More

    ಅತಿಥಿ ಉಪನ್ಯಾಸಕರ ಹುದ್ದೆಗೆ ಆಹ್ವಾನ: ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ

    ಮಂಗಳೂರು: 2021-22ನೇ ಶೈಕ್ಷಣಿಕ ಸಾಲಿಗೆ ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಯಾವೆಲ್ಲ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಇದೆ ಎಂಬುದರ ಮಾಹಿತಿ ಇಲ್ಲಿದೆ.

    ಮಂಗಳೂರು ವಿಶ್ವವಿದ್ಯಾನಿಲಯ ಆವರಣ, ಮಂಗಳಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ ಇಲ್ಲಿಯ ಸ್ನಾತಕೋತ್ತರ ವಿಭಾಗಗಳಿಗೆ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಫೀಲ್ಡ್​ ಮಾರ್ಷಲ್​ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿರುವ ಸ್ನಾತಕೋತ್ತರ ಕೋರ್ಸುಗಳಿಗೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಾದ ವಿವಿ ಕಾಲೇಜು, ಮಂಗಳೂರು ವಿವಿ ಸಂಧ್ಯಾ ಕಾಲೇಜು, ಫೀಲ್ಡ್​ ಮಾರ್ಷಲ್​ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ ವಿವಿ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ ವಿವಿ ಕಾಲೇಜು, ನೆಲ್ಯಾಡಿಯ ವಿವಿ ಕಾಲೇಜು, ಬನ್ನಡ್ಕ, ಮೂಡುಬಿದಿರೆ ಇಲ್ಲಿಯ ಪದವಿ ಕೋರ್ಸುಗಳಿಗೆ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಜಿರ್ಯನ್ನು ವಿಶ್ವವಿದ್ಯಾನಿಲಯದ ವೆಬ್​ಸೈಟ್ www.mangaloreuniversity.ac.in ನಿಂದ ಪಡೆದು ಭರ್ತಿ ಮಾಡಿ ಅರ್ಜಿಯ ಪ್ರತಿ ಹಾಗೂ ಮೂಲ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಫೆ.5ರ ಬೆಳಗ್ಗೆ 9ರಿಂದ ರಸಾಯನಶಾಸ, ಅನ್ವಯಿಕ ಪ್ರಾಣಿಶಾಸ್ತ್ರ, ಗಣಿತ, ಕಂಪ್ಯೂಟರ್​ ಸೈನ್ಸ್​ ಹಾಗೂ ಮಧ್ಯಾಹ್ನ 1 ಗಂಟೆಗೆ ಯೋಗಿಕ್​ ಸೈನ್ಸ್​, ಸ್ಟ್ಯಾಟಿಸ್ಟಿಕ್ಸ್​, ಭೌತಶಾಸ್ತ್ರ, ಸೈಬರ್​ ಸೆಕ್ಯೂರಿಟಿ ಪ್ರೋಗ್ರಾಮ್​ ವಿಷಯಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಫೆ.7ರ ಬೆಳಗ್ಗೆ 9ರಿಂದ ಇಂಗ್ಲಿಷ್​, ತುಳು, ಸೋಶಿಯಲ್​ ವರ್ಕ್​, ಎಂಸಿಜೆ, ದೈಹಿಕ ಶಿಕ್ಷಣ ಹಾಗೂ ಮಧ್ಯಾಹ್ನ 1 ಗಂಟೆಗೆ ಬ್ಯುಸಿನೆಸ್​ ಎಡ್​ಮಿನಿಸ್ಟ್ರೆಶನ್​, ಎಂಬಿಎ(ಟಿಟಿಎಂ), ಬಿಬಿಎ(ಟಿಟಿ) ವಿಷಯಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ನೇರ ಸಂದರ್ಶನ ಮಂಗಳೂರು ವಿವಿ ಕುಲಸಚಿವರ ಕಚೇರಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

    ಮಂಗಳೂರಲ್ಲಿ ಇಬ್ಬರು ಪ್ರೇಯಸಿಯರ ಕಣ್ಣೆದುರೇ ಪ್ರಿಯಕರ ಸಾವು! ನಿನ್ನೆ ಸಂಜೆ ನಡೆದೇ ಹೋಯ್ತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts