More

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ಬೆಂಗಳೂರು: ‘ಪೇಜಾವರ ಸ್ವಾಮಿಗಳು ದಲಿತರ ಮನೆಯಲ್ಲಿ ಇದ್ದು ಬಂದಿದ್ದರು ಎಂದು ಇತ್ತೀಚೆಗೆ ನೋಡಿದೆ. ದಲಿತರ ಮನೆಯಲ್ಲಿ ಕೋಳಿ ಕೊಟ್ಟರೆ ಶ್ರೀಗಳು ತಿನ್ನೋಕಾಗುತ್ತಾ? ಕೋಳಿ ಬೇಡ.. ಕುರಿಯ ರಕ್ತ ಫ್ರೈ ಮಾಡಿ ಕೊಟ್ಟರೆ, ಲಿವರ್​ ಕೊಟ್ಟರೆ ತಿನ್ನುತ್ತಾರಾ? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ? ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಅದು ಗೀಳಾಗಿ ಅಶೋಕ್​, ಅಶ್ವತ್ಥನಾರಾಯಣ ಅದನ್ನೇ ಮಾಡುತ್ತಿದ್ದಾರೆ. ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನ ಜತೆ ಇರುತ್ತಾನೆ, ಬೆಳಗಾಗುವ ಹೊತ್ತಿಗೆ ವಾಪಸ್​ ಬಂದು ಕಲ್ಲಾಗುತ್ತಾನೆ ಎನ್ನಲಾಗುತ್ತದೆ. ಅದರಲ್ಲಿ ಏನು ದೊಡ್ಡ ವಿಚಾರ? ದಲಿತರನ್ನು ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಆಕೆಯನ್ನು ಕೂರಿಸಿದ್ದರೆ ಅದು ದೊಡ್ಡ ವಿಚಾರ. ಇದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಬರಬೇಕು, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ನಮ್ಮ ಮನೆಯ ಲೋಟವನ್ನು ನೀನು ಮುಟ್ಟು, ಅದನ್ನು ನಾವು ತೊಳೆಯುತ್ತೇವೆ ಎನ್ನಬೇಕು. ಈಗ ಭಾರತದಲ್ಲಿ ಇದೊಂದು ಬೂಟಾಟಿಕೆ ನಡೆಯುತ್ತಿದೆ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಎಚ್ಚೆತ್ತ ‘ನಾದಬ್ರಹ್ಮ’ ಕ್ಷಮೆ ಕೋರಿದ್ದಾರೆ.

    ‘ನನ್ನ ಮಾತು ನನ್ನ ಪತ್ನಿಗೇ ಹಿಡಿಸಲಿಲ್ಲ. ಆಕೆ ಪ್ರತಿಭಟಿಸಿದಳು, ಆಕೆ ಬಳಿಯೂ ಕ್ಷಮೆ ಕೋರಿದೆ’ ಎಂದು ಹಂಸಲೇಖ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಫೇಸ್​ ವಿಡಿಯೋ ಮೂಲಕ ಕ್ಷಮೆ ಕೋರಿದ ಹಂಸಲೇಖ, ‘ಮೊದಲಿಗೆ ಕ್ಷಮೆ ಇರಲಿ, ಎರಡನೇದಾಗಿಯೂ ಕ್ಷಮೆ ಇರಲಿ. ಅದು ಪ್ರಶಸ್ತಿ ಪುರಸ್ಕಾರದ ಸಭೆ. ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತಿರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ತಪ್ಪು. ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಟವನ್ನ ತೊಡೆದು ಹಾಕಲು ಪೇಜಾವರಶ್ರೀಳಂತಹ ಗುರು-ಹಿರಿಯರು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ದಶಕಗಳ ಹಿಂದೆ ಅಸ್ಪೃಶ್ಯತೆ ಕಲಾ ರಂಗದಲ್ಲೂ ಇತ್ತು. ಸದ್ಯ ಕರಗಿ ಮಾಯವಾಗಿದೆ. ಭಾರತದಲ್ಲೂ ಕೂಡ ಈ ಅಸ್ಪೃಶ್ಯತೆ ಕರಗುತ್ತಿದೆ. ನಾನು ಆ ವೇದಿಕೆಯಲ್ಲಿ ಮಾತನಾಡಿದ ಮಾತುಗಳು ನನ್ನ ಪತ್ನಿಗೇ ಇಡಿಸಲಿಲ್ಲ. ಆಕೆ ಪ್ರತಿಭಟಿಸಿದಳು. ನಾನು ಆಕೆ ಬಳಿಯೂ ಕ್ಷಮೆ ಕೇಳಿದೆ. ನಾನು ಸಂಗೀತಗಾರ. ನನಗ್ಯಾಕೆ ಟ್ರೋಲ್​, ನನ್ನ ಜೀವನದ ಗುರಿ ಸಂಗೀತದ ಮೂಲಕ ಜನರಿಗೆ ಖುಷಿ ಕೊಡೋದು. ಕೆಲ ಅನಿಷ್ಟವನ್ನು ತೊಡೆದು ಹಾಕಲು ನನ್ನ ಪಾತ್ರವೂ ಇದ್ದರೆ ಖಂಡಿತಾ ಮಾಡುವೆ’ ಎಂದು ಹೇಳಿದ್ದಾರೆ.

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಗೀತ ನಿರ್ದೇಶಕ ಹಂಸಲೇಖ, ದಲಿತರನ್ನು ಒಳಗೊಳ್ಳುವಿಕೆ ಕುರಿತು ಉಡುಪಿ ಪೇಜಾವರ ಮಠದ ಸ್ವಾಮೀಜಿ ನಡೆಸಿದ ಪಾದಯಾತ್ರೆಗಳು, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನಡೆಸಿದ ಗ್ರಾಮ ವಾಸ್ತವ್ಯ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ವಿವಾದ ಸೃಷ್ಟಿಸಿದೆ.

    ಈ ರೀತಿಯ ಮಾತು ಹಂಸಲೇಖ ಅವರ ಬಾಯಿಯಿಂದ ಬರಬಾರದಿತ್ತು. ಒಬ್ಬರ ಆಹಾರವನ್ನು ಮತ್ತೊಬ್ಬರ ಮೇಲೆ ಏರುವಿಕೆ ಸಲ್ಲ. ಎಲ್ಲರಿಗೂ ಆಹಾರ ಆಯ್ಕೆಯ ಸ್ವಾತಂತ್ರ್ಯ ಇರುತ್ತೆ. ಸಮಾಜ ಅವರನ್ನು ಎತ್ತರದಲ್ಲಿ ಇಟ್ಟು ಗೌರವಿಸುತ್ತಿತ್ತು. ಪ್ರಚಾರಕ್ಕಾಗಿ ಅವರು ಹೀಗೆ ಮಾಡುವ ಅಗತ್ಯ ಇರಲಿಲ್ಲ. ಅವರ ಮಾತು ಜಗತ್ತಿನ ಎದುರು ಅವರ ಸಣ್ಣತನವನ್ನ ತೋರಿಸಿದೆ ಎಂದು ಉಡುಪಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ.

    ವಿವಾದದ ಸುಳಿಯಲ್ಲಿ ನಾದಬ್ರಹ್ಮ ಹಂಸಲೇಖ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ… ಇದೆಂಥಾ ಮಾತು ಹೇಳಿಬಿಟ್ರಿ?

    ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts