More

    ಕೆಆರ್​ಎಸ್ ಡ್ಯಾಂ ಬಳಿ ಗುಂಡು-ತುಂಡಿನ ಭರ್ಜರಿ ಪಾರ್ಟಿ… ಕರೊನಾ ಭೀತಿಗೂ ಕ್ಯಾರೆ ಎನ್ನದ ಜನರಿವರು!

    ಮಂಡ್ಯ: ಕರೊನಾ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಕೆಆರ್​ಎಸ್ ಡ್ಯಾಂ ಬಳಿ ಭರ್ಜರಿ ಪಾರ್ಟಿ ನಡೆದಿದೆ. ಸೋಂಕು ಹರಡುವ ಭೀತಿ ಇದ್ದರೂ.. 144 ಸೆಕ್ಷನ್ ಜಾರಿಯಲ್ಲಿದ್ದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ಮೈಸೂರು ಮೂಲದ ವ್ಯಕ್ತಿಗಳು ಪೆಂಡಾಲ್ ಹಾಕಿ, ಆರ್ಕೆಸ್ಟ್ರಾ ಧ್ವನಿವರ್ಧಕ ಬಳಸಿ ಗುಂಡು-ತುಂಡು ಪಾರ್ಟಿ ಆಯೋಜಿಸಿದ್ದರು.

    ಬುಧವಾರ ರಾತ್ರಿ 10.15ರ ಸುಮಾರಿನಲ್ಲಿ ಕೆಆರ್​ಎಸ್​ ಡ್ಯಾಂ ಸಮೀಪದಲ್ಲಿರುವ ಶೇಖರ್ ಎಂಬುವರ ಫಾರಂ ಹೌಸ್ ಬಳಿಯ ಖಾಲಿ ಜಾಗದಲ್ಲಿ ಪಾರ್ಟಿ ನಡೆಯುತಿತ್ತು. ಮೈಸೂರಿನ ವಾಸಿಗಳಾದ ಭರತ್ ರಾಜ್ ಸೇರಿ 34 ಮಂದಿ ಗುಂಪು ಕಟ್ಟಿಕೊಂಡು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

    ಇದನ್ನೂ ಓದಿರಿ ಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!

    ಕೆಆರ್​ಎಸ್ ಡ್ಯಾಂ ಬಳಿ ಗುಂಡು-ತುಂಡಿನ ಭರ್ಜರಿ ಪಾರ್ಟಿ... ಕರೊನಾ ಭೀತಿಗೂ ಕ್ಯಾರೆ ಎನ್ನದ ಜನರಿವರು!
    ಕೆಆರ್​ಎಸ್ ಡ್ಯಾಂ ಬಳಿ ಶಂಕರ್​ ಅವರ ತೋಟದಲ್ಲಿ ಬುಧವಾರ ರಾತ್ರಿ ನಡೆದ ಗುಂಡು-ತುಂಡಿನ ಪಾರ್ಟಿ.

    ಭರತ್​ರಾಜ್​ ಅವರ ಬರ್ತ್​ ಡೇ ಪಾರ್ಟಿ ಇದಾಗಿದ್ದು, ಆರ್ಕೆಸ್ಟ್ರಾ ವ್ಯವಸ್ಥೆಯೂ ಇತ್ತು. ಕರೊನಾ ಸೋಂಕು ಹರಡುವ ಸಾಧ್ಯತೆ ಇದ್ದರೂ ಎಲ್ಲರೂ ಒಟ್ಟಿಗೆ ಕುಳಿತು ಮಾಂಸಾಹಾರ ಮತ್ತು ಮದ್ಯ ಸೇವಿಸುತ್ತ ಮೋಜು- ಮಸ್ತಿ ಮಾಡುತ್ತಿದ್ದರು.

    ಈ ಪಾರ್ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಸಾಗರ ಪೊಲೀಸ್​ ಠಾಣೆ ಪಿಎಸ್ಐ ನವೀನ್ ಗೌಡ ಅವರು ಪಾರ್ಟಿಯಲ್ಲಿದ್ದವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡರು. ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿರಿ ಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?

    ಮಹಾಮಾರಿ ಕರೊನಾ ಎಲ್ಲೆಡೆ ರಣಕೇಕೆ ಹಾಕುತ್ತಿದೆ. ಇದನ್ನು ಮಣಿಸಲು ವೈದ್ಯಲೋಕ, ಸರ್ಕಾರಗಳು ಹೋರಾಡುತ್ತಿವೆ. ಈ ನಿಟ್ಟಿನಲ್ಲಿ ಸಭೆ, ಸಮಾರಂಭಗಳಿಗೂ ಬ್ರೇಕ್ ಹಾಕಲಾಗಿದೆ. ಆದರೆ ಇದನ್ನ ಉಲ್ಲಂಘಿಸಿ ಕೆಆರ್‍ಎಸ್ ಡ್ಯಾಂ ಬಳಿ ಭರ್ಜರಿ ಪಾರ್ಟಿ ನಡೆಸಿದ್ದು ಮಾತ್ರ ವಿಪರ್ಯಾಸ.

    ಇದನ್ನೂ ಓದಿರಿ ಆಹ್ವಾನ ಪತ್ರಿಕೆಯಲ್ಲೇ ಮದುವೆಗೆ ಬರೋ ರಿಸ್ಕ್​ ಬೇಡ ಅನ್ನೋದಾ ಈ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts