More

    ಕಂಪ್ಲೀಟ್​ ಲಾಕ್​ಡೌನ್​ ಜಾರಿ: ಇನ್ಮುಂದೆ ವಾರದಲ್ಲಿ 3 ದಿನ ಮಾತ್ರ ಅಗತ್ಯವಸ್ತು ಸಿಗುತ್ತೆ​, ಅದಕ್ಕೂ ಟೈಂ ಫಿಕ್ಸ್​

    ಹಾಸನ: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ದಿನನಿತ್ಯ ಅಗತ್ಯ ವಸ್ತು ಖರೀದಿಸಲು ಜನರಿಗೆ ಸರ್ಕಾರ ಅವಕಾಶ ಕೊಟ್ಟಿದೆ. ಆದರೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಲೇ ಇದೆ. ಕರೊನಾ ಚೈನ್​ ಲಿಂಕ್​ ಕತ್ತರಿಸಲು ಸಂಪೂರ್ಣ ಲಾಕ್​ಡೌನ್​ ಒಂದೇ ಪರಿಹಾರ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನರಿತ ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಮಾಡಲು ನಿರ್ಧರಿಸಿದ್ದಾರೆ. ವಾರದಲ್ಲಿ ನಾಲ್ಕು ದಿನ ಜಿಲ್ಲೆ ಸಂಪೂರ್ಣ ಲಾಕ್ ಆಗಲಿದೆ. ಇನ್ನುಳಿದ ಮೂರು ದಿನ ಅಂದರೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ 10ಗಂಟೆವರೆಗೆ ಜನರು ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಈ 3 ದಿನ ಮಾತ್ರವೇ ಬಾರ್​ಗಳು ನಿಗದಿತ ಸಮಯದಲ್ಲಿ ಬಾಗಿಲು ತೆರೆಯಲಿವೆ. 10 ಗಂಟೆ ಬಳಿಕ ಸಂಪೂರ್ಣ ಲಾಕ್​ ಆಗಲಿದೆ. ಹಾಲಿನ ಡೇರಿ, ಆಸ್ಪತ್ರೆ, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್​ ಆಗಲಿವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಘೋಷಿಸಿದ್ದಾರೆ.

    ಹಾಸನಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ, ಡಿಎಚ್​ಒ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಚಿವ ಕೆ.ಗೋಪಾಲಯ್ಯ ಸಭೆ ನಡೆಸಿದರು. ಈ ವೇಳೆ ವಾರಕ್ಕೆ ಮೂರು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡ. ಉಳಿದಂತೆ ಕಂಪ್ಲೀಟ್​ ಲಾಕ್​ಡೌನ್​ ಮಾಡಿ ಎಂದು ಸಕಲೇಶಪುರ ಶಾಸಕ ಎಚ್​.ಕೆ. ಕುಮಾರಸ್ವಾಮಿ ಒತ್ತಾಯಿಸಿದರು. ಇದಕ್ಕೆ ಜಿಲ್ಲೆಯ ಇತರ ಶಾಸಕರೂ ಸಮ್ಮತಿಸಿದರು.

    8 ಸಿಂಹಗಳಿಗೆ ಕರೊನಾ ಪಾಸಿಟಿವ್​, ಜೀವಿ ಸಂಕುಲ ತಲ್ಲಣ: ಪ್ರಾಣಿಗಳಲ್ಲಿ ಕಂಡು ಬಂದ ರೋಗ ಲಕ್ಷಣ ಹೀಗಿದೆ…

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts