More

    ಹಾಸನದಲ್ಲಿ ಮೇ 30ರಂದು ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆ ಯೋಜಿಸಲಾಗಿದೆ

    ಮೈಸೂರು: ಹಾಸನದಲ್ಲಿ ಮೇ 30ರಂದು ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆ ಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

    ಈ ಸಂಬಂಧ ನನಗೆ ಹೇಳಿದ್ದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳಿಸುತ್ತೇನೆ. ಈ ರೀತಿಯ ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹಾಸನದಲ್ಲಿ ಪ್ರತಿಭಟನೆ ಮಾಡುವ ಬದಲಿಗೆ ಸಂತ್ರಸ್ಥರ ಮನೆಗೆ ತೆರಳಿ ಧೈರ್ಯ ತುಂಬಲಿ. ಅದನ್ನು ಬಿಟ್ಟು ಪ್ರತಿಭಟನೆ ಹೆಸರಿಯನಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದವರನ್ನು ಅಭಿನಂದಿಸಲು ಹೋಗುತ್ತಿದ್ದಾರೆಯೇ ಎಂದು ಕಿಡಿಕಾರಿದರು.

    ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಯಾವ್ಯಾವ ಅಧಿಕಾರಿಗಳನ್ನು ಕರೆದು ಮಾತನಾಡುತ್ತಾರೆ. ಯಾವ ಸಂದೇಶ ನೀಡುತ್ತಾರೆ ಎಂಬುದು ನಮಗೂ ಗೊತ್ತಿದೆ. ಅಲ್ಲಿರುವವರಲ್ಲಿ ನಮ್ಮ ಅಭಿಮಾನಿಗಳು ಇದ್ದಾರೆ. ಹಾಸನಕ್ಕೆ ಅಂಗನವಾಡಿ ಕಾರ್ಯಕರ್ತರನ್ನು ಕಳುಹಿಸುವ ವಿಚಾರವನ್ನೇ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

    ವಕೀಲರ ಸಲಹೆ ಕೇಳದೇ ನೈತಿಕಕತೆ ಉಳಿಸಿಕೊ

    ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಈಗ ರೇವಣ್ಣನ ಸಂಪರ್ಕದಲ್ಲೂ ಇಲ್ಲ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತಾ ಸುದ್ದಿ ಹಬ್ಬಿಸುತ್ತಾರೆ. ಯಾವ ಗ್ರಹಚಾರ ನಮಗೆ. ಪ್ರಜ್ವಲ್ ವಿದೇಶಕ್ಕೆ ಹೋಗೋದು ಅವತ್ತೆ ಗೊತ್ತಾಗಿದ್ದರೆ ತಡೆಯುತ್ತಿದೆ. ಪ್ರಜ್ವಲ್ ಭಯದಿಂದ ಬರುತ್ತಿಲ್ಲ. ಪ್ರಜ್ವಲ್ ವಕೀಲರ ಸಲಹೆ ಕೇಳದೇ ನೈತಿಕಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬರುವಂತೆ ಮತ್ತೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts