More

    18 ಕೋಮಿನ ಜನರ ಸಮ್ಮುಖದಲ್ಲಿ ಗೂಳೂರು ಮಹಾಗಣಪತಿ ವಿಸರ್ಜನೆ ಸಂಪನ್ನ: ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ

    ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವೈಭವಯುತವಾಗಿ ಜರುಗಿತು.

    ಬಲಿಪಾಢ್ಯಮಿಯಂದು ಕಣ್ಣುಧಾರಣೆಯೊಂದಿಗೆ (ನ.5ರಂದು) ಆರಂಭವಾದ ಗಣೇಶ ಉತ್ಸವವು ಡಿ.10ರವರೆಗೆ ನಡೆದಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಆರಂಭವಾದ ಉತ್ಸವವು ಭಾನುವಾರ ಸಂಜೆ ಸಂಪನ್ನಗೊಂಡಿತು.

    18 ಕೋಮಿನ ಜನರ ಸಮ್ಮುಖದಲ್ಲಿ ಗೂಳೂರು ಮಹಾಗಣಪತಿ ವಿಸರ್ಜನೆ ಸಂಪನ್ನ: ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ

    ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದರು. ಉತ್ಸವದ ಬಳಿಕ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೂಳೂರು ಕೆರೆಯಲ್ಲಿ ಸಂಜೆ ಸೂರ್ಯಾಸ್ತಮಾನಕ್ಕೂ ಮುನ್ನ ವಿಸರ್ಜಿಸಲಾಯಿತು. ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ ಗಮನಸೆಳೆಯಿತು.

    18 ಕೋಮಿನ ಜನರ ಸಮ್ಮುಖದಲ್ಲಿ ಗೂಳೂರು ಮಹಾಗಣಪತಿ ವಿಸರ್ಜನೆ ಸಂಪನ್ನ: ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ

    ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಹಾಗೂ ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾ ಮಂಗಳಾರತಿ ನೆರವೇರಿಸಲಾಯಿತು. 18 ಕೋಮಿನ ಜನರು ಮಹಾಗಣಪತಿಯನ್ನು ದೇವಾಲಯಲದ ಗೋಪುರದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ರಾತ್ರಿ 11.30ರವರೆಗೂ ಮೆರವಣಿಗೆ ನಡೆಸಿದರು.

    18 ಕೋಮಿನ ಜನರ ಸಮ್ಮುಖದಲ್ಲಿ ಗೂಳೂರು ಮಹಾಗಣಪತಿ ವಿಸರ್ಜನೆ ಸಂಪನ್ನ: ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ

    ವರ್ಷದಲ್ಲಿ 2ನೇ ಬಾರಿ ಉತ್ಸವ!: ಗಣೇಶೋತ್ಸವವು ಪ್ರತಿ ವರ್ಷ 1 ತಿಂಗಳು ನಡೆಯುತ್ತಿತ್ತು. ಕಳೆದ ಬಾರಿ ಗ್ರಾಪಂ ಚುನಾವಣೆ ಹಾಗೂ ಅಕಾಲಿಕ ಮಳೆ ಕಾರಣ 2 ತಿಂಗಳು ವಿಸರ್ಜನಾ ಮಹೋತ್ಸವವನ್ನು ಮುಂದೂಡಲಾಗಿತ್ತು. 2021ರ ಜ.23ರಂದು ಶನಿವಾರ ರಾತ್ರಿಯಿಂದ ಆರಂಭವಾದ ಮಹಾಗಣಪತಿ ಉತ್ಸವವು ಎರಡು ದಿನ ನಡೆದಿತ್ತು. ಈ ವರ್ಷ ಮತ್ತೆ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವವು ನಡೆದಿದ್ದು 2ನೇ ಬಾರಿ ಮಹಾಗಣಪತಿ ಉತ್ಸವ ನಡೆದಿರುವುದು ವಿಶೇಷವೆನಿಸಿದೆ.

    ಬಿಆರ್​ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು

    ನಾನು ಇರೋವರೆಗೂ ರಂಗನಾಥ್​ ಅವರೇ ಕುಣಿಗಲ್​ನ ಕಾಂಗ್ರೆಸ್​ ಅಭ್ಯರ್ಥಿ ಎಂದ ಡಿಕೆಸು​ ವಿರುದ್ಧ ಎಸ್​ಪಿಎಂ ಗರಂ

    ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು: ಡೆತ್​ನೋಟ್​ನ ಜಾಡು ಹಿಡಿದು ಹೋಗುತ್ತಿದ್ದಂತೆ ಆ ಲೇಡಿಯ ಸ್ಫೋಟಕ ರಹಸ್ಯ ಬಯಲು

    ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts