂತ ಇದು ದೊಡ್ಡ ಹಗರಣ ಎಂದ ಎಚ್​ಡಿಕೆ, ಸಚಿವ ಅಶ್ವತ್​ ನಾರಾಯಣ್ ಅವರು ಯುನಿರ್ವಸಿಟಿಯ 150 ಕೋಟಿ ರೂ. ಪಿಂಚಣಿ ಹಣ ಡೈವರ್ಟ್ ಮಾಡಿದ್ದಾರೆ. ಯುನಿರ್ವಸಿಟಿ ಪಿಂಚಣಿಗೆ ಇಟ್ಟ ಹಣವನ್ನ ಯಾವ ಕಂಪನಿಗೆ ಅಶ್ವತ್ ನಾರಾಯಣ್ ಕೊಟ್ಟಿದ್ದಾರೆ? ಬೆಂಗಳೂರು ವಿಸಿಗೆ ಪತ್ರ ಬರೆದು ಬೆಂಗಳೂರು ಇಂಜಿನಿಯರ್ ಕಾಲೇಜು ಮೆಕ್ಯಾನಿಕಲ್ ಬ್ಲಾಕ್ ವಿಭಾಗಕ್ಕೆ ಕೆಲಸ ಮಾಡಿಸಲು 80 ಕೋಟಿ ರೂ.ಗೆ ತಲುಪಿಸಿದ್ದಾರೆ. ಸಿಂಡಿಕೇಟ್​ನಲ್ಲಿ ಯಾರಾದ್ರು ಪ್ರಶ್ನಿಸಿದ್ರೆ ಅವರನ್ನು ಕಿತ್ತಾಕಿ ಹೆಬ್ಬೆಟ್​ ಒತ್ತುವ ಆರ್​ಎಸ್​ಎಸ್​ ನವರನ್ನು ಇಟ್ಕೊಳ್ತಾರೆ ಎನ್ನುತ್ತಲೇ ಸರ್ಕಾರಕ್ಕೆ ನಾನು ದಾಖಲೆ ನೀಡಲು ಸಿದ್ದ, ಸರ್ಕಾರ ಸಾಬೀತು ಮಾಡಲು ಸಿದ್ಧವಿದೆಯಾ ಎಂದು ಸವಾಲು ಹಾಕಿದರು.

    500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ತಲುಪಿದೆ. ಇದು ಉನ್ನತ ಶಿಕ್ಷಣ ಖಾತೆಯಲ್ಲಿಯೇ ನಡೆದಿರೋ ಕರ್ಮ. ಇನ್ನು ಪಿಎಸ್​ಐ ನೇಮಕಾತಿಯಲ್ಲೂ ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ. ದಳಪತಿ ಭದ್ರಕೋಟೆಯನ್ನು ಚೂರು ಚೂರು ಮಾಡ್ತಾರಂತೆ. ಹಾಗಂತ ಯಾರೋ ಮಂತ್ರಿ ಹೇಳೋದನ್ನು ನಿನ್ನೆ ನೋಡಿದೆ. ಆದ್ರೆ ರಾಜ್ಯದ ಖಜಾನೆ ಛಿದ್ರ ಮಾಡ್ತಿದ್ದೀರಲ್ಲ ಅದನ್ನ ಯಾರು ಸರಿ ಮಾಡ್ತಾರೆ? ಕಾಂಗ್ರೆಸ್​ನವರು ಬ್ರಹ್ಮಾಂಡ ಭ್ರಷ್ಟಾಚಾರ ಅಂತಾರೆ, ಆದ್ರೆ ಒಂದೇ ಒಂದು ದಾಖಲೆ ಕೊಡಲ್ಲ ಅವರು. ನಮ್ಮ ಕಾಲದಲ್ಲೂ ಕೆಇಬಿ, ಪಿಡಬ್ಲ್ಯುಡಿ… ಎಲ್ಲವನ್ನೂ ಮಾಡಿದ್ದೇವೆ. ತೆವಳಿ ಬರುತಿದ್ದ ಸಾವಿರ ಅಂಗವಿಕಲ ಮಕ್ಕಳಿಗೆ ಕೆಲಸ ನೀಡಿದ್ದೆ. ಶಿಕ್ಷಣದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

    ಕುಣಿಗಲ್​ಗೂ ತಟ್ಟಿದ PSI ಎಕ್ಸಾಂ ಅಕ್ರಮದ ನಂಟು: ರೈತರಾದ ನಾವು 80 ಲಕ್ಷ ಹಣ ಎಲ್ಲಿಂದ ತರೋದು? ಪೇದೆ ತಂದೆ ಆಕ್ರೋಶ

    ಕೊಪ್ಪಳದಲ್ಲಿ ಹೃದಯವಿದ್ರಾವಕ ಘಟನೆ: ಬಟ್ಟೆ ಒಣ ಹಾಕುವಾಗ ತಾಯಿ-ಇಬ್ಬರು ಮಕ್ಕಳ ಪ್ರಾಣ ಹೊತ್ತೊಯ್ದ ಜವರಾಯ

    ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts