More

    ದೇಶದ ಸುಭದ್ರ ಭವಿಷ್ಯಕ್ಕೆ ಬೃಹತ್ ಯೋಜನೆ

    ನವದೆಹಲಿ: ‘ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದ ತಕ್ಷಣ ಯಾರೂ ಭಯ ಪಡಬಾರದು. ನಾನು ಯಾರನ್ನೋ ಹೆದರಿಸಲು ಇಲ್ಲವೇ, ಓಡಿಸಲು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಾನು ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇನೆ..’

    -ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಖಾಸಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದ ಪ್ರಮುಖ ಅಂಶಗಳಲ್ಲಿ ಒಂದು. ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ದೇಶದ ಬಗ್ಗೆ ತಮ್ಮ ಮುಂದಿನ ಕನಸುಗಳು ಕುರಿತು ವಿವರಿಸುವ ಜತೆಜತೆಗೆ ವಿಪಕ್ಷಗಳ ಟೀಕೆಗೂ ತಕ್ಕ ಉತ್ತರ ನೀಡಿದರು. ಸರ್ಕಾರ ಯಾವಾಗಲೂ ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಿರುತ್ತದೆ. ಆದರೆ ಎಲ್ಲವನ್ನೂ ಮಾಡಿದ್ದೇವೆ ಎಂದು ನಾನು ಭಾವಿಸುತ್ತಿಲ್ಲ. ಸರಿಯಾದ ದಿಕ್ಕಿನಲ್ಲಿ ಎಲ್ಲವನ್ನೂ ಮಾಡಲು ನಾನು ಪ್ರಯತ್ನಿಸಿದ್ದೇನೆ. ಅದಾಗ್ಯೂ ನಾನು ಮಾಡಬೇಕಾದ್ದು ಇನ್ನೂ ಬೇಕಾದಷ್ಟಿವೆ. ದೇಶದ ಹಲವು ಅಗತ್ಯಗಳನ್ನು ಹೊಂದಿದೆ. ಪ್ರತಿ ಕುಟುಂಬದ ಕನಸುಗಳನ್ನು ನಾನು ಹೇಗೆ ಈಡೇರಿಸಲಿ? ಅದೇ ಕಾರಣಕ್ಕೆ ನಾನು ಇದು ಬರೀ ಟ್ರೇಲರ್ ಎನ್ನುತ್ತಿರುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಆಯ್ಕೆಯೂ ಹೌದು, ಅವಕಾಶವೂ ಹೌದು..

    ಪ್ರಸಕ್ತ ಲೋಕಸಭಾ ಚುನಾವಣೆ ಸೋತ ಕಾಂಗ್ರೆಸ್ ಮಾದರಿ ಹಾಗೂ ಸಾಧನೆ ತೋರಿರುವ ಬಿಜೆಪಿ ಮಾದರಿಯ ನಡುವೆ ಮತದಾರರಿಗೆ ಇರುವ ಆಯ್ಕೆ ಆಗಿದೆ. ಆ ನಿಟ್ಟಿನಲ್ಲಿ ಆಯ್ಕೆ ಮಾಡಲು ಈ ಚುನಾವಣೆ ದೊಡ್ಡ ಅವಕಾಶವಾಗಿದೆ. ಕಾಂಗ್ರೆಸ್ ಐದಾರು ದಶಕಗಳ ಕಾಲ ಕೆಲಸ ಮಾಡಿದ್ದರೆ, ನಾನು ಬರೀ ಹತ್ತು ವರ್ಷಗಳಷ್ಟೇ ಕೆಲಸ ಮಾಡಿದ್ದೇನೆ. ಯಾವುದೇ ಕ್ಷೇತ್ರದಲ್ಲೂ ಇವೆರಡನ್ನೂ ಹೋಲಿಕೆ ಮಾಡಿ ನೋಡಿ. ಒಂದು ವೇಳೆ ಎಲ್ಲಾದರೂ ನ್ಯೂನತೆ ಕಂಡಿದ್ದರೆ, ಅಲ್ಲಿ ನಮ್ಮ ಪ್ರಯತ್ನಗಳಲ್ಲಿ ಯಾವುದೇ ನ್ಯೂನತೆ ಇದ್ದಿರುವುದಿಲ್ಲ ಎಂದು ಮೋದಿ ಹೇಳಿದರು. ನನಗೆ ಸಿಕ್ಕ ಆ ಹತ್ತು ವರ್ಷಗಳಲ್ಲೂ ಎರಡು ವರ್ಷಗಳು ಕೋವಿಡ್​ನಲ್ಲೇ ಕಳೆದುಹೋದವು. ಆ ಬಳಿಕವೂ ಕರೊನೋತ್ತರ ಪರಿಣಾಮಗಳಲ್ಲಿ ಒಂದಷ್ಟು ಸಮಯ ಕಳೆದುಹೋದವು. ಇವುಗಳ ನಡುವೆಯೂ ಹೋಲಿಸಿ ನೋಡಿದರೆ ನಮ್ಮ ಮಾದರಿಯಲ್ಲಿ ವೇಗವೂ ಇದೆ, ಪ್ರಮಾಣವೂ ಇದೆ. ನಾವು ಇದೇ ಮಾದರಿಯ ಪಥದಲ್ಲಿ ಸಾಗುತ್ತೇವೆ. ಮುಂದಿನ ಅವಧಿಯಲ್ಲಿ ಈ ಪ್ರಮಾಣ-ವೇಗ ಹೆಚ್ಚಿಸಿಕೊಳ್ಳುವುದು ನನ್ನ ಗುರಿ ಎಂದರು.

    ದೇಶದ ಸುಭದ್ರ ಭವಿಷ್ಯಕ್ಕೆ ಬೃಹತ್ ಯೋಜನೆ

    2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ

    ಭಾರತವನ್ನು 2047ರ ಸುಮಾರಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಕನಸಿನ ಕುರಿತು ಮಾತನಾಡಿ ಪ್ರಧಾನಿ ಮೋದಿ, ಗುಜರಾತ್​ನಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗಿನ ಅನುಭವ ಹಂಚಿಕೊಂಡರು. ಗುಜರಾತ್​ನಲ್ಲಿ ನಾನು ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿದ್ದು, ಅನುಭವಗಳಿಗೆ ಒಗ್ಗಿಕೊಂಡಿದ್ದೇನೆ. ಆಗೆಲ್ಲ ಚುನಾವಣೆಗಳು ನಡೆಯುತ್ತಿದ್ದಾಗ ನನ್ನ ರಾಜ್ಯದಿಂದ 30-40 ಹಿರಿಯ ಅಧಿಕಾರಿಗಳು ವೀಕ್ಷಕರಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರು. ಹಾಗೆ ಹೋದವರು 40-50 ದಿನ ಅಲ್ಲೇ ಇರುತ್ತಿದ್ದರು. ಆಗೆಲ್ಲ ರಾಜ್ಯವನ್ನು ಹೇಗೆ ನಡೆಸುವುದು ಎಂಬ ಚಿಂತೆ ನನಗಾಗುತ್ತಿತ್ತು. ಏಕೆಂದರೆ ದೇಶದಲ್ಲಿ ಆಗಾಗ ಚುನಾವಣೆ ನಡೆಯುವುದು ಸಹಜ, ನನ್ನ ಅಧಿಕಾರಿಗಳು ವೀಕ್ಷಕರಾಗಿ ಹೋಗುತ್ತಿರಲೇಬೇಕು. ಆಗ ನಾನು ಚುನಾವಣೆ ಬಂದರೆ ಅದನ್ನು ರಜಾ ದಿನಗಳೆಂದು ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದೆ. ಅಧಿಕಾರಿಗಳನ್ನು ಮೊದಲೇ ಇಂಥ ಕೆಲಸ ಮಾಡಿ ಎಂದು ತೊಡಗಿಸಿಬಿಡುತ್ತಿದ್ದೆ. ಇದನ್ನು ಮುಂದಿನ ಸರ್ಕಾರಕ್ಕೆ ಮಾಡಿ ಎನ್ನುತ್ತಿದ್ದೆ, ನಾನು ನೂರು ದಿನಗಳ ಕೆಲಸದ ಯೋಜನೆ ಹಾಕಿಕೊಂಡಿರುತ್ತಿದ್ದೆ ಎಂದರು. 2047ರ ವಿಕಸಿತ ಭಾರತ ಕುರಿತ ಯೋಜನೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ ಎಂದ ಮೋದಿ, ಮುಂದಿನ ಅವಧಿಗೆ ಪ್ರಧಾನಿ ಆಗಿ ಆಯ್ಕೆಯಾದರೆ ಮೊದಲ ನೂರು ದಿನಗಳಲ್ಲಿ ಏನೇನು ಮಾಡಬೇಕು ಎನ್ನುವ ಕುರಿತು ನಾನು ಈಗಲೇ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದೂ ಹೇಳಿದರು.

    ವಿಕಸಿತ ಭಾರತಕ್ಕಾಗಿ ಹೀಗಿದೆ ಕಾರ್ಯವೈಖರಿ…

    ವಿಕಸಿತ ಭಾರತಕ್ಕಾಗಿ ದೇಶದ ಜನರಿಂದ ಅಭಿಪ್ರಾಯ-ಸಲಹೆಗಳನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳು, ಎನ್​ಜಿಒಗಳನ್ನು ಸಂರ್ಪಸಲಾಗಿದ್ದು, ಈಗಾಗಲೇ 15 ಲಕ್ಷ ಮಂದಿ ಮುಂದಿನ 25 ವರ್ಷಗಳಲ್ಲಿ ತಮ್ಮ ದೇಶ ಹೇಗಿರಬೇಕು ಎಂದು ನೋಡಲು ಬಯಸುತ್ತಾರೆ ಎಂಬ ಕುರಿತು ಯೋಚನೆಗಳನ್ನು ಹಂಚಿಕೊಂಡಿದ್ದಾರೆ. ಆ ಮಾಹಿತಿಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ವರ್ಗೀಕರಿಸಲಾಗಿದೆ. ಅವುಗಳನ್ನಾಧರಿಸಿ ಪ್ರತಿ ಇಲಾಖೆಯಲ್ಲೂ ಕೆಲಸಗಳಾಗುವಂತೆ ಮಾಡಲು ದಕ್ಷ ಅಧಿಕಾರಿಗಳ ತಂಡ ರಚಿಸಿದ್ದೇನೆ. 2047ರ ವಿಕಸಿತ ಭಾರತದ ನಿಟ್ಟಿನಲ್ಲಿ ಮುಂದಿನ ಅವಧಿಯಲ್ಲಿ ಹೇಗೆ ಕೆಲಸ ಮಾಡಬಹುದು? ಮುಂದಿನ 25 ವರ್ಷಗಳಲ್ಲಿ ಏನು ಮಾಡಬಹುದು? ಎಂಬ ಕುರಿತೆಲ್ಲ ಅವರೊಂದಿಗೆ ರ್ಚಚಿಸಿದ್ದು, ಅವರು ಆ ಬಗ್ಗೆ ಹೆಚ್ಚೂಕಡಿಮೆ ಎರಡೂವರೆ ಗಂಟೆಗಳ ಪ್ರೆಸೆಂಟೇಷನ್ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ನಂಬಿಕೆಯೇ ದೊಡ್ಡ ಜವಾಬ್ದಾರಿ

    ಅಧಿಕಾರದಲ್ಲಿರುವಾಗ ಒಂದು ಕ್ಷಣವನ್ನೂ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದ ಮೋದಿ, 2019ರಲ್ಲಿ ಕಾರ್ಯನಿರ್ವಹಿಸಿದ್ದನ್ನು ವಿವರಿಸಿದರು. 2019ರಲ್ಲಿ ನಮ್ಮ ಬಗ್ಗೆ ತುಂಬ ಕಡಿಮೆ ಜನರು ಗಮನ ಹರಿಸುತ್ತಿದ್ದರು. ಆ ಸಮಯದಲ್ಲೂ ನೂರು ದಿನಗಳ ಕೆಲಸ ನೀಡಿ ನಾನು ಚುನಾವಣೆಗೆ ಹೋದೆ. ವಾಪಸ್ ಬಂದಾಗ ನೂರು ದಿನಗಳ ಒಳಗೆ 370ನೇ ವಿಧಿ ರದ್ದುಪಡಿಸಿದೆ. ತ್ರಿವಳಿ ತಲಾಖ್ ರದ್ದುಗೊಳಿಸಿ ನನ್ನ ಸಹೋದರಿಯರನ್ನು ರಕ್ಷಿಸಿದೆ, ಇದು ಕೂಡ ಮೊದಲ ನೂರು ದಿನಗಳಲ್ಲೇ ಆಗಿದ್ದು. ನಂಬಿಕೆ ಎನ್ನುವುದು ದೊಡ್ಡ ಶಕ್ತಿ. ಅದೂ ಭಾರತದಂಥ ದೇಶದಲ್ಲಿ ನಾನು ನಂಬಿಕೆಯನ್ನು ಜವಾಬ್ದಾರಿಯಾಗಿ ನೋಡುತ್ತೇನೆ. ಅದೇ ಕಾರಣಕ್ಕೆ ನಾನು ಇದನ್ನು ಪದೇಪದೇ ಹೇಳುತ್ತೇನೆ ಎನ್ನುವ ಮೂಲಕ ಮೋದಿ, ‘ಜನರು ಇನ್ನೊಮ್ಮೆ ನನ್ನನ್ನು ನಂಬಿ’ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದರು.

    ಶತಮಾನದ ಸಂಭ್ರಮ

    2047ರ ವಿಕಸಿತ ಭಾರತ ಎಂದರೆ ಅದು ಶತಮಾನದ ಸಂಭ್ರಮ. ಅಂದಿಗೆ ಸ್ವಾತಂತ್ರ್ಯ ಗಳಿಸಿ ನೂರು ವರ್ಷಗಳಾಗಿರುತ್ತವೆ. ಇಂಥ ಮೈಲಿಗಲ್ಲು ನಿಜಕ್ಕೂ ಸಂಭ್ರಮದ ಸಮಯ. ಇದು ಹೊಸ ನಿರ್ಣಯಗಳಿಗೆ ಪ್ರೇರಕ. ಪ್ರತಿ ಸಂಸ್ಥೆ, ಪ್ರತಿಯೊಬ್ಬರಲ್ಲೂ ಗುರಿ ಇರಬೇಕು. ‘ನಾನು ನನ್ನ ಗ್ರಾಮದ ಮುಖ್ಯಸ್ಥ, 2047ರ ವೇಳೆಗೆ ನನ್ನ ಗ್ರಾಮದಲ್ಲಿ ನಾನಿಷ್ಟು ಮಾಡುತ್ತೇನೆ’ ಎಂಬ ಸ್ಪೂರ್ತಿ ದೇಶದಲ್ಲಿ ಮೂಡಬೇಕು. ಸ್ವಾತಂತ್ರ್ಯದ ಶತಮಾನೋತ್ಸವವೇ ಅಂಥದ್ದೊಂದು ದೊಡ್ಡ ಸ್ಪೂರ್ತಿ ಎಂದು ಮೋದಿ ಜನರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಮಾತನಾಡಿದರು.

    ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…

    T20 World Cup: ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮನೋಜ್ ತಿವಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts